ಕೆಜಿಎಫ್ ಪ್ರಶಾಂತ್ ನೀಲ್, ಜ್ಯೂನಿಯರ್ NTR ಗೆ ಯಾವ ಪಾತ್ರ ಸೃಷ್ಠಿಸಿದ್ದಾರೆ ಗೊತ್ತಾ?? ನಿಜಕ್ಕೂ ಷಾಕಿಂಗ್.

ನಮಸ್ಕಾರ ಸ್ನೇಹಿತರೇ ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಬಗ್ಗೆ ನಿಮಗೆಲ್ಲಾ ತಿಳಿದಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೇ, ಕೆಜಿಎಫ್ -2 ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಬೇಕಿತ್ತು. ಆದರೇ ಕೋರೋನಾ ಕಾರಣ ಚಿತ್ರಮಂದಿರಗಳು ಸ್ಥಗಿತವಾಗಿರುವ ಕಾರಣ, ಚಿತ್ರ ಬಿಡುಗಡೆ ನಾಲ್ಕು ತಿಂಗಳು ಮುಂದಕ್ಕೆ ಹೋಗಿದೆ. ಇದರ ಜೊತೆಗೆ ಕಳೆದ ವರ್ಷ ಪ್ರಶಾಂತ್ ನೀಲ್, ಬಾಹುಬಲಿ, ಸಾಹೋ ಖ್ಯಾತಿಯ ಪ್ರಭಾಸ್ ರನ್ನ ಹೀರೋ ಮಾಡಿಕೊಂಡು, ಸಲಾರ್ ಎಂಬ ನೂತನ ಪ್ಯಾನ್ ಇಂಡಿಯಾ ಸಿನಿಮಾ ಘೋಷಿಸಿದ್ದರು. ಆ ಸಲಾರ್ ಸಿನಿಮಾವನ್ನು ಸಹ ಕನ್ನಡಿಗ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಂಗದೂರ್ ರವರು ನಿರ್ಮಿಸುತ್ತಿರುವುದು ನಿಮಗೆಲ್ಲಾ ತಿಳಿದಿರುವ ವಿಷಯ.

ಈ ಮಧ್ಯೆ ಕಳೆದ ವಾರ ಪ್ರಶಾಂತ್ ನೀಲ್ , ತೆಲುಗು ಸಿನಿಮಾದ ದಿಗ್ಗಜ ಜೂನಿಯರ್ NTR ರವರ ಜೊತೆ ಹೊಸ ಸಿನಿಮಾ ಘೋಷಿಸಿದ್ದರು. ಆ ಸಿನಿಮಾಕ್ಕೆ ಪ್ರಶಾಂತ್ ನೀಲ್ ದೊಡ್ಡ ಸಂಭಾವನೆ ಸಹ ಪಡೆಯುತ್ತಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಅಲ್ಲದೇ ದಿಗ್ಗಜ ಜೂನಿಯರ್ NTR ಹಾಗೂ ಪ್ರಶಾಂತ್ ನೀಲ್ ಸಿನಿಮಾ ಬಗ್ಗೆ ಬಹಳ ಹೈಪ್ ಸಹ ಹುಟ್ಟಿತ್ತು. ಸದ್ಯ RRR ಎಂಬ ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ಬ್ಯುಸಿ ಆಗಿರುವ ಜೂನಿಯರ್ NTR , ಆ ಸಿನಿಮಾ ಮುಗಿದ ತಕ್ಷಣ, ಪ್ರಶಾಂತ್ ನೀಲ್ ಜೊತೆ ಈ ಸಿನಿಮಾ ಆರಂಭಿಸಲಿದ್ದಾರೆ.

ಈಗ ಹೊರಬಿದ್ದಿರುವ ಸುದ್ದಿಯ ಪ್ರಕಾರ , ಪ್ರಶಾಂತ್ ನೀಲ್, ಜೂನಿಯರ್ ಎನ್.ಟಿ.ಆರ್ ರವರಿಗೆ ಒಂದು ವಿಭಿನ್ನ ಪಾತ್ರ ಸೃಷ್ಠಿಸಿದ್ದು, ಇದುವರೆಗೂ ಜೂನಿಯರ್ ಈ ಥರಹದ ಪಾತ್ರವನ್ನ ತಮ್ಮ ವೃತ್ತಿ ಬದುಕಿನ ಯಾವ ಸಿನಿಮಾಗಳಲ್ಲಿಯೂ ನಟಿಸಿಲ್ಲ ಎಂಬ ಸುದ್ದಿ ಹೊರಬಿದ್ದಿದೆ. ಹಾಗಾಗಿ ಈ ಪಾತ್ರಕ್ಕಾಗಿ ಜೂನಿಯರ್ ಎನ್.ಟಿ.ಆರ್ ಮಾನಸಿಕವಾಗಿ ಬಹಳಷ್ಟು ಸಿದ್ದತೆಯನ್ನು ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ. ಅಷ್ಟಕ್ಕೂ ಈ ಪಾತ್ರ ಯಾವುದು ಎಂಬುದನ್ನ ತಿಳಿಯೋಣ ಬನ್ನಿ.

ಹೌದು ಜೂನಿಯರ್ ಎನ್.ಟಿ.ಆರ್ ಪ್ರಶಾಂತ್ ನೀಲ್ ರ ಹೊಸ ಸಿನಿಮಾದಲ್ಲಿ ರಾಜ ಕಾರಣಿ ಯಾಗಿ ಬಣ್ಣ ಹಚ್ಚಲಿದ್ದಾರಂತೆ. ಒಬ್ಬ ಯುವ ರಾಜ ಕಾರಣಿ, ಮಧ್ಯಮ ವಯಸ್ಕ ರಾಜ ಕಾರಣಿ ಹೀಗೆ ಆ ಪಾತ್ರಕ್ಕೆ ಹಲವಾರು ಶೇಡ್ ಗಳು ಇವೆಯಂತೆ. ಹಾಗೇ ನೋಡಿದರೇ ಈ ಸಿನಿಮಾ ಯಾವುದೋ ರಾಜ ಕಾರಣಿ ಯ ಬಯೋಪಿಕ್ ಇರಬಹುದಾ ಎಂಬ ಅನುಮಾನ ಸಿನಿಮಾ ವಲಯದಲ್ಲಿ ಶುರುವಾಗಿದೆ. ಒಟ್ಟಿನಲ್ಲಿ ಉಗ್ರಂ, ಕೆಜಿಎಫ್ ಮೂಲಕ ಸಿನಿಮಾ ಜಗತ್ತಿನಲ್ಲಿ ಹೊಸ ಮೈಲಿಗಲ್ಲು ನೆಟ್ಟಿರುವ ಪ್ರಶಾಂತ್ ನೀಲ್, ಈಗ ಜೂನಿಯರ್ ಎನ್.ಟಿ.ಆರ್ ಜೊತೆ ಮಾಡುತ್ತಿರುವ ಸಿನಿಮಾ ಹೇಗಿರುತ್ತದೆ ಎಂಬ ಕುತೂಹಲ ಅಭಿಮಾನಿ ವಲಯದಲ್ಲಿ ಹುಟ್ಟಿದೆ.

Comments are closed.