ಶ್ರೀಲಂಕಾ ವಿರುದ್ದ ಅತ್ಯುತ್ತಮ ಆಟ ಹಾಗೂ ಕಳಪೆ ಆಟ ಪ್ರದರ್ಶಿಸಿದ ಇಬ್ಬರೂ ಆಟಗಾರರನ್ನ ಹೆಸರಿಸಿದ ಸೆಹ್ವಾಗ – ಯಾರು ಗೊತ್ತೆ ಅವರು??

ನಮಸ್ಕಾರ ಸ್ನೇಹಿತರೇ ಭಾರತ ಶ್ರೀಲಂಕಾ ವಿರುದ್ದ 2 – 1 ರಿಂದ ಸರಣಿ ಜಯಿಸಿತು. ಆದರೇ 3 -0 ಗಳಿಂದ ಜಯಿಸಬಹುದಾದ ಅವಕಾಶವನ್ನು ಕೈಯಾರೆ ಹಾಳುಮಾಡಿಕೊಂಡಿತು.ಈ ಸಂಭಂದ ಮಾತನಾಡಿದ ಭಾರತದ ಮಾಜಿ ಕ್ರಿಕೇಟ್ ಆಟಗಾರ ವಿರೇಂದ್ರ ‌ಸೆಹ್ವಾಗ್ ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು ಕೆಲವು ಆಟಗಾರರ ಉತ್ತಮ ಪ್ರದರ್ಶನದ ಇಬ್ಬರು ಆಟಗಾರರ ಬಗ್ಗೆ ಹೊಗಳಿದ್ದು, ಇನ್ನು ಕಳಪೆ ಪ್ರದರ್ಶನ ನೀಡಿದ್ದ ಇಬ್ಬರು ಆಟಗಾರರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ವಿರೇಂದ್ರ ಸೆಹ್ವಾಗ್ ಪ್ರಕಾರ ಮೊದಲು ಕಳಪೆ ಪ್ರದರ್ಶನ ನೀಡಿದ ಇಬ್ಬರು ಆಟಗಾರರೆಂದರೇ ಮನೀಶ್ ಪಾಂಡೆ ಮತ್ತು ಹಾರ್ದಿಕ್ ಪಾಂಡ್ಯ. ಬೇರೆಲ್ಲ ಆಟಗಾರರಿಗಿಂತ ಪಾಂಡೆ ಹಾಗೂ ಪಾಂಡ್ಯವರಿಗೆ ಮೂರು ಪಂದ್ಯಗಳಲ್ಲಿಯೂ ಅವಕಾಶ ಸಿಕ್ಕಿತ್ತು. ಮೂರು ಪಂದ್ಯಗಳಲ್ಲಿಯೂ ಸಹ ಅವರು ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್ ಗೆ ಇಳಿದಿದ್ದರು. ಏನಿಲ್ಲವೆಂದರೂ ಇಬ್ಬರೂ ತಮ್ಮ ಬ್ಯಾಟಿನಿಂದ ದೊಡ್ಡ ಇನ್ನಿಂಗ್ಸ್ ಆಡಬಹುದಿತ್ತು. ಆದರೇ ಪಾಂಡೆ ಮತ್ತು ಪಾಂಡ್ಯ ಮೂರು ಪಂದ್ಯಗಳಿಂದ ನೀರಿಕ್ಷೀತ ರನ್ ಬಾರಿಸಲಿಲ್ಲ.

