ನಾಗರಹಾವು ಚಿತ್ರದ ಮಾರ್ಗರೇಟ್ ಪಾತ್ರಧಾರಿ ಯಾರು ಗೊತ್ತೇ?? ಹಾಗೂ ಈಗ ಅವರು ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ಚಿತ್ರಗಳು ಅಂದಿನ ಕಾಲದಲ್ಲಿ ಜನರ ಮನಸ್ಸನ್ನು ತನ್ನ ಸುಂದರವಾದ ಕಥಾಹಂದರದ ಮೂಲಕ ಗೆದ್ದಿರುತ್ತದೆ. ಅಂದಿನ ಕಾಲದಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರವು ಕೂಡ ಸಾಕಷ್ಟು ಎಲ್ಲರ ಮನಗೆದ್ದು ಕನ್ನಡ ಚಿತ್ರರಂಗದಲ್ಲಿ ಇತಿಹಾಸವನ್ನು ನಿರ್ಮಿಸಿತ್ತು. ಈ ಚಿತ್ರದ ಪಾತ್ರಗಳಾದ ಜಲೀಲ ರಾಮಾಚಾರಿ ಚಾಮಯ್ಯ ಮೇಷ್ಟ್ರು ಅಲಮೇಲು ಪಾತ್ರಗಳು ಕೂಡ ಎಲ್ಲರ ಮನಗೆದ್ದಿದ್ದವು. ಕೇವಲ ಇಷ್ಟು ಪಾತ್ರಗಳು ಮಾತ್ರವಲ್ಲದೆ ನಾಗರಹಾವು ಚಿತ್ರದಲ್ಲಿ ಮಾರ್ಗರೇಟ್ ಪಾತ್ರವೂ ಕೂಡ ಎಲ್ಲರ ಗಮನಸೆಳೆದಿತ್ತು.

ಇನ್ನು ಈ ಪಾತ್ರ ಎಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದಿತ್ತು ಎಂದರೆ ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದಂತಹ ಮಿಸ್ಟರ್ & ಮಿಸ್ಟರ್ ರಾಮಾಚಾರಿ ಚಿತ್ರದಲ್ಲಿ ಕೂಡ ಯಶ್ ರವರ ನಾಯಕಿಯಾಗಿ ರಾಧಿಕಾ ಪಂಡಿತ್ ಅವರು ಮಾರ್ಗಿ ಎಂಬ ಪಾತ್ರವನ್ನು ಅಂದರೆ ಮಾರ್ಗರೇಟ್ ಎಂಬ ಪಾತ್ರವನ್ನು ಮಾಡಿರುತ್ತಾರೆ. ಇನ್ನು ಇವರು ಯಾರು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇನೆ ಬನ್ನಿ. ಹೌದು ಸ್ನೇಹಿತರೆ ಇವರ ನಿಜವಾದ ಹೆಸರು ಶುಭ ಎಂದು. ಇವರು ತೆಲುಗು ಮೂಲದ ನಿರ್ಮಾಪಕರೊಬ್ಬರ ಮಗಳು.

ಇನ್ನು ಇವರು ಮೊದಲ ಚಿತ್ರದಲ್ಲಿ ಕಾಲಿಟ್ಟಿದ್ದು ಮಲಯಾಳಂ ಚಿತ್ರರಂಗದ ಮೂಲಕ. ಇನ್ನು ಈಗಾಗಲೇ ಕನ್ನಡ ಹಿಂದಿ ತಮಿಳು ತೆಲುಗು ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಯಶಸ್ಸು ಸಾಧಿಸಿದ್ದರು. ಇನ್ನೂ ಶುಭಾ ರವರು ಕನ್ನಡ ಚಿತ್ರರಂಗದಲ್ಲಿ ನಟಿಸಿರುವ ಪ್ರಮುಖ ಚಿತ್ರಗಳೆಂದರೆ ಕಲ್ಯಾಣರೇಖೆ, ಚಿಕ್ಕೆಜಮಾನ್ರು, ಬಂಗಾರದಂಥ ಮಗ, ರುದ್ರತಾಂಡವ, ರಾಜಾ ಕೆಂಪು ರೋಜಾ, ಮೃತ್ಯುಂಜಯ, ಅಜಯ್ ವಿಜಯ್, ಮಾಂಗಲ್ಯ, ಗಜಪತಿ ಗರ್ವಭಂಗ, ನಂಜನಗೂಡಿ ಕಲ್ಯಾಣ, ರಾವಣ ರಾಜ್ಯ, ಒಂದೇ ಗೂಡಿನ ಹಕ್ಕಿಗಳು, ಜೀವನಜ್ಯೋತಿ, ಮನಮೆಚ್ಚಿದ ಹುಡುಗಿ, ಮಧ್ವಾಚಾರ್ಯ, ಆನಂದ್, ರಂಗನಾಯಕಿ, ಪಡುವಾರಹಳ್ಳಿ ಪಾಂಡವರು, ಗಲಾಟೆ ಸಂಸಾರ, ನಾ ನಿನ್ನ ಮರೆಯಲಾರೆ, ಫಲಿತಾಂಶ, ಭಾಗ್ಯಜ್ಯೋತಿ, ನಾಗರಹಾವು. ಇನ್ನು ಶುಭಾ ರವರು ಚಿತ್ರರಂಗದಲ್ಲಿ ನಟಿಸಿದ್ದು 2003 ರಲ್ಲಿ ಕೊನೆಯ ಬಾರಿಗೆ. ಈಗ ಎಲ್ಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿಲ್ಲ.

Comments are closed.