ಇನ್ನು ಶಾಲಾ ಹುಡುಗಿಯಂತೆ ಕಾಣುವ ಕನ್ನಡದ ಚಿಟ್ಟೆ ಎಂದೇ ಖ್ಯಾತಿಯಾಗಿರುವ ಸೋನು ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ?? ಎಷ್ಟು ವಯಸ್ಸಾಗಿದೆ ಗೊತ್ತೇ?

ಇದು ಸೋಶಿಯಲ್ ಮೀಡಿಯಾ ಜಮಾನ. ರಾತ್ರೋರಾತ್ರಿ ಅದೆಷ್ಟೋ ಜನ ಸೂಪರ್ ಸ್ಟಾರ್ ಗಳಾಗಿ ಬಿಡುತ್ತಾರೆ. ಅದರಲ್ಲಿಯೂ ಟಿಕ್ ಟಾಕ್ ಬಂದ ನಂತರ ಸಾಮಾಜಿಕ ಜಾಲತಾಣ ಎನ್ನುವುದು ಮತ್ತಷ್ಟು ಟ್ರೆಂಡ್ ಗೆ ಬಂದಿತು. ಆದರೆ ಕೆಲ ವರ್ಷಗಳ ಹಿಂದೆ ಟಿಕ್ ಟಾಕ್ ಅನ್ನು ಭಾರತದಲ್ಲಿ ಬ್ಯಾನ್ ಮಾಡಲಾಯಿತು. ಬಳಿಕ ಶುರುವಾದದ್ದು ಇನ್ಸ್ಟಾಗ್ರಾಂ ರೀಲ್ಸ್. ಟಿಕ್ ಟಾಕ್ ರೀತಿಯಲ್ಲಿಯೇ ರೀಲ್ಸ್ ಪ್ರಾರಂಭವಾದ ಮೇಲೆ ಅದರಲ್ಲಿನ ಪ್ರತಿಭೆಗಳು ಇದರತ್ತ ತಿರುಗಿದರು. ಅದೇ ರೀತಿ ಸೋಶಿಯಲ್ ಮೀಡಿಯಾ ಮೂಲಕ ಮಿಂಚು ಹರಿಸಿ ಎಲ್ಲರಿಗೂ ಚಿರಪರಿಚಿತರಾಗಿರುವವರು ಸೋನು ಶ್ರೀನಿವಾಸ್ ಗೌಡ. ಈ ಬಾರಿ ಬಿಗ್ ಬಾಸ್ ಒಟಿಟಿ ಸೀಸನ್ 1ರಲ್ಲಿ ಸ್ಪರ್ಧಿಯಾಗಿಯೂ ಭಾಗಿಯಾಗಿದ್ದರು. ಇನ್ನು ಚಿಕ್ಕ ಹುಡುಗಿಯಂತೆ ಕಾಣುವ ಅವರ ವಯಸ್ಸು ಕೇಳಿದ್ರೆ ನೀವು ಶಾಕ್ ಆಗ್ತೀರಾ, ನಿಜಕ್ಕೂ ಅವರಿಗೆ ಎಷ್ಟು ವಯಸ್ಸಾಗಿದೆ ಎಂದು ನೀವು ಊಹೆ ಕೂಡ ಮಾಡಿರಲ್ಲ.

ಸೋನು ಶ್ರೀನಿವಾಸ್ ಗೌಡ ಈಕೆಯ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಇತ್ತೀಚೆಗಂತೂ ಈಕೆಯನ್ನು ನೋಡದಿರದೇ ಇರುವವರಿಲ್ಲ. ಟಿಕ್ ಟಾಕ್ ಬ್ಯಾನ್ ಆದಮೇಲೂ ಸೋನು ಇನ್ ಸ್ಟಾಗ್ರಾಂ ರೀಲ್ಸ್ ಮಾಡಿ ಇನ್ನೂ ಚಾಲ್ತಿಯಲ್ಲಿದ್ದಾರೆ. ಇವರು ಸರಿಸುಮಾರು 4 ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ತಮ್ಮದೇ ವಿಭಿನ್ನ ಶೈಲಿಯಲ್ಲಿ ವಿಡಿಯೋಗಳನ್ನು ಮಾಡುವ ಇವರು ಸೋಶಿಯಲ್ ಮೀಡಿಯಾದಲ್ಲಿ ಲಕ್ಷಂತರ ಮಂದಿ ಅನುಯಾಯಿಗಳನ್ನು ಹೊಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೈಪ್ ಕ್ರಿಯೇಟ್ ಮಾಡಿದ್ದ ಹುಡುಗಿ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಓಟಿಟಿಗೆ ಕಾಲಿಟ್ಟು ಸಾಕಷ್ಟು ವಿಚಾರದಲ್ಲಿ ಗಮನ ಸೆಳೆದಿದ್ದರು. ಬಿಗ್ ಬಾಸ್ ಓಟಿಟಿನಲ್ಲಿ ಫಿನಾಲೆ ಕೊನೆಯ ಹಂತದಲ್ಲಿ ಎಲಿಮಿನೇಟ್ ಆದರು. ಇಂಟರ್‌ನೆಟ್‌ನ ಸ್ಟಾರ್ ಆಗಿ ಗುರುತಿಸಿಕೊಂಡಿದ್ದ ಅವರು ನೇರ ಮಾತು, ಖಡಕ್ ಅವತಾರದ ಮೂಲಕ ಬಿಗ್ ಬಾಸ್ ಮನೆಯಲ್ಲಿ ಗುರುತಿಸಿಕೊಂಡಿದ್ದರು.

