ಬಿಗ್ ನ್ಯೂಸ್: ಮೀನುಗಾರಿಕೆ ಇಲಾಖೆಯಲ್ಲಿ 1000 ಕ್ಕೂ ವಿವಿಧ ಅಧಿಕ ಹುದ್ದೆಗಳಿಗನ್ನು ಭರ್ತಿ ಮಾಡಲು ನಿರ್ಧಾರ. ನೀವು ಅಪ್ಲೈ ಮಾಡಬಹುದು.

ನಮಸ್ಕಾರ ಸ್ನೇಹಿತರೇ, ಇಂದು ಹಲವು ಕ್ಷೇತ್ರಗಳಲ್ಲಿ ಖಾಲಿ ಇರುವ ಉದ್ಯೋಗ ಭರ್ತಿಗೆ ಪ್ರಕ್ರಿಯೆಗಳು ನಡೆಯುತ್ತಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸುತ್ತಿದ್ದಾರೆ. ಸದ್ಯ ಸಾಕಷ್ತು ಉದ್ಯೋಗ ಖಾಲಿ ಇರುವ ಮೀನುಗಾರಿಕೆ ಇಲಾಖೆಯ ಹುದ್ದೆ, ನಿಯಮಗಳ ಬಗ್ಗೆ ನಾವಿಲ್ಲಿ ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ.

ರಾಜ್ಯದ ಮೀನುಗಾರಿಕೆ ಇಲಾಖೆಯಲ್ಲಿ ಸದ್ಯ 1140 ಹುದ್ದೆಗಳು ಖಾಲಿ ಇವೆ. ಎಸ್ ಡಿ ಎ, ಎಫ್ ಡಿ ಎ, ಡ್ರೈವರ್ ಮತ್ತು ಫ್ಯೂನ್ ಹುದ್ದೆಗಳ ನೇಮಕಾತಿ ಆರಂಭವಾಗಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇನ್ನು ಈ ಹುದ್ದೆಯ ಅರ್ಹತೆಯೆಂದರೆ ಎಸ್ ಎಸ್ ಎಲ್ ಸಿ, ಪಿಯುಸಿ, ಡಿಗ್ರಿಯನ್ನು ಪಾಸ್ ಮಾಡಿರುವವರು ಅರ್ಜಿ ಸಲ್ಲಿಸಬಹುದು. ಪ್ಯೂನ್, ವಾಚ್ ಮ್ಯಾನ್, ಐಸ್ ಮಜ್ದೂರ್ ಮತ್ತು ಕ್ಲೀನರ್ ಹುದ್ದೆಗಳು ಖಾಲಿ ಇದ್ದು ಇದಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 17ಸಾವಿರ ಸಂಬಳ ನೀಡಲಾಗುತ್ತದೆ. ಈ ವಿಭಾಗದಲ್ಲಿ ಒಟ್ಟೂ 187 ಹುದ್ದೆಗಳು ಖಾಲಿ ಇವೆ. ಇನು ಇಲ್ಲಿರುವ ಅಡುಗೆ ಮಾಡುವ ಹುದ್ದೆಯೂ ಖಾಲಿ ಇದ್ದು ತಿಂಗಳಿಗೆ 18 ಸಾವಿರದವರೆಗೆ ಸಭಾವನೆ ಪಡೆಯಬಹುದು. ಅಡುಗೆ ಮಾಂಸಾಹಾರ ಅಡುಗೆಯನ್ನು ಕೂಡ ಮಾಡುವುದಕ್ಕೆ ಬರುವುದು ಕಡ್ದಾಯ.

ಫಿಶರೀಸ್ ಫೀಲ್ಡ್ ಮ್ಯಾನ್. 475ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ ಪಾಸ್ ಆಗಿದ್ದು ಕನ್ನಡ ಓದಲು ಬರೆಯಲು ಬರುವವರಾಗಿದ್ದರೆ ಇದಕ್ಕೆ ಅರ್ಜಿ ಸಲ್ಲಿಸಬಹುದು. ದೈಹಿಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. 18600 ಬೇಸಿಕ್ ಸಂಬಳ ಪಡೆಯಬಹುದು. 41 ಡ್ರೈವರ್ ಹುದ್ದೆಗಳು ಖಾಲಿ ಇದ್ದು, ನೀವು 10ನೇ ತರಗತಿ ಪಾಸ್ ಸರ್ಟಿಫಿಕೇಟ್ ಜೊತೆಗೆ ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿರಬೇಕು. ಇನ್ನು ಆಯ್ಕೆಯಾದರೆ ಸಿಗುವ ವೇತನ ತಿಂಗಳಿಗೆ 21400 ರೂಪಾಯಿ.

