ಟೂತ್‌ಪೇಸ್ಟ್‌ಗೆ ಈ ವಸ್ತುಗಳನ್ನು ಬೆರೆಸಿ ಹಚ್ಚಿದರೆ, ಮುಖದಲ್ಲಿರುವ ಮೊಡವೆಗಳು ರಾತ್ರೋ ರಾತ್ರಿ ಕಣ್ಮರೆಯಾಗುತ್ತದೆ.

ನಮಸ್ಕಾರ ಸ್ನೇಹಿತರೇ ಮೊಡವೆಗಳಿಂದ ನೀವು ಬೇಸರಗೊಂಡಿದ್ದೀರಾ? ಹಾಗಾದರೆ ಈ ಲೇಖನವನ್ನು ಕೊನೆಯವರೆಗೂ ಓದಿ, ಏಕೆಂದರೆ ನಾವು ನಿಮಗಾಗಿ ಟೂತ್ ಪೇಸ್ಟ್ ಅನ್ನು ಬಳಸಿಕೊಂಡು ಯಾವ ರೀತಿ ಮೊಡವೆ ಸಮಸ್ಯೆಯನ್ನು ದೂರಮಾಡಿಕೊಳ್ಳಬಹುದು ಎಂಬ ಮಾಹಿತಿಯನ್ನು ತಿಳಿಸಿದ್ದೇವೆ. ಮೊಡವೆ ಎಂಬುದು ಹುಡುಗಿಯರಿಗೆ ಒಂದು ಗಂಭೀರ ಸಮಸ್ಯೆಯಾಗಿಬಿಟ್ಟಿದೆ. ಮುಖದಲ್ಲಿ ಒಂದು ಮೊಡವೆ ಆದರೆ ಸಾಕು, ವಿವಿಧ ರೀತಿಯ ಸೌಂದರ್ಯ ವರ್ಧಕಗಳನ್ನು ಬಳಸಿ ಅಥವಾ ಪಾರ್ಲರ್‌ಗೆ ಹೋಗಿ, ಅದನ್ನು ಸರಿಪಡಿಸಲು ಪ್ರಯತ್ನಿಸಿದಾಗ ಕೆಲವರಿಗೆ ಉತ್ತಮ ಫಲಿತಾಂಶ ದೊರೆತರೇ,ಇನ್ನೂ ಕೆಲವರಿಗೆ ಮುಖದ ಮೇಲೆ ಕೆ’ಟ್ಟ ಪರಿಣಾಮಗಳು ಬೀರುತ್ತದೆ.

ಆದ್ದರಿಂದ, ಇಂದು ನಾವು ನಿಮಗೆ ಮುಖದಲ್ಲಿರುವ ಮೊಡವೆಗಳನ್ನು ಹೋಗಿಸಲು ರಾಮಬಾಣವನ್ನು ತಿಳಿಸುತ್ತೇವೆ. ಇದನ್ನು ಅನ್ವಯಿಸಿದ ನಂತರ, ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹರಿಸಲ್ಪಡುತ್ತವೆ. ಕೆಲವೊಮ್ಮೆ ಸೌಂದರ್ಯ ವರ್ಧಕಗಳನ್ನು ಬಳಸಿದರೂ ಕೂಡ ಸಾಧ್ಯವಾಗದ ಕೆಲಸಗಳನ್ನು ಮನೆಮದ್ದುಗಳು ಮಾಡುತ್ತವೆ.

ಯಾರಿಗಾದರೂ ಮುಖದಲ್ಲಿ ಮೊಡವೆಗಳು ಆದಾಗ, ಒಂದೇ ರಾತ್ರಿಯಲ್ಲಿ ಮೊಡವೆಗಳು ಹೇಗೆ ತೆಗೆದುಹಾಕಬೇಕು ಎಂದು ಯೋಚಿಸುತ್ತಾರೆ. ನಾವು ಹೇಳುವ ವಿಧಾನವನ್ನು ಅನುಸರಿಸಿದರೇ ಒಂದೇ ರಾತ್ರಿಯಲ್ಲಿ ಮೊಡವೆಗಳು ಕಣ್ಮರೆಯಾಗಬಹುದು. ಸಾಮಾನ್ಯವಾಗಿ ದೇಹದಲ್ಲಿ ಹೆಚ್ಚಾಗಿ ಹಾ’ರ್ಮೋನ್ ಬದಲಾವಣೆ ಅಥವಾ ಒ’ತ್ತಡದಿಂದ ಮೊಡವೆಗಳು ಉಂಟಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ, ಆದ್ದರಿಂದ ಸಾಧ್ಯವಾದಷ್ಟು ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಇದನ್ನು ಹೊರತು ಪಡಿಸಿದರೇ ಟೂತ್‌ಪೇಸ್ಟ್ ಉಪಯೋಗಿಸುವ ಮೂಲಕ ಮೊಡವೆಗಳನ್ನು ಕಡಿಮೆ ಮಾಡುವ ಪರಿಹಾರವನ್ನು ತಿಳಿಯೋಣ.

