ಜಿಯೋ ಏರ್ಟೆಲ್ ಯಾವುದೇ ಇರಲಿ ಇಂಟರ್ನೆಟ್ ಸ್ಲೋ ಇದ್ದರೇ, ಈ ಚಿಕ್ಕ ಕೆಲಸ ಮಾಡಿ, ಸ್ಪೀಡ್ ಹುಡುಕಿಕೊಂಡು ಬರುತ್ತದೆ. ಏನು ಮಾಡಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಹಲವರು ತಮ್ಮ ಮೊಬೈಲ್ ನಲ್ಲಿ ನೆಟ್ ವರ್ಕ್ ಸ್ಲೋ ಇದೆ, ಇಂಟರ್ ನೆಟ್ ಸರಿಯಾಗಿ ವರ್ಕ್ ಆಗ್ತಾ ಇಲ್ಲ ಅಂತ ಚಿಂತಿತರಾಗಿರುತ್ತಾರೆ. ಅದೆಷ್ಟೇ ಪ್ರಯತ್ನ ಪಟ್ರೂ ಮೊಬೈಲ್ ಗೆ ನೆಟ್ ವರ್ಕ್ ಸರಿಯಾಗಿ ಸಿಗುವುದೇ ಇಲ್ಲ, ಆಗ ತಾವು ಬಳಸುವ ಟೆಲಿಕಾಂ ಕಂಪನಿಯನ್ನೇ ಬದಲಾಯಿಸಿ ಬೇರೊಂದನ್ನು ಆಯ್ದುಕೊಳ್ಳುತ್ತಾರೆ. ಆಗಲಾದರೂ ಸಮಸ್ಯೆ ಮುಗಿಯತ್ತಾ? ಇಲ್ಲ, ಇದಕ್ಕೆ ಕಾರಣ ಟೆಲಿಕಾಂ ಕಂಪನಿಯಲ್ಲ, ನಿಮ್ಮ ಸಿಮ್ ಬಳಕೆಯ ವಿಧಾನವೂ ಕೂಡ ಆಗಿರಬಹುದು!

ಹೌದು, ಎಷ್ಟೋ ಬಾರಿ ನಮ್ಮ ಸಿಮ್ ಬಳಕೆಯಿಂದ ಕೂಡ ಮೊಬೈಲ್ ನಲ್ಲಿ ನೆಟ್ ವರ್ಕ್ ವೇಗ ಕಡಿಮೆಯಾಗಲು ಕಾರಣವಾಗಿರುತ್ತದೆ. ಸಿಮ್ ಬಳಕೆ ಸರಿಯಾದರೆ, ನೆಟ್ ವರ್ಕ್ ವೇಗವೂ ಕೂಡ ಹೆಚ್ಚಬಹುದು. ಇದಕ್ಕಾಗಿ ಏನು ಮಾಡಬೇಕು! ಬನ್ನಿ ಕೆಲವು ಉಪಾಯಗಳನ್ನು ಹೇಳ್ತೀವಿ. ಸಾಮಾನ್ಯವಾಗಿ ಈಗಿನ ಸ್ಮಾರ್ಟ್ ಫೋನ್ ಗಳೆಲ್ಲವೂ ಡುಯಲ್ ಸಿಮ್ ಅಂದರೆ ಎರಡು ಸಿಮ್ ಬಳಕೆಯ ಸೌಲಭ್ಯವನ್ನು ಹೊಂದಿರುತ್ತವೆ ಅಲ್ವೇ? ಇಂಟರ್ ನೆಟ್ ವೇಗ ಕಡಿಮೆ ಆಗಿದ್ದರೆ ನೀವು ಮೊದಲು ಮಾಡಬೇಕಾದ್ದು, ಸಿಮ್ ಗಳನ್ನು ಬದಲಾಯಿಸುವುದು. ಮೊದಲನೇ ಸಿಮ್ ಜಾಗದಲ್ಲಿ ಎರಡನೇ ಸಿಮ್ ಹಾಗೂ ಎರಡನೇ ಸಿಮ್ ಜಾಗದಲ್ಲಿ ಮೊದಲನೇ ಸಿಮ್ ನ್ನು ಹಾಕಿ ನೆಟ್ ವರ್ಕ್ ನ್ನು ಪರಿಶೀಲಿಸಿ.

