ನಾಯಕನಾದ ಕೂಡಲೇ ತನ್ನ ಪತ್ನಿಗಾಗಿ ಹೊಸ ಕೆಲಸ ಮಾಡಿದ ರೋಹಿತ್ ಶರ್ಮ, ಹೆಂಡತಿ ಆಸೆಯನ್ನು ಪೂರೈಸಲು ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮೈದಾನದಲ್ಲಿ ಸಿಕ್ಸ್,ಫೋರ್ ಭಾರಿಸುವುದೆಂದರೇ ಅವರಿಗೆ ಸಲೀಸು. ದ್ವಿಶತಕ ಭಾರಿಸುವುದರಲ್ಲಿ ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿರುವ ರೋಹಿತ್, ಸದ್ಯ ಭಾರತ ತಂಡದ ಏಕದಿನ ಹಾಗೂ ಟಿ 20 ತಂಡದ ನಾಯಕರಾಗಿದ್ದಾರೆ. ಈ ನಡುವೆ ಕಂಪ್ಲೀಟ್ ಫ್ಯಾಮಿಲಿ ಮ್ಯಾನ್ ಆಗಿರುವ ರೋಹಿತ್, ಪತ್ನಿ ರಿತಿಕಾ ಹಾಗೂ ಮುದ್ದು ಮಗಳಿಗೂ ಸಾಕಷ್ಟು ಸಮಯ ನೀಡುತ್ತಾರೆ. ರೋಹಿತ್ ಶರ್ಮಾ ಎಲ್ಲಿಯೇ ಹೋದರೂ ಪತ್ನಿ ಹಾಗೂ ಮಗಳನ್ನು ಜೊತೆಗೆ ಕರೆದೊಯ್ಯುತ್ತಾರೆ.

rohith sharma | ನಾಯಕನಾದ ಕೂಡಲೇ ತನ್ನ ಪತ್ನಿಗಾಗಿ ಹೊಸ ಕೆಲಸ ಮಾಡಿದ ರೋಹಿತ್ ಶರ್ಮ, ಹೆಂಡತಿ ಆಸೆಯನ್ನು ಪೂರೈಸಲು ಮಾಡಿದ್ದೇನು ಗೊತ್ತೇ??
ನಾಯಕನಾದ ಕೂಡಲೇ ತನ್ನ ಪತ್ನಿಗಾಗಿ ಹೊಸ ಕೆಲಸ ಮಾಡಿದ ರೋಹಿತ್ ಶರ್ಮ, ಹೆಂಡತಿ ಆಸೆಯನ್ನು ಪೂರೈಸಲು ಮಾಡಿದ್ದೇನು ಗೊತ್ತೇ?? 2

ಈಗ ಪತ್ನಿಗಾಗಿ ರೋಹಿತ್ ಮತ್ತೊಂದು ಕೆಲಸ ಮಾಡಿದ್ದಾರೆ. ಪತ್ನಿ ರಿತಿಕಾ ಆಸೆಯಂತೆ, ಅವರ ಹೆಸರಿನಲ್ಲಿ ಮುಂಬೈನ ಅಲಿಬಾಗ್ ನಲ್ಲಿ 9 ಕೋಟಿ ರೂಪಾಯಿ ಮೌಲ್ಯದ ನಾಲ್ಕು ಎಕರೆ ಜಮೀನು ಖರೀದಿಸಿದ್ದಾರಂತೆ. ಬಹಳ ಹಿಂದೆಯೇ ರೋಹಿತ್ ಪತ್ನಿ, ಇಲ್ಲಿ ಜಾಗ ಖರೀದಿಸಿ, ಫಾರ್ಮ್ ಹೌಸ್ ನಿರ್ಮಿಸಲು ಆಸೆ ಪಟ್ಟಿದ್ದರಂತೆ. ಆ ಆಸೆಯನ್ನ ಈಡೇರಿಸಲು ರೋಹಿತ್ ಒಂಬತ್ತು ಕೋಟಿ ಮೌಲ್ಯದ ನಾಲ್ಕು ಎಕರೆ ಜಾಗವನ್ನ ಪತ್ನಿ ರಿತಿಕಾ ಹೆಸರಿನಲ್ಲಿಯೇ ಖರೀದಿಸಿದ್ದಾರೆ. ಈ ಹಿಂದೆಯೇ ಜಾಗ ನೋಡಿದ್ದ ರೋಹಿತ್, ಈಗ ನೋಂದಣಿ ಪ್ರಕ್ರಿಯೆಯನ್ನ ಪೂರ್ಣಗೊಳಿಸಿದ್ದಾರೆ.

ಸದ್ಯ ಇಂಜುರಿ ಸಮಸ್ಯೆ ಕಾರಣ ದಕ್ಷಿಣ ಆಫ್ರಿಕಾದ ವಿರುದ್ದದ ಟೆಸ್ಟ್ ಸರಣಿಯಿಂದ ಹೊರಬಿದ್ದಿರುವ ರೋಹಿತ್, ಏಕದಿನ ಸರಣಿ ವೇಳೆ ಚೇತರಿಸಿಕೊಳ್ಳುವ ಲಕ್ಷಣವಿದೆ. ಭಾರತದ ಪ್ರಸಿದ್ದ ಕ್ರಿಕೇಟ್ ತಾರೆಗಳಾದ ಸಚಿನ್, ವಿರಾಟ್, ಧೋನಿ, ರವಿಶಾಸ್ತ್ರಿ ಖರೀದಿಸಿದ ಅಲಿಬಾಗ್ ನಲ್ಲಿಯೇ ಈಗ ರೋಹಿತ್ ಜಾಗ ಖರೀದಿಸಿರುವುದು ವಿಶೇಷವಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.