ಸಾವಿರಾರು ಕೋಟಿ ಕಲೆಕ್ಷನ್ ಮಾಡಿರುವ ಕೆಜಿಎಫ್-2 ಗೆ ತುಪ್ಪ ಸುರಿದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ, ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪರಭಾಷೆಗಳಿಂದ ಕೂಡ ನಮ್ಮ ಚಿತ್ರರಂಗಕ್ಕೆ ಕಾಲಿಟ್ಟು ನಂತರ ಇಲ್ಲಿಯೇ ನೆಲೆಯನ್ನು ಕೊಂಡುಕೊಂಡ ನಟಿಯರು ಹಲವಾರು ಜನ ಇದ್ದಾರೆ. ಅವರಲ್ಲಿ ಇಂದಿಗೂ ಕೂಡ ಮೂಲತಹ ಕನ್ನಡಿಗರ ಎನ್ನುವಷ್ಟರಮಟ್ಟಿಗೆ ಕನ್ನಡ ಪ್ರೇಕ್ಷಕರ ಮಾನವನ್ನು ಗೆದ್ದಿರುವ ನಟಿ ರಾಗಿಣಿ ದ್ವಿವೇದಿ ಅವರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹೌದು ಗೆಳೆಯರೇ ಕನ್ನಡದ ತುಪ್ಪದ ಹುಡುಗಿ ಆಗಿರುವ ರಾಗಿಣಿ ದ್ವಿವೇದಿ ರವರು ವೀರಮದಕರಿ ಹಾಗೂ ಕೆಂಪೇಗೌಡ ಸಿನಿಮಾದಿಂದ ತಮ್ಮ ಜನಪ್ರಿಯತೆಯನ್ನು ಕನ್ನಡ ಚಿತ್ರರಂಗದಲ್ಲಿ ಹೆಚ್ಚಿಸಿಕೊಳ್ಳುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪರಭಾಷೆಗಳಲ್ಲಿ ಕೂಡ ಕೆಲವೊಂದು ಸಿನಿಮಾಗಳಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಅತ್ಯುತ್ತಮ ನಟಿಯಾಗಿರುವ ರಾಗಿಣಿ ರವರು ಇತ್ತೀಚಿಗೆ ಹಲವಾರು ವಿಚಾರಗಳ ಹಿನ್ನೆಲೆಯಲ್ಲಿ ಜೈಲುವಾಸವನ್ನು ಕೂಡ ಅನುಭವಿಸಿದ್ದರು. ನಂತರ ಲಾಕ್ಡೌನ್ ಸಂದರ್ಭದಲ್ಲಿ ಬಡವರಿಗೆ ಆಹಾರ ಹಾಗೂ ಆರ್ಥಿಕವಾಗಿ ಸಹಾಯ ಮಾಡುವ ಮೂಲಕವೂ ಕೂಡ ಮಾನವೀಯತೆಯನ್ನು ಮೆರೆದು ಎಲ್ಲರ ಮನಗೆದ್ದಿದ್ದರು. ಇನ್ನು ಮಾರ್ಚ್ 24ರಂದು ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದು ರಾಗಿಣಿ ದ್ವಿವೇದಿ ರವರು ಇದೇ ಸಂದರ್ಭದಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಕುರಿತಂತೆ ಮಾತನಾಡಿದ್ದಾರೆ.

ಹಾಗಿದ್ದರೆ ಕನ್ನಡದ ಹೆಮ್ಮೆಯ ಸಿನಿಮಾ ಆಗಿರುವ ಕೆಜಿಎಫ್ ಚಾಪ್ಟರ್ 2 ಚಿತ್ರದ ಕುರಿತಂತೆ ತುಪ್ಪದ ಬೆಡಗಿ ಏನು ಎಂದಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ. ಮೊದಲಿಂದಲೂ ಕೂಡ ಕನ್ನಡ ಚಿತ್ರರಂಗ ಉತ್ತಮ ಸಿನಿಮಾಗಳನ್ನು ಹಾಗೂ ಕಲಾವಿದರನ್ನು ಮತ್ತು ತಂತ್ರಜ್ಞರನ್ನು ಹೊಂದಿತ್ತು ಆದರೆ ಬೇರೆ ಭಾಷೆ ಚಿತ್ರರಂಗಕ್ಕೆ ಅದರ ಕುರಿತಂತೆ ಹೆಚ್ಚಾಗಿ ಪರಿಚಯವಾಗಿರಲಿಲ್ಲ. ಆದರೆ ಕೆಜಿಎಫ್ ಚಾಪ್ಟರ್ 2 ಚಿತ್ರ ಈ ಎಲ್ಲಾ ಅಡೆತಡೆಗಳನ್ನು ದಾಟಿ ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗವನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ ಎಂಬುದಾಗಿ ರಾಗಿಣಿ ಹೇಳಿದ್ದಾರೆ. ಹೀಗೆ ಮಾಡಲು ಕಾರಣರಾದ ಕೆಜಿಎಫ್ ಚಾಪ್ಟರ್ 2 ಚಿತ್ರ ತಂಡಕ್ಕೆ ಹಾಗೂ ಹೊಂಬಾಳೆ ಫಿಲಂಸ್ ಸಂಸ್ಥೆಗೆ ಧನ್ಯವಾದಗಳು ಎಂಬುದಾಗಿ ಹೇಳಿದ್ದಾರೆ. ರಾಗಿಣಿ ರವರ ಈ ಹೇಳಿಕೆಯ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.

Comments are closed.