ರಶ್ಮಿಕ ಮಂದಣ್ಣ ವಿದೇಶಕ್ಕೆ ಹೋಗಿದ್ದು ಯಾರನ್ನು ನೋಡೋದಕ್ಕೆ ಗೊತ್ತಾ?? ಕೊನೆಗೂ ಬಯಲಾಯ್ತು ಅಸಲಿ ಕಾರಣ.

ನಮಸ್ಕಾರ ಸ್ನೇಹಿತರೇ ಕೊಡಗಿನ ಕುವರಿ ಆಗಿರುವ ರಶ್ಮಿಕ ಮಂದಣ್ಣ ನವರು ಕನ್ನಡ ಚಿತ್ರರಂಗದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟು ನಂತರ ಇಡೀ ಭಾರತ ಚಿತ್ರರಂಗದ ಅತ್ಯಂತ ಬಹುಬೇಡಿಕೆಯ ನಾಯಕಿಯಾಗಿ ಹೆಸರನ್ನು ಸಂಪಾದಿಸಿದ್ದಾರೆ. ಐದು ವರ್ಷದ ಸಿನಿಮಾ ಜರ್ನಿಯಲ್ಲಿ ರಶ್ಮಿಕ ಮಂದಣ್ಣ ನವರು ಇದುವರೆಗೂ 12 ಚಿತ್ರಗಳಲ್ಲಿ ನಟಿಸಿದ್ದಾರೆ. ನಟಿಸಿದ ಎಲ್ಲಾ ಸಿನಿಮಾಗಳು ಕೂಡ ಬಾಕ್ಸಾಫೀಸ್ ನಲ್ಲಿ ಮತ್ತು ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುನೀತ್ ರಾಜಕುಮಾರ್ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಧ್ರುವ ಸರ್ಜಾ ರವರೊಂದಿಗೆ ನಟಿಸಿದ್ದಾರೆ.

ತೆಲುಗಿನಲ್ಲಿ ಮಹೇಶ್ ಬಾಬು ನಾನಿ ವಿಜಯ್ ದೇವರಕೊಂಡ ಈಗ ಅಲ್ಲು ಅರ್ಜುನ್ ರವರೊಂದಿಗೆ ಕೂಡ ನಟಿಸಿದ್ದಾರೆ. ಇನ್ನು ತಮಿಳಿನಲ್ಲಿ ಕಾರ್ತಿ ಅವರ ಜೊತೆಗೆ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ಹಿಂದಿ ಚಿತ್ರರಂಗದಲ್ಲಿ ಕೂಡ ಈಗಾಗಲೇ ರಶ್ಮಿಕ ಮಂದಣ್ಣ ಅವರು ತಮ್ಮ ಛಾಪನ್ನು ಮೂಡಿಸಲು ಸಿದ್ದರಾಗಿದ್ದಾರೆ. ಒಟ್ಟಾರೆಯಾಗಿ ಇಡೀ ಭಾರತೀಯ ಚಿತ್ರರಂಗದ ರಶ್ಮಿಕ ಮಂದಣ್ಣ ನವರ ನಾಮಜಪ ಮಾಡುತ್ತಿದೆ ಎಂದರೆ ತಪ್ಪಾಗಲಾರದು. ಇನ್ನು ಇತ್ತೀಚಿಗಷ್ಟೇ ರಶ್ಮಿಕಾ ಮಂದಣ್ಣ ನವರು ಅಮೆರಿಕ ಹಾಗೂ ಪ್ಯಾರಿಸ್ನಲ್ಲಿ ಸುತ್ತಾಟ ಮಾಡಿಕೊಂಡು ಬಂದಿದ್ದರು.

rashmika 27 | ರಶ್ಮಿಕ ಮಂದಣ್ಣ ವಿದೇಶಕ್ಕೆ ಹೋಗಿದ್ದು ಯಾರನ್ನು ನೋಡೋದಕ್ಕೆ ಗೊತ್ತಾ?? ಕೊನೆಗೂ ಬಯಲಾಯ್ತು ಅಸಲಿ ಕಾರಣ.
ರಶ್ಮಿಕ ಮಂದಣ್ಣ ವಿದೇಶಕ್ಕೆ ಹೋಗಿದ್ದು ಯಾರನ್ನು ನೋಡೋದಕ್ಕೆ ಗೊತ್ತಾ?? ಕೊನೆಗೂ ಬಯಲಾಯ್ತು ಅಸಲಿ ಕಾರಣ. 2

ಈ ಹಿಂದೆಯಷ್ಟೇ ರಶ್ಮಿಕ ಮಂದಣ್ಣ ನವರ ಹೆಸರು ವಿಜಯ್ ದೇವರಕೊಂಡ ರವರ ಜೊತೆಗೆ ಕೇಳಿಬಂದಿತ್ತು. ಹೀಗಾಗಿ ರಶ್ಮಿಕ ಮಂದಣ್ಣ ನವರು ಬಾಯ್ಫ್ರೆಂಡ್ ಅನ್ನು ನೋಡಲು ವಿದೇಶಕ್ಕೆ ಹಾರಿದ್ದಾರೆ ಎಂಬುದಾಗಿ ಸುದ್ದಿ ಕೇಳಿಬಂದಿತ್ತು. ಇನ್ನು ವಿಜಯ್ ದೇವರಕೊಂಡ ರವರ ಚಿತ್ರೀಕರಣ ಕೂಡ ಫಾರಿನ್ ನಲ್ಲಿ ನಡೆಯುತ್ತಿತ್ತು. ಹೀಗಾಗಿ ಮಾಹಿತಿಗಳ ಪ್ರಕಾರ ರಶ್ಮಿಕ ಮಂದಣ್ಣ ನವರು ವಿಜಯ್ ದೇವರಕೊಂಡ ರವರನ್ನು ನೋಡಲು ವಿದೇಶಕ್ಕೆ ಹಾರಿದ್ದಾರೆ ಎಂಬ ಸುದ್ದಿಗಳು ಬಲವಾಗಿ ಕೇಳಿ ಬಂದಿತ್ತು. ಇದು ಎಷ್ಟರ ಮಟ್ಟಿಗೆ ನಿಜ ಹಾಗೂ ಎಷ್ಟರಮಟ್ಟಿಗೆ ಸುಳ್ಳು ಎನ್ನುವುದನ್ನು ಮುಂದಿನ ದಿನಗಳಲ್ಲಿ ರಶ್ಮಿಕಾ ಮಂದಣ್ಣ ನವರ ಬಾಯಿಯಲ್ಲಿ ಕೇಳಬೇಕಾಗಿದೆ. ಈ ಸುದ್ದಿಯ ಕುರಿತಂತೆ ನಿಮ್ಮ ಅಭಿಪ್ರಾಯ ಏನೆಂಬುದನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.