ಮೊದಲನೆಯದಾಗಿ ಟೂತ್‌ಪೇಸ್ಟ್ ಮತ್ತು ಉಪ್ಪು: ಹೌದು, ಒಂದು ಸಣ್ಣ ಬಟ್ಟಲಿನಲ್ಲಿ ಟೂತ್‌ಪೇಸ್ಟ್ ಮತ್ತು ಒಂದು ಚಿಟಿಕೆ ಉಪ್ಪನ್ನು ಹಾಕಿ ಮಿಶ್ರಣ ಮಾಡಿ. ಮುಖವನ್ನು ತೊಳೆದ ನಂತರ ಈ ಮಿಶ್ರಣವನ್ನು ಹಚ್ಚಬೇಕು ಎಂಬುದನ್ನು ನೆನಪಿನಲ್ಲಿಡಿ ಮತ್ತು ಇದನ್ನು ರಾತ್ರಿಯಲ್ಲಿ ಮಾತ್ರ ಹಚ್ಚಬೇಕು. ಮುಖವನ್ನು ತೊಳೆದ ನಂತರ, ಈ ಪೇಸ್ಟ್ ಅನ್ನು ಮೊಡವೆ ಇರುವ ಜಾಗದ ಮೇಲೆ ಹಚ್ಚಿ ಮತ್ತು ಐದು ನಿಮಿಷಗಳ ನಂತರ ತೊಳೆಯಿರಿ.

ಇನ್ನು ಟೂತ್‌ಪೇಸ್ಟ್ ಮತ್ತು ಅಡಿಗೆ ಸೋಡಾ ಬಳಸಿ: ಒಂದು ಬಟ್ಟಲಿಗೆ ಟೂತ್‌ಪೇಸ್ಟ್ ಮತ್ತು ಅಡಿಗೆ ಸೋಡಾವನ್ನು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಮುಖವನ್ನು ತಣ್ಣೀರಿನಲ್ಲಿ ತೊಳೆದು ಮೊಡವೆ ಇರುವ ಜಾಗದ ಮೇಲೆ ಹಚ್ಚಿ, ನಂತರ 30 ನಿಮಿಷಗಳ ಕಾಲ ಬಿಟ್ಟು ಮುಖವನ್ನುತೊಳೆಯಿರಿ. ಈ ರೀತಿ ಮಾಡುವುದರಿಂದ ಮೊಡವೆಗಳು ಕಡಿಮೆಯಾಗುತ್ತವೆ.

ಕೊನೆಯದಾಗಿ ಟೂತ್‌ಪೇಸ್ಟ್ ಮತ್ತು ಐಸ್: ಮೊದಲು ಮೊಡವೆ ಇರುವ ಜಾಗಕ್ಕೆ ಟೂತ್‌ಪೇಸ್ಟ್ ಹಚ್ಚಿ. ನಂತರ ಐಸ್ ಅನ್ನು ಉಜ್ಜಿಕೊಳ್ಳಿ. ಆದರೆ ನೀವು ಸಹಿಸಿಕೊಳ್ಳುವವರೆಗೂ ಮಾತ್ರ ಉಜ್ಜಿಕೊಳ್ಳಿ. ಒಂದು ವೇಳೆ ನೀವು ಸಹಿಸಲಾಗದಿದ್ದರೆ, ಸ್ವಲ್ಪ ವಿರಾಮವನ್ನು ನೀಡಿ, ಮತ್ತೆ ಈ ಪ್ರಕ್ರಿಯೆಯನ್ನು ಮಾಡಿ, ಇದು ನಿಮ್ಮ ಮುಖದಲ್ಲಿರುವ ಮೊಡವೆಗಳು ಕಣ್ಮರೆಯಾಗುವಂತೆ ಮಾಡುತ್ತದೆ.

Comments are closed.