ಶಿವರಾಜ್ ಕುಮಾರ್ ರವರು ಕೈದಿಗಳನ್ನು ಬಿಡಿಸಲು ಲಕ್ಷ ಲಕ್ಷ ರೂ ದಂಡ ಕಟ್ಟಿದ್ದು ಯಾಕೆ ಗೊತ್ತಾ?? ಯಾರಿಗೂ ಗೊತ್ತಿರದ ಶಿವರಾಜಕುಮಾರ್ ಅವರ ಇನ್ನೊಂದು ಮುಖ

ನಮಸ್ಕಾರ ಸ್ನೇಹಿತರೇ ಚಿತ್ರರಂಗದಲ್ಲಿ ಅದೆಷ್ಟೋ ನಟ ಹಾಗೂ ನಟಿಯರನ್ನು ನಾವು ಹೆಚ್ಚಾಗಿ ಸಿನಿಮಾಗಳಲ್ಲಿ ಮಾತ್ರ ನೋಡಿರುತ್ತೇವೆ. ಅವರು ನಿಜ ಜೀವನದಲ್ಲಿ ಹೇಗಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಕಷ್ಟಸಾಧ್ಯ. ಇನ್ನು ಸಾಕಷ್ಟು ನಟ ಹಾಗೂ ನಟಿಯರು ತಮ್ಮ ಜೀವನದಲ್ಲಿ ಅದೆಷ್ಟೋ ಒಳ್ಳೆಯ ಕಾರ್ಯಗಳನ್ನು ಮಾಡಿರುತ್ತಾರೆ. ಆದರೆ ಕೆಲವು ಒಳ್ಳೆಯ ಕಾರ್ಯಗಳು ಸುದ್ದಿಯಾಗಿದ್ದಾರೆ ಕೆಲವು ಕಾರ್ಯಗಳು ಯಾರಿಗೂ ಕೂಡ ತಿಳಿದಿರುವುದಿಲ್ಲ.

ಹೌದು ಇಂತಹ ಮರೆಯಾದ ಅದೆಷ್ಟು ಒಳ್ಳೆಯ ಕಾರ್ಯಗಳನ್ನು ನಾವು ತಿಳಿದುಕೊಂಡಿರುವ ಕಷ್ಟ ಸಾಧ್ಯವಾಗಿರುತ್ತದೆ. ಇದೀಗ ನಾವು ಹೇಳಲು ಹೊರಟಿರುವ ಸುದ್ದಿ ಕೂಡ ಇದೇ ರೀತಿಯಾಗಿದೆ. ಹೌದು ಕನ್ನಡ ಚಿತ್ರರಂಗದಲ್ಲಿ ಹ್ಯಾಟ್ರಿಕ್ ಹೀರೋ ಎಂದೇ ಗುರುತಿಸಿಕೊಂಡ ಶಿವರಾಜ್ ಕುಮಾರ್ ಅವರ ಇಂತಹ ಒಳ್ಳೆಯ ಕಾರ್ಯವನ್ನು ನಾವು ಈ ಮೂಲಕ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ. ಹಾಗಾದರೆ ಶಿವರಾಜ್ ಕುಮಾರ್ ಅವರು ಮಾಡಿರುವ ಒಂದು ಒಳ್ಳೆಯ ಕಾರ್ಯ ಯಾವುದು ಎಂಬುದರ ಬಗ್ಗೆ ನಾವು ನಿಮಗೆ ಇಲ್ಲಿ ಸಂಪೂರ್ಣ ಮಾಹಿತಿ ಕೊಡುತ್ತೇವೆ ಬನ್ನಿ.

ಹೌದು 1990 ದಲ್ಲಿ ಶಿವರಾಜ್ ಕುಮಾರ್ ಅವರು ಮೃತ್ಯುಂಜಯ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದರು. ಈ ಸಿನಿಮಾದ ಕೆಲವು ದೃಶ್ಯಗಳಿಗಾಗಿ ಸೆರೆಮನೆಯಲ್ಲಿ ಚಿತ್ರೀಕರಿಸಬೇಕಾಗಿತ್ತು. ಆದ್ದರಿಂದ ಶಿವರಾಜಕುಮಾರ್ ಅವರು ಮೈಸೂರು ಸೆ-ರೆಮನೆಯಲ್ಲಿ ಚಿತ್ರೀಕರಣಕ್ಕಾಗಿ ಬಂದಿದ್ದರು. ಇನ್ನೂ ಚಿತ್ರೀಕರಣ ಪೂರ್ಣಗೊಳ್ಳುವ ಹೊತ್ತಿಗೆ ಶಿವಣ್ಣನವರು ಅಲ್ಲಿರುವ ಹಲವಾರು ಕೈ-ದಿಳೊಂದಿಗೆ ಆತ್ಮೀಯವಾದ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ಇದೇ ರೀತಿ ಮಾತನಾಡುವಾಗ ಹಲವಾರು ಕೈ-ದಿಗಳು ತಮ್ಮ ತಪ್ಪಿನ ಅರಿವಾಗಿರುವುದಾಗಿ ಹಾಗೂ ಹೊರಬಂದು ಉತ್ತಮ ಜೀವನ ನಡೆಸಬೇಕೆಂದು ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದಾರೆ.

