ಪತಿಯ ಚಿಂತೆ ಮರೆತು ಬಿಂದಾಸಾಗಿ ಕುಣಿತ ಶಿಲ್ಪಶೆಟ್ಟಿ ಅವರ ವಿಡಿಯೋ ಫುಲ್ ವೈರಲ್?? ಹೇಗಿದೆ ನೋಡಿದ್ದೀರಾ??

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಡ್ರಾಮಗಳು ಹಾಗೂ ಗಾಸಿಪ್ ಗಳು ನಡೆಯುತ್ತಲೇ ಇರುತ್ತದೆ. ಇನ್ನು ಇತ್ತೀಚಿಗೆ ಮಂಗಳೂರು ಮೂಲದ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಶಿಲ್ಪಾ ಶೆಟ್ಟಿಯವರ ಪತಿ ರಾಜ್ ಕುಂದ್ರಾ ಅವರು ಜೈಲಿಗೆ ಹೋಗಿದ್ದರು. ಹೌದು ಗೆಳೆಯರೇ ಉದ್ಯಮಿ ರಾಜ್ ಕುಂದ್ರಾ ರವರು ಬೇಡದ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂಬ ಆರೋಪದಡಿಯಲ್ಲಿ ಕಂಬಿಯ ಹಿಂದೆ ಹೋಗಿದ್ದರು. ಇನ್ನು ಇದರಿಂದಾಗಿ ನಟಿ ಶಿಲ್ಪ ಶೆಟ್ಟಿ ಅವರು ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ.

ಕಾರ್ಯಕ್ರಮಗಳೇನು ಮನೆಯಿಂದ ಹೊರ ಬಂದಿದ್ದನ್ನು ಕೂಡ ಯಾರೂ ನೋಡಿರಲಿಲ್ಲ. ರಾಜ್ ಕುಂದ್ರಾ ರವರ ಪ್ರಕರಣ ಶಿಲ್ಪಾ ಶೆಟ್ಟಿ ಹಾಗೂ ಅವರ ಮನೆಯವರಿಗೆ ಮುಜುಗರ ಉಂಟಾಗುವಂತೆ ಮಾಡಿತು. ಹೀಗಾಗಿಯೇ ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಅವರು ಸಕ್ರಿಯರಾಗಿ ಇರಲಿಲ್ಲ. ಇನ್ನು ಇತ್ತೀಚಿಗಷ್ಟೇ ರಾಜ್ ಕುಂದ್ರಾ ಅವರಿಗೆ ಜಾಮೀನು ದೊರೆತಿದ್ದು ಮನೆಗೆ ಬಂದಿದ್ದಾರೆ. ಇನ್ನು ಈಗ ಶಿಲ್ಪ ಶೆಟ್ಟಿ ಅವರು ಮುಜುಗರ ಹಾಗೂ ಚಿಂತೆಯಿಂದ ಹೊರಬಂದಂತಿದೆ. ಯಾಕೆಂದರೆ ಹಲವಾರು ಸಮಯಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೊಂದು ಸಕ್ರಿಯರಾಗಿ ಇರದಂತಹ ನಟಿ ಶಿಲ್ಪಾ ಶೆಟ್ಟಿ ಅವರು ಗಂಡನ ಜಾಮೀನು ದೊರೆತ ಮೇಲೆ ಈಗ ಫುಲ್ ಆಕ್ಟಿವ್ ಆಗಿದ್ದಾರೆ.

ಹೌದು ಗೆಳೆಯರೆ ಶಿಲ್ಪ ಶೆಟ್ಟಿ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಟ್ರೈನ್ ಸಾಂಗ್ ಗಳಿಗೆ ವಿಡಿಯೋ ಮಾಡುವುದನ್ನು ಮತ್ತೊಮ್ಮೆ ಮುಂದುವರಿಸಿದ್ದಾರೆ. ಈಗಾಗಲೇ ಹಲವಾರು ವಿಡಿಯೋಗಳನ್ನು ಕೂಡ ಪೋಸ್ಟ್ ಮಾಡಿದ್ದಾರೆ ಇನ್ನು ಅಭಿಮಾನಿಗಳು ಕೂಡ ಇದನ್ನು ಮೆಚ್ಚಿದ್ದಾರೆ. ಶಿಲ್ಪ ಶೆಟ್ಟಿ ಅವರ ಪೋಸ್ಟ್ ಗಳಿಗೆ ಲಕ್ಷಾಂತರ ಜನರು ಮೆಚ್ಚುಗೆಯನ್ನು ನೀಡುತ್ತಿದ್ದಾರೆ. ಇನ್ನು ಫಿಟ್ನೆಸ್ ಕುರಿತಂತೆ ಕೂಡ ಪಾಠವನ್ನು ಪ್ರಾರಂಭಿಸಿದ್ದಾರೆ ನಮ್ಮ ಬಾಲಿವುಡ್ನ ಫಿಟ್ನೆಸ್ ನಾಯಕಿ ಶಿಲ್ಪ ಶೆಟ್ಟಿ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.