airtel vs jio kannada news 1 | ಜಿಯೋ ಏರ್ಟೆಲ್ ಯಾವುದೇ ಇರಲಿ ಇಂಟರ್ನೆಟ್ ಸ್ಲೋ ಇದ್ದರೇ, ಈ ಚಿಕ್ಕ ಕೆಲಸ ಮಾಡಿ, ಸ್ಪೀಡ್ ಹುಡುಕಿಕೊಂಡು ಬರುತ್ತದೆ. ಏನು ಮಾಡಬೇಕು ಗೊತ್ತೇ??
ಜಿಯೋ ಏರ್ಟೆಲ್ ಯಾವುದೇ ಇರಲಿ ಇಂಟರ್ನೆಟ್ ಸ್ಲೋ ಇದ್ದರೇ, ಈ ಚಿಕ್ಕ ಕೆಲಸ ಮಾಡಿ, ಸ್ಪೀಡ್ ಹುಡುಕಿಕೊಂಡು ಬರುತ್ತದೆ. ಏನು ಮಾಡಬೇಕು ಗೊತ್ತೇ?? 2

ಇನ್ನು ನೀವು ಮೊದಲನೇ ಸಿಮ್ ಟ್ರೇಯಲ್ಲಿ ಸಾಮಾನ್ಯ ಕರೆಯೊಂದಿಗೆ ಸಿಮ್ ಕಾರ್ಡ್ ಮತ್ತು ಎರಡನೇ ಸಿಮ್ ಟ್ರೇನಲ್ಲಿ ಇಂಟರ್ನೆಟ್ ಹೊಂದಿರುವ ಸಿಮ್ ಕಾರ್ಡ್ ಅನ್ನು ಹಾಕಿದ್ದರೆ ಅದೇ ನೀವು ಮಾಡುವ ದೊಡ್ಡ ತಪ್ಪು. ಇಂಟರ್ ನೆಟ್ ಬಳಕೆಯ ಸಿಮ್ ಕಾರ್ಡ್ ಯಾವತ್ತೀಗೂ ಮೊದಲನೇ ಟ್ರೇನಲ್ಲಿದ್ದರೆ, ಇಂಟರ್ ನೆಟ್ ಸುಲಭವಾಗಿ ಸಿಗುತ್ತದೆ. ಮೊದಲನೇ ಸಿಮ್ ಹಾಕುವ ಜಾಗದಲ್ಲಿ ಸಾಮಾನ್ಯವಾಗಿ ನೆಟ್ ವರ್ಕ್ ಬಹಳ ಉತ್ತಮವಾಗಿ ಸಿಗುತ್ತದೆ. ಹಾಗಾಗಿ ನಿಮಗೆ ಇಂಟರ್ ನೆಟ್ ಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಇಂಟರ್‌ನೆಟ್ ಬಳಸುವ ಸಿಮ್ ನೆಟ್‌ವರ್ಕ್ ಎಪಿಎನ್ ನು ಬದಲಾಯಿಸುವುದರ ಮೂಲಕವೂ ನೆಟ್ ವರ್ಕ್ ಸರಿಯಾಗಿ ಸಿಗುವಂತೆ ಮಾಡಬಹುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ನಿಮ್ಮ ಫೋನಿನ ಸೆಟ್ಟಿಂಗ್ಸ್ ಗೆ ಹೋಗಿ. ಅಲ್ಲಿ ನೆಟ್‌ವರ್ಕ್‌ ಆಯ್ಕೆಯಲ್ಲಿ ಕಾಣುವ ಎಪಿಎನ್ ರೀಸೆಟ್ ಮಾಡಿ, ಆಟೋಮ್ಯಾಟಿಕ್ ನೆಟ್‌ವರ್ಕ್‌ ಫೈಂಡ್ ಔಟ್ ಮಾಡಿದರೆ ಆಯ್ತು. ಆಗಲೂ ನೆಟ್ವರ್ಕ್ ಸಮಸ್ಯೆ ಭಾಗಶಃ ನಿವಾರಣೆಯಾಗುತ್ತದೆ.

Comments are closed.