ವ್ಹಾ: ಶಿರಾ ಪ್ರಚಾರದಲ್ಲಿ ವಿಜಯೇಂದ್ರ ಕುರಿತು ಜಮೀರ್ ಹೇಳಿದ್ದನ್ನು ಕಂಡು ಬಿಜೆಪಿ ಬೆಂಬಲಿಗರು ಟಾಂಗ್ ನೀಡಿದ ನೀಡಿದ್ದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಶಿರಾ ಹಾಗೂ ರಾಜರಾಜೇಶ್ವರಿ ನಗರದಲ್ಲಿ ಉಪಚುನಾವಣೆ ನಡೆಯಲಿದೆ. ಒಂದೆಡೆ ರಾಜರಾಜೇಶ್ವರಿ ನಗರದಲ್ಲಿ ರಾಜಕೀಯ ಪಂಡಿತರ ಲೆಕ್ಕಾಚಾರದಂತೆ ಮುನಿರತ್ನ ಅವರು ಎಲ್ಲ ಮಾಧ್ಯಮಗಳ ಸಮೀಕ್ಷೆಗಳಲ್ಲಿ ಗೆಲುವು ಸಾಧಿಸುವ ಸೂಚನೆ ನೀಡುತ್ತಿದ್ದಾರೆ. ಮತ್ತೊಂದೆಡೆ ಚುನಾವಣೆಗೂ ಮುನ್ನ ಮೂರನೇ ಸ್ಥಾನದಲ್ಲಿದ್ದ ಬಿಜೆಪಿ ಪಕ್ಷವನ್ನು ಶಿರಾ ಕ್ಷೇತ್ರದಲ್ಲಿ ವಿಜಯೇಂದ್ರ ಅವರು ಗೆಲುವಿನ ಕಡೆಗೆ ಕೊಂಡೊಯ್ಯುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದರ ಬೆನ್ನಲ್ಲೇ ಎರಡು ಕ್ಷೇತ್ರಗಳು ಭಾರಿ ಕುತೂಹಲ ಕೆರಳಿಸಿರುವ ಕಾರಣ ಹಲವಾರು ದಿಗ್ಗಜ ರಾಜಕೀಯ ನಾಯಕರು ಎರಡು ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ನಿನ್ನೆ ಅದರಂತೆಯೇ ಕಾಂಗ್ರೆಸ್ ಪಕ್ಷದ ಶಾಸಕ ಜಮೀರ್ ಅಹ್ಮದ್ ರವರು ಮುಸ್ಲಿಂ ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ಶಿರಾ ಕ್ಷೇತ್ರದಲ್ಲಿ ಪ್ರಮುಖ ರಾಲಿ ನಡೆಸಿದರು. ರಾಲಿ ನಡೆಸುವ ಸಂದರ್ಭದಲ್ಲಿ ವಿಪಕ್ಷ ನಾಯಕರ ಮೇಲೆ ಟೀಕೆಗಳ ಬಾಣಗಳು ಸಹಜ, ಆದರೆ ಹಗುರವಾಗಿ ಮಾತನಾಡುವುದು ರಾಜಕೀಯದಲ್ಲಿ ಒಳ್ಳೆಯದಲ್ಲ ಎಂದು ಹಲವಾರು ಬಾರಿ ಸಾಬೀತಾದರೂ ಕೂಡ ಮತ್ತೊಮ್ಮೆ ಜಮೀರ್ ಅರಬರು ಅದೇ ರೀತಿಯ ಮಾತುಗಳನ್ನು ಆಡಿದ್ದಾರೆ.

ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಹಲವಾರು ಲೋಕಸಭಾ ಕ್ಷೇತ್ರಗಳಲ್ಲಿ ನಾನು ಜನರನ್ನು ಭೇಟಿಯಾಗಿದ್ದೇನೆ ಯಾರೇ ಕೇಳಿದರೂ ದೇಶದ ಒಳಿತಿಗಾಗಿ ಇರುವ ಪಕ್ಷವನ್ನು ಗೆಲ್ಲಿಸುತ್ತೇವೆ ಎಂದಿದ್ದರೂ ಯಾವ ಪಕ್ಷ ಎಂದು ಪ್ರಶ್ನೆ ಮಾಡಿದ ತಕ್ಷಣ ನನಗೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುತ್ತೇವೆ ಎಂದು ಉತ್ತರ ನೀಡಿದರು ಎಂದು ಹೇಳುವ ಮೂಲಕ ಮೋದಿ ಅವರು ಗೆಲ್ಲಲು ಸಾಧ್ಯವೇ ಇಲ್ಲ ಎಂದು ವ್ಯಂಗ್ಯ ಮಾಡಿ ವಿವಿಧ ರೀತಿಯ ಹಗುರವಾದ ಮಾತುಗಳನ್ನು ಆಡಿದ ಜಮೀರ್ ಅಹಮದ್ ರವರು ಇದೀಗ ಮತ್ತೊಮ್ಮೆ ವಿಜಯೇಂದ್ರ ರವರ ಕುರಿತು ಪ್ರಶ್ನೆ ಮಾಡಿದಾಗ ಯಾರು ವಿಜಯೇಂದ್ರ?? ಮುಖ್ಯಮಂತ್ರಿ ಯಡಿಯೂರಪ್ಪನವರು ಅವರು ಮುಖ್ಯಮಂತ್ರಿಯಾಗಿರುವ ಕಾರಣ ಇಲ್ಲಿ ಬಂದು ಪ್ರಚಾರ ಮಾಡಬಹುದು. ವಿಜಯೇಂದ್ರ ಎಂಬುವವರು ಕೇವಲ ಮುಖ್ಯಮಂತ್ರಿ ಮಗ ಆತನಿಗೆ ಯಾವುದೇ ಸ್ಥಾನಮಾನ ಅವನೇನು ಪಾಳೇಗಾರನ ವಿಜಯೇಂದ್ರ ರವರು ಏನು ಮಾಡಲು ಸಾಧ್ಯವಿಲ್ಲ ಎಂದು ಹಗುರವಾದ ಮಾತುಗಳನ್ನು ಆಡಿದ್ದಾರೆ.

KR ಪೇಟೆಯಲ್ಲಿ ಸಚಿವ ನಾರಾಯಣಗೌಡ ರವರು ಮಾಡಿದ ಒಳ್ಳೆಯ ಕಾರ್ಯಗಳಿಂದ ಅವರು ಮತ್ತೊಮ್ಮೆ ಗೆದ್ದಿದ್ದಾರೆ ವಿನಹ ಇದರಲ್ಲಿ ವಿಜಯೇಂದ್ರ ರವರ ಪಾತ್ರ ಇಲ್ಲವೇ ಇಲ್ಲ. ಸುಮ್ಮನೆ ನಾನು ಕೆ ಆರ್ ಪೇಟೆಯಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿದ್ದೇನೆ ಎಂದು ಕ್ರೆಡಿಟ್ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ, ವಿಜಯೇಂದ್ರ ರವರ ಕೈಯಲ್ಲಿ ಏನೂ ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನು ಕೇಳಿದ ಬಿಜೆಪಿ ಭಕ್ತರು ಇವರ ಮನೆ ಮುಂದೆ ನೀನು ವಾಚ್ಮೆನ್ ಆಗಿ ಕೆಲಸ ಮಾಡಬೇಕಾಗಿದೆ, ಅವರ ಕುರಿತು ತಿಳಿದುಕೊಳ್ಳದೆ ಅವರು ಯಾರು ಎಂದು ಕೇಳುವ ಮುನ್ನ ದಯವಿಟ್ಟು ಎಲ್ಲ ಮಾಹಿತಿ ತೆಗೆದುಕೊಂಡು ವಾಚ್ಮೆನ್ ಕೆಲಸಕ್ಕೆ ಸೇರಿಕೊಳ್ಳಿ ಇಲ್ಲವಾದರೆ ಯಾರಾದರೂ ಇವರನ್ನು ಭೇಟಿಯಾಗಲು ಬಂದಾಗ ವಿಜಯೇಂದ್ರ ಎಂದರೆ ಯಾರು ಅವರು ಇಲ್ಲ ಎಂದು ಹೇಳಿ ಬಿಟ್ಟಿರಾ, ಅಷ್ಟೇ ಅಲ್ಲದೆ ವಿಜಯೇಂದ್ರ ರವರು ಗೆಲ್ಲಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದೀರಾ ನೀವು ಎಷ್ಟು ಕ್ಷೇತ್ರಗಳಲ್ಲಿ ನಿಮ್ಮ ಪಕ್ಷವನ್ನು ಗೆಲ್ಲಿಸುವಲ್ಲಿ ಸಫಲರಾಗಿದ್ದಿರಾ ?? ಕೇವಲ ಮುಸ್ಲಿಂ ಮತಗಳನ್ನು ನಂಬಿಕೊಂಡು ನಿಮ್ಮ ಕ್ಷೇತ್ರದಲ್ಲಿ ಕೂಡ ನೀವು ಗೆಲುವು ಸಾಧಿಸುತ್ತೀರಿ ಎಂದು ಟಾಂಗ್ ನೀಡಿದ್ದಾರೆ.

Comments are closed.