ಅಧಿಕೃತವಾಗಿ ಧಾರವಾಹಿಯಿಂದ ಹೊರನಡೆದ ಘೋಷಣೆ ಮಾಡಿದ ಗಟ್ಟಿಮೇಳ ನಟಿ, ಕಾರಣವೇನಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಲ್ಲದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿರುವ ಗಟ್ಟಿಮೇಳ ಧಾರವಾಹಿಯ ಕನ್ನಡದಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದು ಕೊಂಡಿರುವ ಅಪರೂಪದ ಧಾರವಾಹಿಗಳಲ್ಲಿ ಒಂದಾಗಿದೆ. ಈ ದಾರವಾಹಿ ಬಿಡುಗಡೆಯಾದ ಮೊದಲನೇ ವಾರದಿಂದಲೂ ಕೂಡ ಇಲ್ಲಿಯವರೆಗೂ ಕನ್ನಡದ ಟಾಪ್ ಐದರ ಧಾರಾವಾಹಿಗಳಲ್ಲಿ ಒಂದಲ್ಲ ಒಂದು ಸ್ಥಾನವನ್ನು ತನಗಾಗಿ ಖಚಿತ ಪಡಿಸಿಕೊಂಡಿದೆ ಎಂದರೆ ಲೆಕ್ಕಾಚಾರ ಮಾಡಿಕೊಳ್ಳಿ ಧಾರವಾಹಿಗೆ ಎಷ್ಟು ಜನ ಪ್ರೇಕ್ಷಕರು ಫಿದಾ ಆಗಿದ್ದಾರೆ ಎಂದು.

ಇನ್ನು ಹೀಗೆ ಜನಪ್ರಿಯತೆ ಪಡೆದು ಕೊಂಡಿರುವ ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಸಿಗುವುದೇ ಒಂದು ರೀತಿಯ ಅದೃಷ್ಟ, ಧಾರವಾಹಿಗಳಲ್ಲಿ ನಟಿಸುವ ಮೂಲಕ ಕಲಾವಿದರು ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ತಮ್ಮ ಅಭಿಮಾನಿಗಳನ್ನು ಪಡೆಯುತ್ತಾರೆ ಹಾಗೂ ತಮ್ಮ ಗುರುತನ್ನು ಸ್ಥಾಪಿಸಿಕೊಳ್ಳುತ್ತಾರೆ. ಹೀಗೆ ಗಟ್ಟಿಮೇಳ ಧಾರಾವಾಹಿ ಇಂದ ಸಾಕಷ್ಟು ಜನಪ್ರಿಯತೆಯನ್ನು ಪಡೆದು ಕೊಂಡ ನಟಿಯೊಬ್ಬರು ಇದೀಗ ಅಧಿಕೃತವಾಗಿ ತಾವು ಗಟ್ಟಿಮೇಳ ಧಾರವಾಹಿ ಇಂದ ಹೊರಬಂದಿದ್ದೇವೆ ಎಂದು ತಿಳಿಸಿದ್ದಾರೆ.

ಈ ಕುರಿತು ಪ್ರಶ್ನೆ ಮಾಡಿದಾಗ ನಟಿ ತಮ್ಮದೇ ಉತ್ತರಗಳನ್ನು ನೀಡಿದ್ದಾರೆ, ಹೌದು ಸ್ನೇಹಿತರೆ ಗಟಿಮೇಳ ದಾರವಾಹಿ ಎಲ್ಲಿ ಆರತಿ ಪಾತ್ರಧಾರಿ ನಟಿ ಅಶ್ವಿನಿ ರವರು ಇದೀಗ ಧಾರವಾಹಿಯಿಂದ ಹೊರ ನಡೆದಿದ್ದೇನೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಖಚಿತ ಪಡಿಸಿದ್ದಾರೆ ಈ ಕುರಿತು ಪ್ರಶ್ನೆ ಮಾಡಿದಾಗ, ಎಲ್ಲಾ ಕಡೆ ಸಮಸ್ಯೆಗಳು ಇದ್ದೇ ಇರುತ್ತವೆ ಎಲ್ಲಾ ಸಮಸ್ಯೆಗಳನ್ನು ನಾವು ಎಲ್ಲರ ಮುಂದೆ ಹೇಳಿಕೊಳ್ಳಲು ಸಾಧ್ಯವಿಲ್ಲ ಹಾಗೆಂದು ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಕೂಡ ಸಿಗುವುದಿಲ್ಲ ಆದ ಕಾರಣದಿಂದ ನಾನು ಗಟ್ಟಿಮೇಳ ಧಾರವಾಹಿ ತಂಡದಿಂದ ಹೊರ ಬಂದಿದ್ದೇನೆ, ಎಲ್ಲರೂ ತೆಲುಗು ಧಾರವಾಹಿಯಲ್ಲಿ ನಟನೆ ಮಾಡುತ್ತಿರುವ ಕಾರಣ ಎನ್ನುತ್ತಿದ್ದಾರೆ ಆದರೆ ನನಗೆ ಯಾವುದೇ ಡೇಟ್ ಗಳ ತೊಂದರೆ ಆಗಿಲ್ಲ, 15 ದಿನ ಹೈದರ್ ಬಾದ್ ನಲ್ಲಿ ಇರುತ್ತೇನೆ ಇನ್ನು 15 ಕನ್ನಡ ಧಾರವಾಹಿಗಳಲ್ಲಿ ನಟಿಸಬಹುದಾಗಿದೆ, ಆದಕಾರಣ ತೆಲುಗಿನಲ್ಲಿ ಅವಕಾಶ ಸಿಕ್ಕ ತಕ್ಷಣ ನಾನು ಬಿಡುತ್ತಿಲ್ಲ ಎಂದು ಹೇಳಿದ್ದಾರೆ.

Comments are closed.