ನೇರವಾಗಿ ಪವನ್ ಕಲ್ಯಾಣ್ ಸಿನೆಮಾದಿಂದ ಹೊರ ಬಂದ ಪೂಜಾ ಹೆಗ್ಡೆ. ಪವನ್ ಕಲ್ಯಾಣ ಮಾಡಿದ ಅದೊಂದು ಕೆಲಸ ಏನು ಗೊತ್ತೇ?

ಕೆಲವೊಮ್ಮೆ ಸಿನಿಮಾ ಕಲಾವಿದರು ಅಂದುಕೊಂಡ ಹಾಗೆ ಸಿನಿಮಾ ಕೆಲಸಗಳು ನಡೆಯುವುದಿಲ್ಲ. ಚಿತ್ರತಂಡ ಸೇರಿ ಪ್ಲಾನ್ ಮಾಡುವುದು ಒಂದು ರೀತಿ ಆದರೆ ಕೆಲಸ ನಡೆಯುವುದೇ ಮತ್ತೊಂದು ರೀತಿ. ಡೇಟ್ಸ್ ನೀಡಿದ ಸಮಯಕ್ಕೆ, ಅಂದುಕೊಂಡ ಸಮಯಕ್ಕೆ ಸಿನಿಮಾ ಕೆಲಸಗಳು ನಡೆಯದೆ, ಮುಂದಕ್ಕೆ ಹೋಗುತ್ತಲೇ ಇರುವ ಕಾರಣದಿಂದ ಸಿನಿಮಾ ಇಂದ ಹೊರಬಂದಿರುವ ಉದಾಹರಣೆಗಳು ಸಾಕಷ್ಟಿವೆ. ಇದೀಗ ಖ್ಯಾತ ನಟಿ ಪೂಜಾ ಹೆಗ್ಡೆ ಅವರು ಸಹ ಇದೇ ಕಾರಣದಿಂದ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಸಿನಿಮಾದಿಂದ ಹೊರಬಂದಿದ್ದಾರೆ..

ಪವನ್ ಕಲ್ಯಾಣ್ ಅಭಿನಯಿಸಿರುವ, ಭವಧೀಯುಡು ಭಗತ್ ಸಿಂಗ್ ಎನ್ನುವ ಸಿನಿಮಾ, ಭಾರಿ ನಿರೀಕ್ಷೆ ಸೃಷ್ಟಿಸಿದೆ. ಆದರೆ ಈ ಸಿನಿಮಾ ಶುರುವಾಗುವುದರಲ್ಲಿ ತಡವಾಗುತ್ತಿದೆ. ಈ ಸಿನಿಮಾಗೆ ನಾಯಕಿಯಾಗಿ ಪೂಜಾ ಹೆಗ್ಡೆ ಅವರು ಆಯ್ಕೆಯಾಗಿದ್ದರು. ಇದೀಗ ಈ ಸಿನಿಮಾ ಸೆಟ್ಟೇರಿ ಚಿತ್ರೀಕರಣ ಶುರುವಾಗುವ ದಿನ ಪದೇ ಪದೇ ಮುಂದಕ್ಕೆ ಹೋಗುತ್ತಿದೆ. ಹರೀಶ್ ಶಂಕರ್ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಇದೀಗ ಈ ಸಿನಿಮಾ ಟೇಕ್ ಆಫ್ ಆಗುವ ಸುದ್ದಿಯೇ ಕೇಳಿ ಬರುತ್ತಿಲ್ಲ. ಪದೇ ಪದೇ ಸಿನಿಮಾ ಶುರುವಾಗುವುದು ವಿಳಂಬವಾಗುತ್ತಿದೆ. ಈ ಕಾರಣದಿಂದ ಪೂಜಾ ಹೆಗ್ಡೆ ಅವರಿಗೆ ಸಿಟ್ಟು ಬಂದಿರುವ ಕಾರಣ, ಅವರು ಚಿತ್ರದಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ.

pooja pavan | ನೇರವಾಗಿ ಪವನ್ ಕಲ್ಯಾಣ್ ಸಿನೆಮಾದಿಂದ ಹೊರ ಬಂದ ಪೂಜಾ ಹೆಗ್ಡೆ. ಪವನ್ ಕಲ್ಯಾಣ ಮಾಡಿದ ಅದೊಂದು ಕೆಲಸ ಏನು ಗೊತ್ತೇ?
ನೇರವಾಗಿ ಪವನ್ ಕಲ್ಯಾಣ್ ಸಿನೆಮಾದಿಂದ ಹೊರ ಬಂದ ಪೂಜಾ ಹೆಗ್ಡೆ. ಪವನ್ ಕಲ್ಯಾಣ ಮಾಡಿದ ಅದೊಂದು ಕೆಲಸ ಏನು ಗೊತ್ತೇ? 2

ಸಧ್ಯಕ್ಕೆ ಪವನ್ ಕಲ್ಯಾಣ್ ಅವರು ವಿನೋದಯಾ ಸೀತಂ ಸಿನಿಮಾ ರಿಮೇಕ್ ಮಾಡಲು ಹೆಚ್ಚಿನ ಆಸಕ್ತಿ ತೋರಿಸುತ್ತಿರುವ ಕಾರಣ, ಭವಧೀಯುಡು ಭಗತ್ ಸಿಂಗ್ ಸಿನಿಮಾ ಶುರು ಆಗುವುದು ತಡವಾಗುತ್ತಿದೆ. ಹಾಗಾಗಿ ಪವನ್ ಕಲ್ಯಾಣ್ ಅವರು ಪದೇ ಪದೇ ಸಿನಿಮಾ ಬಿಡುಗಡೆ ಆಗುವ ದಿನಾಂಕವನ್ನು ಮುಂದಕ್ಕೆ ಹಾಕುತ್ತಿದ್ದು, ಸಿನಿಮಾ ಯಾವಾಗ ಶುರುವಾಗುತ್ತದೆ ಎಂದು ಸ್ವತಃ ಹರೀಶ್ ಶಂಕರ್ ಅವರಿಗೆ ಸ್ಪಷ್ಟನೆ ಇಲ್ಲ ಎನ್ನಲಾಗುತ್ತಿದೆ. ಇದೇ ಕಾರಣದಿಂದ ಪೂಜಾ ಹೆಗ್ಡೆ ಅವರು ಸಹ ಚಿತ್ರದಿಂದ ಹೊರಬಂದಿದ್ದು, ಈಗಾಗಲೇ ಅವರು ಸಲ್ಮಾನ್ ಖಾನ್ ಅವರೊಡನೆ ಕಭಿ ಈದ್ ಕಭಿ ದಿವಾಲಿ ಸಿನಿಮಾದಲ್ಲಿ ನಟಿಸುತ್ತಿದ್ದು, ಅದರ ಜೊತೆಗೆ ಜ್ಯೂನಿಯರ್ ಎನ್.ಟಿ. ಆರ್ ಅಭಿನಯಿಸಲಿರುವ ಕೊರಟಾಲ ಶಿವ ನಿರ್ದೇಶನ ಮಾಡಲಿರುವ ಸಿನಿಮಾಗು ಪೂಜಾ ಹೆಗ್ಡೆ ನಾಯಕಿ ಆಗಿದ್ದಾರೆ. ಹಾಗಾಗಿ ಹೈದರಾಬಾದ್ ಮತ್ತು ಮುಂಬೈಗೆ ಓಡಾಡಬೇಕಾಗುತ್ತದೆ.

Comments are closed.