ಆದರೆ ಇಲ್ಲಿಂದ ಹೊರ ಹೋಗಬೇಕಾದರೆ ಲಕ್ಷಾನುಗಟ್ಟಲೆ ಹಣವನ್ನು ನೀಡಬೇಕಾಗುತ್ತದೆ. ಆ ಹಣ ಅವರ ಬಳಿ ಇಲ್ಲವೆಂದು ಕೂಡ ಅವರು ಹೇಳಿದ್ದಾರೆ. ಇನ್ನು ಇದನ್ನೆಲ್ಲಾ ಕೇಳಿದ ನಟ ಶಿವಣ್ಣನವರು ಸುಮಾರು 28 ಲಕ್ಷ ರೂಪಾಯಿ ದಂ-ಡ ನೀಡಿ 26 ಜನರನ್ನು ಸೆ-ರೆ-ವಾಸದಿಂದ ಮುಕ್ತಗೊಳಿಸಿದರು. ಇನ್ನು ಸುದ್ದಿ ಅದೆಷ್ಟು ಜನರಿಗೆ ಗೊತ್ತಿಲ್ಲ. ಇಂದಿಗೂ ಕೂಡ ಈ ವಿಷಯ ಗೊತ್ತಾಗುತ್ತಿರಲಿಲ್ಲ. ಆದರೆ 26 ಜನರಲ್ಲಿ ಒಬ್ಬರಾದ ಮೈಲಾರದ ನಿವಾಸಿ ಗೋಪಾಲ್ ಅವರು ಈ ಘಟನೆಯನ್ನು ಸವಿವರವಾಗಿ ಹೇಳಿದ್ದಾರೆ.

ಹೌದು ಗೋಪಾಲ್ ಅವರು ತಮ್ಮ ಹದಿನಾರನೆಯ ವಯಸ್ಸಿನಲ್ಲಿ ಮಾಡಿದ ಒಂದು ತಪ್ಪಿಗಾಗಿ ಸೆ-ರೆ-ಮನೆವಾಸ ಅನುಭವಿಸುತ್ತಿದ್ದರು. ಆಗ ಗೋಪಾಲ್ ಅವರು ಸುಮಾರು ಹತ್ತು ವರ್ಷಗಳನ್ನು ಸೆ-ರೆವಾಸದಲ್ಲಿ ಕಳೆದಿದ್ದರು. ತದನಂತರದಲ್ಲಿ ಗೋಪಾಲ್ ಅವರಿಗೆ ಮೂರು ಲಕ್ಷ ರೂಪಾಯಿ ದಂಡ ಕಟ್ಟಿ ಹೊರಗಡೆ ಬರಲು ನ್ಯಾಯಾಲಯ ಒಂದು ಅವಕಾಶ ನೀಡಿತ್ತು. ಆಗ ಅವರು ಹಣವಿಲ್ಲದೆ ಅಲ್ಲಿಯೇ ಉಳಿದುಕೊಳ್ಳುವಂತಾಗಿತ್ತು. ಆ ಸಂದರ್ಭದಲ್ಲಿ ನಟ ಶಿವಣ್ಣನವರು ಬಂದು ಅವರಿಗೆ ಸಹಾಯ ಮಾಡಿದ್ದರಂತೆ.

ಇನ್ನು ನಟ ಶಿವರಾಜ್ ಕುಮಾರ್ ಅವರನ್ನು ನೆನೆದು ಗೋಪಾಲ್ ಅವರು ತಮ್ಮ ಮನದಾಳದ ಈ ಮಾತುಗಳನ್ನು ಹೊರಹಾಕಿದ್ದಾರೆ. ಇದೀಗ ಶಿವರಾಜಕುಮಾರ್ ಅವರ ಕೃಪೆಯಿಂದ ಹೊರಗಡೆ ಬಂದಿರುವ ಗೋಪಾಲ್ ಅವರು ಆಟೋ ಓಡಿಸುತ್ತಾ ತಮ್ಮ ದಿನನಿತ್ಯದ ಜೀವನ ಸಾಗಿಸುತ್ತಿದ್ದಾರಂತೆ. ಏನೇ ಆಗಲಿ ಒಬ್ಬ ನಟ ಈ ರೀತಿ 26 ಜನರಿಗೆ ಹೊಸ ಜೀವನ ನೀಡಿರುವುದು ಮೆಚ್ಚುವಂತಹದ್ದು. ಅದರಲ್ಲೂ ಈ ಸಹಾಯವನ್ನು ಎಲ್ಲಿಯೂ ಹೇಳಿಕೊಳ್ಳುವುದರ ಮೂಲಕ ಪ್ರಸಂಸೆ ಗಿಟ್ಟಿಸಿಕೊಳ್ಳಲು ಇರುವುದು ಇನ್ನೂ ಮೆಚ್ಚುವಂತದ್ದು. ಇನ್ನು ಶಿವರಾಜ್ ಕುಮಾರ್ ಅವರ ವ್ಯಕ್ತಿತ್ವದ ಬಗ್ಗೆ ನಿಮಗೆ ಏನನ್ನಿಸುತ್ತದೆ ಎಂಬುದನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Comments are closed.