sonu ag | ಇನ್ನು ಶಾಲಾ ಹುಡುಗಿಯಂತೆ ಕಾಣುವ ಕನ್ನಡದ ಚಿಟ್ಟೆ ಎಂದೇ ಖ್ಯಾತಿಯಾಗಿರುವ ಸೋನು ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ?? ಎಷ್ಟು ವಯಸ್ಸಾಗಿದೆ ಗೊತ್ತೇ?
ಇನ್ನು ಶಾಲಾ ಹುಡುಗಿಯಂತೆ ಕಾಣುವ ಕನ್ನಡದ ಚಿಟ್ಟೆ ಎಂದೇ ಖ್ಯಾತಿಯಾಗಿರುವ ಸೋನು ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ?? ಎಷ್ಟು ವಯಸ್ಸಾಗಿದೆ ಗೊತ್ತೇ? 2

ಸೋನು ಶ್ರೀನಿವಾಸ್ ಗೌಡ ಅವರು ದೊಡ್ಮನೆಗೆ ಬರುವ ಮುಂಚೆ ಹಾಗೂ ಈಗಲೂ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್, ಮತ್ತು ಹೊಸ ಬ್ರ್ಯಾಂಡ್‌ಗಳನ್ನ ಪ್ರಸ್ತುತಪಡಿಸುವ ಮೂಲಕ ನೆಟ್ಟಗರಿಗೆ ಪರಿಚಿತರಾಗಿದ್ದಾರೆ. ಸೋನು ಶ್ರೀನಿವಾಸ್ ಗೌಡ ವಿಡಿಯೋಗಳಿಗಿಂತ ಹೆಚ್ಚಾಗಿ ಟ್ರೋಲ್ ಆಗಿಯೇ ಫೇಮಸ್ ಆದವರು. ಟ್ರೋಲ್ ಪೇಜ್ ಗಳಿಂದಲೇ ಈಕೆಗೆ ಇಷ್ಟು ಹೆಸರು ಬಂದಿದ್ದು. ಚೈಲ್ಡೀಸ್ ಮಾತುಗಳಿಂದ, ಇನ್ನೂ ಅನೇಕ ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆದವರು ಸೋನು ಶ್ರೀನಿವಾಸ್ ಗೌಡ.ಈಗ ಸೋಷಿಯಲ್ ಮೀಡಿಯಾ ಸ್ಟಾರ್ ಪಟ್ಟ ಪಡೆದುಕೊಂಡಿದ್ದಾರೆ. ಈಗಾಗಲೇ ಅವರೇ ಹೇಳಿರುವಂತೆ ಕೆಲ ಕನ್ನಡ ಸಿನಿಮಾಗಳಲ್ಲೂ ನಟಿಸುವ ಚಾನ್ಸ್ ಪಡೆದುಕೊಂಡಿದ್ದಾರೆ. ಕೆಲ ಬ್ರ್ಯಾಂಡ್ ಗಳ ಪ್ರ,ಮೋಷನ್ ವಿಡಿಯೋ ಮಾಡಿ ಹಣ ಸಂಪಾದಿಸುತ್ತಿದ್ದಾರೆ ಸೋನು ಶ್ರೀನಿವಾಸ್ ಗೌಡ. ಇನ್ನು ಇವರ ವಯಸ್ಸಿನ ಬಗ್ಗೆ ಹೇಳೋದಾದ್ರೆ, ಇವರು ಹುಟ್ಟಿದ್ದು ಜೂನ್ 30, 1994 ರಲ್ಲಿ ಅಂದರೆ ಇವರಿಗೆ ಈಗ ವಯಸ್ಸು 28. ಹೌದು ಸೋನು ಅವರು ಇಷ್ಟು ವಯಸ್ಸಾದಂತೆ ಕಾಣಿಸುವುದಿಲ್ಲ, ಆದರೆ ಅವರಿಗೆ ಈಗಾಗಲೇ 28 ವರ್ಷ ವಯಸ್ಸಾಗಿದೆ.

Comments are closed.