ಇನ್ನು ಇಲ್ಲಿ ಖಾಲಿ ಇರುವ 48 ಡಾಟಾ ಎಂಟ್ರಿ ಅಸಿಸ್ಟೆಂಟ್ ಹುದ್ದೆಗೆ ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗೆ ಪಿಯುಸಿ ಹಾಗೂ ಸ್ಟೆನೋಗ್ರಾಫರ್ ಅಥವಾ ಟೈಪಿಸ್ಟ್ ಆಗಿರುವ ಸರ್ಟಿಫಿಕೇಟ್ ಬೇಕು. ತಿಂಗಳಿಗೆ 21400ರೂ. ಸಂಬಳವಿರುತ್ತದೆ. ದ್ವಿತೀಯ ದರ್ಜೆ ಸಹಾಯಕರ ಹುದ್ದೆಯೂ ಖಾಲಿ ಇದ್ದು ಇಲ್ಲಿರುವ 93 ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 21400 ರೂ. ತಿಂಗಳ ವೇತನ ನೀಡಲಾಗುತ್ತದೆ. ಹಾಗೆಯೇ ಖಾಲಿ ಇರುವ 95 ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಗಲಿದೆ 35-40ಸಾವಿರ ವೇತನ.

ಇನ್ನು 6 ಹುದ್ದೆಗಳು ರೆಫ್ರಿಜರೇಷನ್ ಮೆಕ್ಯಾನಿಕ್ ಅಥವಾ ಪಂಪ್ ಆಪರೇಟರ್ ಹುದ್ದೆಗಳಾಗಿವೆ ಇವರಿಗೆ ಸಿಗುತ್ತೆ ಬೇಸಿಕ್ 27600 ವೇತನವಾಗಿರುತ್ತದೆ. ಅಭ್ಯರ್ಥಿಗಳು ಡಿಗ್ರಿ ಮುಗಿಸಿರುವುದು ಕಡ್ಡಾಯ. ಎಲೆಕ್ಟ್ರಿಕಲ್ ಅಥವಾ ಮೆಕ್ಯಾನಿಕ್ ಅಥವಾ ರೆಫ್ರಿಜರೇಷನ್ ಅಥವಾ ಏರ್ ಕಂಡೀಷನ್ ವಿಭಾಗದಲ್ಲಿ ಡಿಪ್ಲೊಮಾ ಮಾಡಿರುವವರು ಕೂಡ ಅರ್ಜಿಯನ್ನು ಸಲ್ಲಿಸಬಹುದು. ಇವರಿಗೆ ಬೇಸಿಕ್ ವೇತನ 33000 ರೂಪಾಯಿ ಇರುತ್ತದೆ. ಹಾಗೆಯೇ ಖಾಲಿ ಇರುವ ಹುದ್ದೆ ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಫಿಶರೀಸ್. ಇದರಲ್ಲಿ 188 ಹುದ್ದೆಗಳು ಖಾಲಿ ಇದ್ದು ನೇರ ನೇಮಕಾತಿ ಆಯ್ಕೆ ಇರುತ್ತದೆ. ಬಿ ಎಫ್ ಎಸ್ ಸಿ ಪದವಿಯನ್ನು ಪಡೆದಿರುವವರು ಅರ್ಜಿಯನ್ನು ಸಲ್ಲಿಸಬಹುದು. 40000 ವೇತನ ಇರುತ್ತದೆ. ಇನ್ನು 2-3 ತಿಂಗಳಿನಲ್ಲಿ ಮೀನುಗಾರಿಕೆ ಇಲಾಖೆ ಇದರ ಕುರಿತಾದ ನೋಟಿಫಿಕೇಶನ್ ಹೊರಡಿಸುವ ಸಾಧ್ಯತೆ ಇರುತ್ತದೆ. ನೀವು ಕೂಡ ಇದಕ್ಕೆ ಅರ್ಜಿ ಸಲ್ಲಿಸಬಹುದು. ಈ ಬಗ್ಗೆ ನಿಮ್ಮ ಸ್ನೇಹಿತರಿಗೂ ಮಾಹಿತಿಯನ್ನು ಹಂಚಿಕೊಳ್ಳಿ.

Comments are closed.