ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿದ ಶಿವರಾಜ್​ಕುಮಾರ್​; ಫ್ಯಾನ್ಸ್​ ಇದನ್ನು ನಡೆಸಿಕೊಡ್ತಾರಾ??

ನಮಸ್ಕಾರ ಸ್ನೇಹಿತರೇ ಕರೋನಾ ಸೋಂಕು ನಮ್ಮನ್ನು ಆವರಿಸಿದ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಮಾಡಿ ಅದರ ಬಿಸಿ ಸಾಮಾನ್ಯವಾಗಿ ಎಲ್ಲರಿಗೂ ತಟ್ಟಿದೆ ಅಂತನೇ ಹೇಳ್ಬಹುದು. ಅದರಲ್ಲೂ ಚಿತ್ರರಂಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದು ಸುಳ್ಳಲ್ಲ. ಯಾವ ಸಿನಿಮಾ, ಧಾರಾವಾಹಿಗಳೂ ಚಿತ್ರೀಕರಣ ಕಾಣದೆ ತೊಂದರೆ ಅನುಭವಿಸಿತ್ತು. ಆದರೆ ಕೋವಿಡ್ ಎರಡನೆ ಅಲೆಯ ನಿಯಮಾವಳಿಗಳನ್ನು ಸರ್ಕಾರ ಇದೀಗ ಸಡಿಲಗೊಳಿಸಿದೆ. ಹಾಗಾಗಿ ಇದು ಖುಷಿಯ ವಿಚಾರ ಎಂದೇ ಹೇಳಬಹುದು!

ಕೋವಿಡ್ ನಿಮಮಾವಳಿಗಳನ್ನು ಹಂತ ಹಂತವಾಗಿ ಸಡಿಲಿಕೆ ಮಾಡಿಕೊಂಡು ಬಂದಿರುವ ರಾಜ್ಯ ಸರ್ಕಾರ ಇದೀಗ ಚಿತ್ರಮಂದಿರದಲ್ಲಿ ಶೇ. 100 ಸೀಟ್ ಗಳ ಬಳಕೆಗೆ ಅವಕಾಶ ನೀಡಿದೆ. ಇದೇ ಬರುವ ಅಕ್ಟೋಬರ್ 1 ರಿಂದ ಎಲ್ಲಾ ಚಿತ್ರಮಂದಿರಗಳಲ್ಲಿ ಎಲ್ಲಾ ಸೀಟ್ ಗಳ ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ಶೇ 50 ರಷ್ಟು ಮಾತ್ರ ಅವಕಾಶ ನೀಡಲಾಗುತ್ತಿದ್ದು, ಇದರಿಂದ ಸ್ಟಾರ್ ನಟರ ಯಾವ ಸಿನಿಮಾಗಳೂ ತೆರೆಕಾಣುತ್ತಿರಲಿಲ್ಲ. ಆದರೆ ಮುಂದಿನ ತಿಂಗಳಿನಿಂದ ಎಲ್ಲಾ ಸಿನಿಮಾಗಳು ಒಂದರ ಹಿಂದೊಂದರಂತೆ ತೆರೆಕಾಣಲು ಸಿದ್ಧವಾಗಿವೆ. ಅದರಲ್ಲಿ ಶಿವಣ್ಣ ಅಭಿನಯದ ಬಜರಂಗಿ 2, ದುನಿಯಾ ವಿಜಯ್ ಅವರ ’ಸಲಗ’, ಸುದೀಪ್ ಅವರ ’ಕೋಟಿಗೊಬ್ಬ 3’ ಸಾಲಿನಲ್ಲಿದೆ.

ಬಜರಂಗಿ 2 ಬಿಡುಗಡೆಯ ಹಿನ್ನೆಲೆಯಲ್ಲಿ ತಮ್ಮ ನೆಚ್ಚಿನ ಸ್ಟಾರ್ ನಟನ ಕಟೌಟ್ ಹಾಕಲು ಸಿದ್ಧತೆ ನಡೆಸಿದ್ದಾರೆ ಅಭಿಮಾನಿಗಳು. ಆದರೆ ಈ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಸಾಮಾಜಿಕ ಅಂತರಗಳನ್ನು ಕಾಯ್ದುಕೊಳ್ಳಬೇಕು ಎಂದು ಅಭಿಮಾನಿಗಳಿಗೆ ಶಿವಣ್ಣ ಮನವಿ ಮಾಡಿದ್ದಾರೆ. ಕೋವಿಡ್ ನಿಯಂತ್ರಣದಲ್ಲಿದೆಯೇ ಹೊರತು, ಸಂಪೂರ್ಣವಾಗಿ ನಶಿಸಿಲ್ಲ. ಹಾಗಾಗಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜನರು ಪಾಲಿಸಲೇ ಬೇಕು. ಇಲ್ಲವಾದಲ್ಲಿ ಹಿಂದಿನ ದುಸ್ಥಿತಿಗೆ ಮರಳಬೇಕಾಗುತ್ತೆ ಎಂದು ಸರ್ಕಾರ ಕೂಡ ಎಚ್ಚರಿಕೆ ನೀಡಿದೆ.

Comments are closed.