ಸಾಮಾಜಿಕ ಜಾಲತಾಣದಲ್ಲಿ ತಮ್ಮ ಜಾತಕ ಹಂಚಿಕೊಂಡ ನಟಿ ರಂಜನಿ ರಾಘವನ್! ಹೇಗಿದೆ ಗೊತ್ತಾ ಜಾತಕ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ಧಾರವಾಹಿಗಳಲ್ಲಿ ಕನ್ನಡತಿ ಕೂಡ ಒಂದು. ಹೌದು ಇತ್ತೀಚಿನದಿನಗಳಲ್ಲಿ ಕನ್ನಡತಿ ಧಾರಾವಾಹಿ ಸಾಕಷ್ಟು ಜನಪ್ರಿಯತೆಯನ್ನು ಪಡೆಯುತ್ತಿದೆ ಇದೀಗ ಕನ್ನಡ ಕಿರುತೆರೆಯ ಧಾರಾವಾಹಿಯಾಗಿದೆ. ಇನ್ನು ಈ ಧಾರಾವಾಹಿಯು ಉತ್ತರ ಕರ್ನಾಟಕದ ಅಚ್ಚ ಕನ್ನಡ ಭಾಷೆಯನ್ನು ಹೊಂದಿದ್ದು ಕನ್ನಡಿಗರಿಗೆ ತುಂಬಾ ಇಷ್ಟವಾಗಿದೆ.

ಅಷ್ಟೇ ಅಲ್ಲದೆ ಇದು ತನ್ನ ವೀಕ್ಷಕರಿಗೆ ಸಾಕಷ್ಟು ಅಚ್ಚು ಕನ್ನಡದ ಪದಗಳ ಅರ್ಥವನ್ನು ಕೊನೆಯಲ್ಲಿ ಪ್ರಸಾರ ಮಾಡಿ ಅದರ ವಿಶೇಷವನ್ನು ಉಣಬಡಿಸುತ್ತದೆ. ಹಾಗಾಗಿ ಈ ಧಾರವಾಹಿಯು ಅತಿ ಹೆಚ್ಚು ವೀಕ್ಷಕರನ್ನು ಹೊಂದಿದೆ. ಇನ್ನು ಈ ಧಾರಾವಾಹಿಯಲ್ಲಿ ನಟಿಸುತ್ತಿರುವ ಕಲಾವಿದರು ಕೂಡ ಜನರಿಗೆ ಅವರ ಪಾತ್ರಗಳ ಮೂಲಕ ಮನರಂಜನೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ಸಾಕಷ್ಟು ವೀಕ್ಷಕರಿಗೆ ಈ ಧಾರಾವಾಹಿಯ ಅನೇಕ ಪಾತ್ರಗಳು ಕೂಡ ತುಂಬಾ ಇಷ್ಟವಾಗಿದೆ.

ಇನ್ನು ಕನ್ನಡತಿ ಧಾರಾವಾಹಿಯಲ್ಲಿ ನಾಯಕ ನಟಿಯಾಗಿ ಅಭಿನಯಿಸುತ್ತಿರುವ ರಂಜನಿ ರಾಘವನ್ ಅವರು ತಮ್ಮ ಪಾತ್ರದಲ್ಲಿ ಜೀವ ತುಂಬುವುದರ ಮೂಲಕ ಅದ್ಭುತವಾಗಿ ನಟನೆ ಮಾಡಿದ್ದಾರೆ. ಇನ್ನು ಇವರ ನಟನಿಗೆ ಮನಸೋತು ಸಾಕಷ್ಟು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಇವರ ಫ್ಯಾನ್ ಪೇಜ್ ಗಳನ್ನು ಕೂಡ ಸೃಷ್ಟಿಸಿದ್ದಾರೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಇವರ ಕ್ರೇಜ್ ಜಾಸ್ತಿ ಆಗಿದೆ ಎಂದು ಹೇಳಬಹುದು.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ ರಂಜನಿ ಅವರು ಇತ್ತೀಚಿಗಷ್ಟೇ ತಮ್ಮ ಜಾತಕದ ಫೋಟೋವನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಅವರ ಜಾತಕ ಹೇಗಿದೆ? ಇನ್ನು ಜಾತಕವನ್ನು ಸಾಮಾಜಿಕ ಜಾಲತಾಣದಲ್ಲಿ ಏಕೆ ಹಂಚಿಕೊಂಡಿದ್ದಾರೆ? ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಇಲ್ಲಿ ತಿಳಿಸಿಕೊಡುತ್ತೇವೆ ಬನ್ನಿ.

ಇನ್ನು ನಟಿ ರಂಜನಿ ಅವರು ಜಾತಕ ಫೋಟೋವನ್ನು ಹಂಚಿಕೊಳ್ಳುವುದರ ಮೂಲಕ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ, ಉತ್ತರಾಯಣ ಪುಣ್ಯಕಾಲದಲ್ಲಿ ಸೌಮ್ಯ ಜಾತಕ ಬದಲಾಗಿದೆ. ಜಾತಕದಲ್ಲಿ ಅವಳ ಏನೇನು ಗುಣ ಕಾಣಿಸ್ತಾ ಇದೆ ಕಮೆಂಟ್ ಮಾಡಿ ಎಂದು ಬರೆದುಕೊಂಡಿದ್ದಾರೆ. ಇದೀಗ ರಂಜನಿ ಅವರ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು,

ಸಾಕಷ್ಟು ಜನರು ಕಮೆಂಟ್ ಮಾಡುವುದರ ಮೂಲಕ ಜಾತಕದಲ್ಲಿ ಯಾವ ಗುಣಗಳೂ ಇವೆ ಎಂಬುದನ್ನು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಈ ಜಾತಕದ ವಿಶೇಷ ಏನೆಂದರೆ ಇದು ಅವರ ನಿಜವಾದ ಜಾತಕ ಅಲ್ಲ. ಹೌದು ಇದು ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಎಂಬ ಸಿನಿಮಾದ ಪೋಸ್ಟರ್ ಆಗಿದೆ. ಹೌದು ಈ ಸಿನಿಮಾದಲ್ಲಿ ರಂಜನಿ ರಾಘವನ್ ಅವರು ನಟಿಸುತ್ತಿದ್ದು ಈ ಚಿತ್ರದ ಪೋಸ್ಟರ್ ಡಿಸೈನ್ ಗಾಗಿ ಧನ್ಯವಾದಗಳನ್ನು ಹೇಳುತ್ತಾ ಸಿನಿಮಾದ ನಿರ್ದೇಶಕರಿಗೆ ಟ್ಯಾಗ್ ಮಾಡಿದ್ದಾರೆ.

Comments are closed.