ಜಸ್ಟ್ ಒಂದು ಓಂ ಕಾಳಿನ ಜೊತೆ ಬೆಳಗ್ಗೆ ಎದ್ದ ತಕ್ಷಣ ಹೀಗೆ ಮಾಡಿದರೇ ಏನೆಲ್ಲಾ ಆಗುತ್ತದೆ ಎಂದು ತಿಳಿದರೆ ಇಂದೇ ಮಾಡುತ್ತೀರಾ

ನಮಸ್ಕಾರ ಸ್ನೇಹಿತರೇ ಒಮ ಕಾಳು ಅಥವಾ ಅಜ್ವಾನ ಅಂತ ಕರಿತಾರಲ್ಲ, ಈ ಒಂದು ಮಸಾಲ ಪದಾರ್ಥವನ್ನು ನೀವು ಅಡುಗೆ ಮನೆಯಲ್ಲಿ ನೋಡಿರಲೇಬೇಕು. ಸಾಮಾನ್ಯವಾಗಿ ದಿನನಿತ್ಯದ ಅಡುಗೆಗಳಲ್ಲಿ ಇದನ್ನ ಬಳಸಲಾಗುತ್ತದೆ. ಆದರೆ ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತುಂಬಾ ಜನರಿಗೆ ಅರಿವಿಲ್ಲ. ಏನೆಲ್ಲ ಪ್ರಯೋಜನಗಳಿವೆ? ಬನ್ನಿ, ವಿವರಿಸ್ತೀವಿ.

ಒಮ ಕಾಳಿನ ಉಪಯೋಗಗಳು: ನಾವು ಬಳಸುವ ಒಮದ ಕಾಳು ಅಥವಾ ಅಜ್ವಾನದಲ್ಲಿ ಫಾರ್ಮಕೊಲೊಜಿಕಲ್ ಅಂಶಗಳಿವೆ. ಹಾಗಾಗಿ ದೇಹದ ಒಳಭಾಗದಲ್ಲಿನ ಸಾಕಷ್ಟು ಸಮಸ್ಯೆಗಳನ್ನು ಇದು ನಿವಾರಿಸಬಲ್ಲದು. ಗ್ಯಾಸ್ಟ್ರಿಕ್ ಸಮಸ್ಯೆ ಅಥವಾ ಅಜೀರ್ಣದ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಒಮ ಕಾಳಿನ ಕಷಾಯವನ್ನು ಮಾಡಿ ಕುಡಿಯಿರಿ. ಇನ್ನು ದಿನವೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಜ್ವಾನವನ್ನು ನೀರಿಗೆ ಹಾಕಿ ಕುಡಿಯುವುದು ತುಂಬಾನೇ ಒಳ್ಳೆಯದು. ಶೀತ, ಕಫ ಆದಾಗಲೂ ಒಮ ಕಾಳನ್ನು ನೀರಿನಲ್ಲಿ ಕುದಿಸಿ ಕುಡಿಯಬೇಕು. ಬಾಯಿಯ ಸೋಂಕನ್ನು ಕೂಡ ಇದು ನಿವಾರಣೆ ಮಾಡುತ್ತದೆ.

ಒಮ ಕಾಳು ದೇಹದ ತೂಕ ಇಳಿಸಲು ಕೂಡ ಸಹಾಯಕ. ಕೊಲೆಸ್ಟ್ರಾಲ್ ಹೆಚ್ಚಾಗಿದ್ದರೆ ಒಮದ ಕಾಳಿನ ಕಷಾಯವನ್ನು ಕುಡಿಯುತ್ತಾರೆ. ದೇಹದ ಬೊಜ್ಜು ಕರಗಿಸುವುದು ಮಾತ್ರವಲ್ಲದೇ ರಕ್ತನಾಳದ ಸಮಸ್ಯೆಗಳೂ ಕೂಡ ಒಮ ಸೇವನೆಯಿಂದ ನಿವಾರಿಸಿಕೊಳ್ಳಬಹುದು. ಒಮ ಕಾಳು ಸಂಧಿವಾತಕ್ಕೂ ರಾಮಬಾಣ. ಪ್ರತಿದಿನ ನಿಯಮಿತವಾಗಿ ಒಮ ಕಾಳನ್ನು ಸೇವಿಸುತ್ತಾ ಬಂದರೆ ಖಂಡಿತವಾಗಿಯೂ ದೇಹದ ಹಲವಾರು ಖಾಯಿಲೆಗಳು ನಿವಾರಣೆಯಾಗುತ್ತವೆ.

ಒಮ ಕಾಳಿನ ಕಷಾಯ ಮಾಡುವುದು ಹೇಗೆ: ಒಂದು ಪಾತ್ರೆಗೆ ಒಂದು ಲೋಟ ನೀರು ಹಾಗೂ ಸ್ವಲ್ಪ ಒಮ ಕಾಳನ್ನು ಹಾಕಿ ಆ ನೀರು ಅರ್ಧ ಆಗುವವರೆಗೆ ಕುದಿಸಿ. ನಂತರ ಕುದಿದ ನೀರನ್ನು ಒಂದು ಲೋಟಕ್ಕೆ ಸೋಸಿ. ಈ ನೀರಿಗೆ ಅರ್ಧ ಚಮಚ ನಿಂಬೆ ರಸ ಅಥವಾ ಆಪಸ್ ಸೀಡರ್ ವಿನೇಗರ್, ಜೇನು ತುಪ್ಪ ಹಾಗೂ ಕಪ್ಪು ಉಪ್ಪನ್ನು ಸೇರಿಸಿಕೊಂಡು ಕುಡಿಯಿರಿ. ಈ ರೀತಿ ದಿನವೂ ಮಾಡುತ್ತಾ ಬಂದರೆ ದೇಹಕ್ಕೆ ಸಾಕಷ್ಟು ಒಳ್ಳೆಯದು.

Comments are closed.