ಕೇವಲ 10 ನಿಮಿಷಗಳಲ್ಲಿ ಬ್ರಾಹ್ಮಣರ ರೀತಿಯಲ್ಲಿ ಪುಳಿಯೋಗರೆ ಮಾಡುವ ವಿಧಾನವನ್ನು ತಿಳಿದುಕೊಳ್ಳಿ. ಹೇಗೆ ಗೊತ್ತೆ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಕೇವಲ 10 ನಿಮಿಷಗಳಲ್ಲಿ ಸಾಂಪ್ರದಾಯಿಕ ರುಚಿಯ ಪುಳಿಯೋಗರೆ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಸಾಂಪ್ರದಾಯಿಕ ರುಚಿಯ ಪುಳಿಯೋಗರೆ ಮಾಡಲು ಬೇಕಾಗುವ ಸಾಮಗ್ರಿಗಳು: ಒಂದೂವರೆ ಬಟ್ಟಲು ಅಕ್ಕಿಯಿಂದ ಮಾಡಿದ ಅನ್ನ, 4 ಬ್ಯಾಡಿಗೆ ಮೆಣಸಿನಕಾಯಿ, 8 ಒಣಮೆಣಸಿನಕಾಯಿ, ಕಾಲು ಚಮಚ ಮೆಂತ್ಯ, 1 ಚಮಚ ಜೀರಿಗೆ, 4 ಚಮಚ ಧನಿಯಾ, 1 ಚಮಚ ಕಡಲೆಬೇಳೆ, 2 ಚಮಚ ಉದ್ದಿನಬೇಳೆ, 10 ಕಾಳುಮೆಣಸು, 3 ಚಮಚ ಬಿಳಿಎಳ್ಳು, ಸ್ವಲ್ಪ ಎಣ್ಣೆ, ನಿಂಬೆ ಹಣ್ಣು ಗಾತ್ರದ ಹುಣಸೆ ಹಣ್ಣು, ಅರ್ಧ ಚಮಚ ಸಾಸಿವೆ, ಸ್ವಲ್ಪ ಕರಿಬೇವು, ಅರ್ಧ ಬಟ್ಟಲು ಕಡಲೆಬೀಜ , ಅರ್ಧ ಚಮಚ ಇಂಗು, ಅರ್ಧ ಚಮಚ ಅರಿಶಿನ ಪುಡಿ, ರುಚಿಗೆ ತಕಷ್ಟು ಉಪ್ಪು, 2 ಚಮಚ ಬೆಲ್ಲ.

ಸಾಂಪ್ರದಾಯಿಕ ರುಚಿಯ ಪುಳಿಯೋಗರೆ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 4 ಬ್ಯಾಡಿಗೆ ಮೆಣಸಿನಕಾಯಿ, 4 ಒಣಮೆಣಸಿನಕಾಯಿ, ಕಾಲು ಚಮಚ ಮೆಂತ್ಯ, 1 ಚಮಚ ಜೀರಿಗೆ, 4 ಚಮಚ ಧನಿಯಾ, 1 ಚಮಚ ಕಡಲೆಬೇಳೆ, 1 ಚಮಚ ಉದ್ದಿನಬೇಳೆ, 10 ಕಾಳುಮೆಣಸು ಹಾಗೂ 1 ಚಮಚದಷ್ಟು ಎಣ್ಣೆಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಬಿಳಿ ಎಳ್ಳನ್ನು ಹಾಕಿ ಸ್ವಲ್ಪ ಫ್ರೈ ಮಾಡಿಕೊಂಡು ಗ್ಯಾಸ್ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ.

ಮತ್ತೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ನಿಂಬೆ ಹಣ್ಣು ಗಾತ್ರದ ಹುಣಸೆ ಹಣ್ಣನ್ನು ಹಾಕಿ 1 ನಿಮಿಷಗಳ ಕಾಲ ಫ್ರೈ ಮಾಡಿಕೊಂಡು ಒಂದು ಬಟ್ಟಲಿಗೆ ಹಾಕಿ ತಣ್ಣಗಾಗಲು ಬಿಡಿ. ನಂತರ ಒಂದು ಮಿಕ್ಸಿ ಜಾರಿಗೆ ಫ್ರೈ ಮಾಡಿಕೊಂಡ ಮಿಶ್ರಣವನ್ನು ಹಾಕಿ ತರಿ ತರಿಯಾಗಿ ಪುಡಿಮಾಡಿಕೊಳ್ಳಿ. ನಂತರ ಅದೇ ಮಿಕ್ಸಿ ಜಾರಿಗೆ ಹುಣಸೆಹಣ್ಣನ್ನು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ.

ಮತ್ತೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 5 – 6 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಅರ್ಧ ಸಾಸಿವೆ,1 ಚಮಚ ಉದ್ದಿನ ಬೇಳೆ , 4 ಮುರಿದ ಒಣಮೆಣಸಿನಕಾಯಿ, ಸ್ವಲ್ಪ ಕರಿಬೇವನ್ನು ಹಾಕಿ ಫ್ರೈ ಮಾಡಿಕೊಳ್ಳಿ.ನಂತರ ಇದಕ್ಕೆ ಕಡಲೆಬೀಜವನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಅರ್ಧ ಚಮಚ ಇಂಗು, ಅರ್ಧ ಚಮಚ ಅರಿಶಿನ ಪುಡಿ, 1 ಚಮಚ ಬಿಳಿ ಎಳ್ಳನ್ನು ಹಾಕಿ ಫ್ರೈ ಮಾಡಿಕೊಳ್ಳಿ.ನಂತರ ಇದಕ್ಕೆ ರುಬ್ಬಿದ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ ತಕ್ಷಣ ಗ್ಯಾಸ್ ಆಫ್ ಮಾಡಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕಷ್ಟು ಉಪ್ಪು ಹಾಗೂ ಬೆಲ್ಲವನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಕೊನೆಯದಾಗಿ ಅನ್ನವನ್ನು ಹಾಕಿ ಮಿಕ್ಸ್ ಮಾಡಿದರೆ ಸಾಂಪ್ರದಾಯಿಕ ರುಚಿಯ ಪುಳಿಯೋಗರೆ ಸವಿಯಲು ಸಿದ್ದ

Comments are closed.