ಬೇಳೆ ಇಲ್ಲದೆ ರುಬ್ಬಿದ ತಕ್ಷಣ ಮೆದು ದೋಸೆ ಮಾಡುವುದು ಹೇಗೆ ಗೊತ್ತೇ??? ದಿಡೀರ್ ಎಂದು ಮಾಡಿ ನೋಡಿ.

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಬೆಳಗ್ಗೆ ದೋಸೆಯನ್ನ ಉಪಹಾರಕ್ಕೆ ಮಾಡೇ ಮಾಡ್ತೇವೆ. ಆದ್ರೆ ಇದು ಬಿಸಿ ಬಿಸಿಯಾಗಿದ್ದಾಗ ತಿನ್ನೋದಕ್ಕೆ ರುಚಿ. ಬಿಸಿ ಆರಿದ ಮೇಲೆ ಗಟ್ಟಿಯಾಗಲೂಬಹುದು. ಇದಕ್ಕೊಂದು ಉಪಾಯ ಇಲ್ಲಿದೆ. ಸಂಜೆವರೆಗೆ ಇಟ್ಟರೂ ಮೆದುವಾಗಿಯೇ ಇರುವಂಥ ದೋಸೆ ಮಾಡುವ ವಿಧಾನವನ್ನು ನಾವಿಲ್ಲಿ ಹೇಳಿದ್ದೇವೆ ಮುಂದೆ ಓದಿ. ಮೆದು ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು: ಮೆದು ದೋಸೆ ಮಾಡೋದಕ್ಕೆ ಕೇವಲ 3 ವಸ್ತುಗಳು ಸಾಕು. 3 ಕಪ್ ಅಕ್ಕಿ, ಕಾಲು ಕಪ್ ತಳ್ಳಗಿನ (ಪೇಪರ್)ಅವಲಕ್ಕಿ, ಅರ್ಧ ಕಪ್ ತೆಂಗಿನ ತುರಿ ಹಾಗೂ ಉಪ್ಪು ರುಚಿಗೆ.

ಮೆದು ದೋಸೆ ಮಾಡುವ ವಿಧಾನ: ಈ ದೋಸೆಯನ್ನು ಅತ್ಯಂತ ಸುಲಭವಾಗಿ ಮಾಡಬಹುದು. ಮೊದಲು 3 ಕಪ್ ಅಕ್ಕಿಯನ್ನು ನೀರಿನಲ್ಲಿ ನೆನೆಹಾಕಿ. 3ರಿಂದ 4 ಗಂಟೆಗಳ ಕಾಲ ನೆನೆಸಿ. ರಾತ್ರಿ ನೆನೆಯಿಟ್ಟು ಬೆಳಗ್ಗೆ ಮಾಡಿದ್ರೆ ಇನ್ನೂ ಉತ್ತಮ. ಒಂದು ಪಾತ್ರೆಯಲ್ಲಿ ತೆಳುವಾದ ಅವಲಕ್ಕಿಯನ್ನು ಹಾಕಿ ಸ್ವಲ್ಪ ನೀರನ್ನು ಹಾಕಿ 2 ನಿಮಿಷ ನೆನೆಸಿ. ಈಗ ನೆನೆಸಿಟ್ಟ ಅಕ್ಕಿಯನ್ನು ಒಂದು ಮಿಕ್ಸರ್ ಜಾರ್ ಗೆ ಹಾಕಿ. ಇದಕ್ಕೆ ನೆನೆಸಿದ ಅವಲಕ್ಕಿಯನ್ನು ಹಾಕಿ. ಜೊತೆಗೆ ತಾಜಾ ತೆಂಗಿನ ತುರಿಯನ್ನು ಸೇರಿಸಿ. ತೆಂಗಿನತುರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರಿಸಬಹುದು. ನಂತರ ನಿಮ್ಮ ರುಚಿಗೆ ಬೇಕಾದಷ್ಟು ಉಪ್ಪನ್ನು ಹಾಕಿ ರುಬ್ಬಲು ಬೇಕಾದಷ್ಟು ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಸಾಮಾನ್ಯ ದೋಸೆ ಹಿಟ್ಟಿನ ಹದಕ್ಕೆ ಬಂದರೆ ಸಾಕು.

ಈಗ ಒಂದು ಮಣ್ಣಿನ ತವಾವನ್ನು ತೆಗೆದುಕೊಂಡು ಚೆನ್ನಾಗಿ ಕಾಯಿಸಿಕೊಳ್ಳಿ. ಈಗ ದೋಸೆ ಹಿಟ್ಟನ್ನು ಒಂದೆರಡು ಸೌಟಿನಷ್ಟು ಹುಯ್ಯಿರಿ. ಒಂದು ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿ. ನಂತರ ಮುಚ್ಚಳ ತೆಗೆದು ನಿಧಾನವಾಗಿ ದೋಸೆಯನ್ನು ತೆಗೆಯಿರಿ. ಮಣ್ಣಿನ ತವಾದ ಬದಲಿಗೆ ನೀವು ಮಾಮೂಲಿ ದೋಸೆಗೆ ಬಳಸುವ ತವಾ ಬಳಸಬಹುದು. ಅಗತ್ಯವಿದ್ದರೆ ಮಾತ್ರ ಸ್ವಲ್ಪ ಎಣ್ಣೆಯನ್ನು ತವಾಗೆ ಲೇಪಿಸಿಕೊಳ್ಳಬಹುದು. ಇದೀಗ ರುಚಿಯಾದ ಮೆದು ದೋಸೆ ರೆಡಿ. ನೀವು ನಿಮಗಿಷ್ಟವಾದ ಯಾವುದೇ ಚಟ್ನಿಯ ಜೊತೆ ಇದನ್ನು ಸವಿಯಬಹುದು. ನೀವು ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ರುಚಿ ಹೇಗಿದೆ ಅಂತ ಕಮೆಂಟ್ ಮಾಡಿ ತಿಳಿಸಿ.

Comments are closed.