ಲವ್ ಮಾಡಿ ಮಾಡಿಕೊಳ್ಳುತ್ತಿರುವ ಸಂಜನಾ ಚಿದಾನಂದ್, ಹುಡುಗ ಕೂಡ ಖ್ಯಾತ ಟಾಪ್ ಸೆಲೆಬ್ರೆಟಿ. ಯಾರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡದ ಕಿರುತೆರೆಯಲ್ಲಿ ಹಲವಾರು ನಟಿಯರ ಹೆಸರು ಟ್ರೆಂಡ್ ಆಗಿ ಹೋಗಿದ್ದು ನೀವೂ ನೋಡಿರ್ತೀರ. ಒಂದು ಚಿಕ್ಕ ಅವಕಾಶ ಸಾಕು ಅವರು ಲೈಮ್ ಲೈಟ್ ಗೆ ಬರೋಕೆ. ಅಂತವರಲ್ಲಿ ಇವರು ಕೂಡ ಒಬ್ಬರು. ಧಾರವಾಹಿ ಹಾಗೂ ಬಿಗ್ ಬಾಸ್ ನಂತಹ ರಿಯಾಲಿಟಿ ಶೋಗಳಲ್ಲಿ ಕೂಡ ಕಂಡು ಕನ್ನಡಿಗರ ಮನೆ ಮನೆಯ ಮಾತಾದವರು.ನಾವು ಇಂದು ಮಾತನಾಡ್ತಿರೋದು ಸಂಜನಾ ಚಿದಾನಂದ್ ರವರ ಬಗ್ಗೆ.

ಸಂಜನಾ ಚಿದಾನಂದ್ ರವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕುಲವಧು ಧಾರವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಇವರು ನಂತರದ ದಿನಗಳಲ್ಲಿ ಕಿಚ್ಚ ಸುದೀಪ್ ರವರು ನಡೆಸಿಕೊಡುವ ಕನ್ನಡದ ಕಿರುತೆರೆಯ ಇತಿಹಾಸದಲ್ಲಿ ನಡೆಸಿಕೊಡುವ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಪಾಲ್ಗೊಂಡಿದ್ದರು. ಬಿಗ್ ಬಾಸ್ ಕನ್ನಡದ 4ನೇ ಸೀಸನ್ ನಲ್ಲಿ ಸಂಜನಾ ಚಿದಾನಂದ್ ಪಾಲ್ಗೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಕೂಡ ಸಂಜನಾ ಚಿದಾನಂದ್ ತಮ್ಮ ಕ್ಯೂಟ್ ಫೇಸ್.

ಕ್ಯಾಮೆರಾ ಜೊತೆ ಮಾತನಾಡುವ ಮೂಲಕ ಬಿಗ್ ಬಾಸ್ ವೀಕ್ಷಕರು ಗಮನ ಸೆಳೆದಿದ್ದರು. ಬಿಗ್ ಬಾಸ್ ಮನೆಯಲ್ಲಿ ಮನೋರಂಜನೆ ಕೂಡ ಈಕೆ ನೀಡಿದ್ದರು. ಬಿಗ್ ಬಾಸ್ ನಂತರ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆದವರು ನಟಿ ಸಂಜನಾ ಚಿದಾನಂದ್. ಸಂಜನಾ ಚಿದಾನಂದ್ ರವರು ಈ ಟ್ರೋಲ್ ಗಳನ್ನು ನೋಡಿ ಹಿಂಜರಿಯದೆ ಇದರಿಂದಲೇ ಅವರು ಖ್ಯಾತಿಯನ್ನು ಸಹ ಪಡೆದರು. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಲಕ್ಷಾಂತರ ಫಾಲೋವರ್ಸ್ ನ್ನು ಹೊಂದಿದ್ದಾರೆ ಸಂಜನಾ ಚಿದಾನಂದ್.

ಬಿಗ್ ಬಾಸ್ ಸಂದರ್ಭದಲ್ಲಿ ಹಲವರ ಗೆಳೆತನ ಕೂಡ ಇವರಿಗೆ ಆಗಿತ್ತು. ಬಿಗ್ ಬಾಸ್ ನಿಂದ ಹೊರಬರುತ್ತಿದ್ದಂತೆ ಹಲವಾರು ಅವಕಾಶಗಳು ಇವರನ್ನು ಕಾಯುತ್ತಿದ್ದವು. ಸಂಜನಾ ಚಿದಾನಂದ್ ಉಡುoಬ, ಮೊoಬತ್ತಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೂ ಕಿರಿಕ್ ಕೀರ್ತಿ ನಾಯಕನಾಗಿ ಅಭಿನಯಿಸಿರುವ ಮೊದಲ ಸಿನಿಮಾದಲ್ಲಿ ಸಂಜನಾ ನಾಯಕಿಯಾಗಿ ನಟಿಸಿದ್ದಾರೆ. ಅಲ್ಲದೇ ಅದಾದ ನಂತರ ಹಲವಾರು ಧಾರವಾಹಿಗಳಲ್ಲಿ ಅತಿಥಿ ಪಾತ್ರಗಳಲ್ಲಿ ಹಾಗೂ ಕೆಲವು ರಿಯಾಲಿಟಿ ಶೋನಲ್ಲಿ ಕೂಡ ಭಾಗವಹಿಸಿದ್ದರು.

