ಬಿ ಎಸ್ ಎನ್ ಎಲ್ ನಲ್ಲಿ ಉದ್ಯೋಗವಕಾಶ, ಇಂತಹ ಅವಕಾಶ ಮತ್ತೊಮ್ಮೆ ಸಿಗಲ್ಲ. ಈಗಲೇ ಅರ್ಜಿ ಸಲ್ಲಿಸಿ.

ನಮಸ್ಕಾರ ಸ್ನೇಹಿತರೇ ನಿಮಗೆ ಡಿಪ್ಲೋಮಾ ವಿದ್ಯಾಭ್ಯಾಸ ಮುಗಿದಿದ್ದರೆ ಖಂಡಿತವಾಗಿಯೂ ನಿಮಗೊಂದು ಉತ್ತಮ ಉದ್ಯೋಗಕ್ಕೆ ಅವಕಾಶವಿದೆ. ಅದುವೇ ಬಿಎಸ್ಎನ್ಎಲ್ ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆ. ಬಿಎಸ್ಎನ್ಎಲ್ ತನ್ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಹೃದಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಈ ಕೆಳಗೆ ತಿಳಿಸಿದ್ದೇವೆ.

bsnl jobs | ಬಿ ಎಸ್ ಎನ್ ಎಲ್ ನಲ್ಲಿ ಉದ್ಯೋಗವಕಾಶ, ಇಂತಹ ಅವಕಾಶ ಮತ್ತೊಮ್ಮೆ ಸಿಗಲ್ಲ. ಈಗಲೇ ಅರ್ಜಿ ಸಲ್ಲಿಸಿ.
ಬಿ ಎಸ್ ಎನ್ ಎಲ್ ನಲ್ಲಿ ಉದ್ಯೋಗವಕಾಶ, ಇಂತಹ ಅವಕಾಶ ಮತ್ತೊಮ್ಮೆ ಸಿಗಲ್ಲ. ಈಗಲೇ ಅರ್ಜಿ ಸಲ್ಲಿಸಿ. 2

ಭಾರತ ಸಂಚಾರ ನಿಗಮ ಲಿಮಿಟೆಡ್ ಅಂದರೆ ಬಿಎಸ್ಎನ್ಎಲ್ ನಲ್ಲಿ 24 ಟೆಕ್ನಿಕಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಫೆಬ್ರುವರಿ 23 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು ಮಾರ್ಚ್ 9 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಕೊಟ್ಟು ಖಾಲಿ ಇರುವ 24 ಹುದ್ದೆಗಳಲ್ಲಿ ಅಮೃತಸರ- 03 ಹುದ್ದೆಗಳು,ಚಂಡೀಗರ್-04 ಹುದ್ದೆಗಳು, ಫಿರೋಜ್​ಪುರ-03 ಹುದ್ದೆಗಳು, ಹೊಶಿಯಾರ್​ಪುರ್-03 ಹುದ್ದೆಗಳು, ಜಲಂಧರ್-04 ಹುದ್ದೆಗಳು, ಲೂಧಿಯಾನ-03 ಹುದ್ದೆಗಳು, ಪಾಟಿಯಾಲ-04 ಹುದ್ದೆಗಳು ಖಾಲಿ ಇವೆ.

ಇನ್ನು ಬಿ ಎಸ್ ಎನ್ ಎಲ್ ನೇಮಕಾತಿ ಅಧಿಸೂಚನೆ ಪ್ರಕಾರ, ಟೆಕ್ನಿಕಲ್​​ ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್​​/ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಡಿಪ್ಲೋಮಾ, ಐಟಿಐಯಲ್ಲಿ ತೇರ್ಗಡೆ ಹೊಂದಿರಬೇಕು. ಹಾಗೆಯೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 25 ವರ್ಷ ಮೀರಿರಬಾರದು. ಇನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ಪಂಜಾಬ್ ನಲ್ಲಿ ಪೋಸ್ಟಿಂಗ್ ನೀಡಲಾಗುವುದು. ಟೆಕ್ನಿಕಲ್​​ ಅಪ್ರೆಂಟಿಸ್​ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 8,000 ವೇತನ ನೀಡಲಾಗುವುದು. ಇನ್ನು ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಬಿಎಸ್ಎನ್ಎಲ್ ನ ಅಧಿಕೃತ ವೆಬ್ಸೈಟ್ bsnl.co.in ಗೆ ಭೇಟಿ ನೀಡಿ.

Comments are closed.