ಇನ್ನು ಇವರ ಮದುವೆ ವಿಷಯದ ಕುರಿತಂತೆ ಆಗಾಗ್ಗೆ ತುಂಬಾ ವಿಷಯಗಳು ಚರ್ಚೆಗೊಂಡಿದ್ದವು. ಸಂಜನಾ ಚಿದಾನಂದ್ ರವರ ಮದುವೆ ಕುರಿತಂತೆ ಹಲವಾರು ಗುಸುಗುಸು ಸುದ್ಧಿಗಳು ಚಿತ್ರರಂಗದಲ್ಲಿ ಹರಿದಾಡುತ್ತಿದ್ದವು. ಹಲವಾರು ಯುವ ನಟರೊಂದಿಗೆ ಸಂಜನಾ ಚಿದಾನಂದ್ ರವರ ಹೆಸರು ಕೇಳಿಬಂದಿತ್ತು. ಇದರಲ್ಲಿ ಮುಖ್ಯವಾಗಿ ಚಿತ್ರರಂಗದಲ್ಲಿ ಯುವ ನಟನಾಗಿ ಹಾಗೂ ಬಿಗ್ ಬಾಸ್ , ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ಭುವನ್ ಪೊನ್ನಣ ಸಂಜನಾ ಚಿದಾನಂದ್ ರವರನ್ನು ಮದುವೆಯಾಗಲಿದ್ದಾರೆ ಎಂಬ ಗಾಳಿಸುದ್ಧಿಯೆಲ್ಲ ಎಲ್ಲಾ ಕಡೆ ಹಬ್ಬಿತ್ತು.

ನಂತರದ ದಿನಗಳಲ್ಲಿ ಇದೆಲ್ಲಾ ಗಾಳಿಸುದ್ಧಿ ಎಂಬುದು ಎಲ್ಲರಿಗೂ ಗೊತ್ತಾಗಿತ್ತು. ಈಗ ಎಲ್ಲರ ಕನ್ಫ್ಯೂಷನ್ ಒಂದೆ ಸಂಜನಾ ಚಿದಾನಂದ್ ರವರು ಮದುವೆಯಾಗುತ್ತಿರುವ ಹುಡುಗ ಯಾರು ಎಂಬುದು. ಬನ್ನಿ ಅದನ್ನು ಕೂಡ ಇಲ್ಲೇ ಹೇಳಿ ಬಿಡ್ತೀವಿ. ಸಂಜನಾ ಚಿದಾನಂದ್ ರವರು ಸ್ವತಃ ತಾವೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಾವು ಮುಂದೆ ಮದುವೆಯಾಗಲಿರುವ ಭಾವಿ ಪತಿಯ ಕುರಿತಂತೆ ಅವರ ಫೋಟೋವನ್ನು ಪೋಸ್ಟ್ ಮಾಡಿ ತಮ್ಮ ಮನದಾಳದ ಮಾತುಗಳನ್ನು ಗೀಚಿದ್ದಾರೆ.

ಸಂಜನಾ ಚಿದಾನಂದ್ ರವರನ್ನು ಮದುವೆಯಾಗುವವರ ಹೆಸರು ಮೋಹನ್ ಎಂದು. ಅವರು ಕೂಡ ಸಿನಿಮಾ ಹಿನ್ನೆಲೆಯುಳ್ಳವರೇ. ಇಬ್ಬರು ಲವ್ ಮ್ಯಾರೇಜ್ ನ್ನು ಹೆತ್ತವರ ಪರಸ್ಪರ ಒಪ್ಪಿಗೆಯ ಮೇರೆಗೆ ಆಗಲಿದ್ದಾರೆ. ಶೀಘ್ರದಲ್ಲೇ ಮದುವೆಯಾಗಲಿರುವ ಈ ಲವ್ ಬರ್ಡ್ಸ್ ಗೆ ನಾವು ಶುಭ ಹಾರೈಸೋಣ. ಇವರಿಬ್ಬರ. ಮದುವೆಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಈ ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ‌.

Comments are closed.