ಇನ್ನು ಅವರ ಸ್ಟ್ರೈಕ್ ರೇಟ್ ಸಹ ಬಹಳ ಕಡಿಮೆ ಇತ್ತು.ಇನ್ನು ಹಾರ್ದಿಕ್ ಪಾಂಡ್ಯ ಬೌಲಿಂಗ್ ನಲ್ಲಿ ಸಹ ನೀರಸ ಪ್ರದರ್ಶನ ನೀಡಿದರು. ಶ್ರೀಲಂಕಾದ ಬಾಲಂಗೋಚಿಗಳು ಹಾರ್ದಿಕ್ ಪಾಂಡ್ಯ ಎಸೆತಗಳನ್ನ ಲೀಲಾಜಾಲವಾಗಿ ಬೌಂಡರಿ, ಸಿಕ್ಸರ್ ಗಟ್ಟಿದರು. ಇದು ಪಾಂಡ್ಯ ಕರಿಯರ್ ಗೆ ಹೊಂದುವುದಿಲ್ಲ ಎಂದರು. ಸದ್ಯ ಭಾರತ ತಂಡದಲ್ಲಿ ಈಗ ಆಡುವ ಹನ್ನೊಂದರ ಬಳಗಕ್ಕೆ ಈಗ ತೀವ್ರ ಪೈಪೋಟಿ ಇದೆ‌‌. ಹಾಗಾಗಿ ಮುಂದೆ ಭಾರತ ಕ್ರಿಕೇಟ್ ತಂಡವನ್ನು ಆಯ್ಕೆ ಮಾಡುವ ವೇಳೆ ಮನೀಶ್ ಪಾಂಡೆಯವರನ್ನ ತಂಡದಿಂದ ಕೈ ಬಿಡಬಹುದೆಂದು ವಿರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ.

ಇನ್ನು ಡ್ಯಾಶಿಂಗ್ ಓಪನರ್ ವಿರೇಂದ್ರ ಸೆಹ್ವಾಗ್ ಶ್ರೀಲಂಕಾ ವಿರುದ್ದದ ಏಕದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಇಬ್ಬರೂ ಆಟಗಾರರನ್ನು ಹೆಸರಿಸಿದಲ್ಲದೇ, ಇಬ್ಬರನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಆ ಇಬ್ಬರೂ ಆಟಗಾರರು ಯಾರೆಂದರೇ, ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಸೂರ್ಯ ಕುಮಾರ್ ಯಾದವ್ ಮತ್ತು ವಿಕೇಟ್ ಕೀಪರ್ ಬ್ಯಾಟ್ಸಮನ್ ಇಶಾನ್ ಕಿಶನ್. ಈ ಇರ್ವರೂ ಬ್ಯಾಟ್ಸಮನ್ ಗಳು ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡರು. ಅದರಲ್ಲೂ ಮೂರು ಪಂದ್ಯಗಳಲ್ಲೂ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಸೂರ್ಯ ಕುಮಾರ್ ಯಾದವ್ ಉತ್ತಮ ಸರಾಸರಿ ಹಾಗೂ ಉತ್ತಮ ಸ್ಟ್ರೈಕ್ ರೇಟ್ ನಲ್ಲಿ ಅದ್ಭುತವೆಂಬಂತೆ ಬ್ಯಾಟ್ ಬೀಸಿದರು.

ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್ ಗೆ ಇಳಿದು ತಂಡಕ್ಕೆ ಉತ್ತಮ ಕೊಡುಗೆ ನೀಡಿದರು. ಇನ್ನು ಇಶಾನ್ ಕಿಶನ್ ತಾವೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ ಗಟ್ಟಿ ಅಂತರಾಷ್ಟ್ರೀಯ ಕರಿಯರ್ ಆರಂಭಿಸಿದರು. ಮೊದಲ ಪಂದ್ಯದಲ್ಲಿ ಉಪಯುಕ್ತ ಅರ್ಧಶತಕ ಗಳಿಸಿದರು. ಎರಡನೇ ಪಂದ್ಯದಲ್ಲಿ ಬೇಗ ಔಟಾದರೂ, ಮೂರನೇ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಇನ್ನು ಮುಂದೆ ಭಾರತ ತಂಡದ ಆಯ್ಕೆಯಲ್ಲಿ ಸೂರ್ಯ ಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ರನ್ನು ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಗಳಾಗಿ ಆಡಿಸಬೇಕೆಂದು ಸಲಹೆ ರೂಪದ ಸೂಚನೆ ನೀಡಿದ್ದಾರೆ.

ಇಂದಿನಿಂದ ಶ್ರೀಲಂಕಾ ವಿರುದ್ದ ಮೂರು ಟಿ20 ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ. ಅನುಭವಧ ಆಧಾರದ ಮೇಲೆ ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಈ ಭಾರಿಯೂ ಮಿಂಚಲಿಲ್ಲ ಎಂದರೇ ತಂಡದಿಂದ ಕೋಕ್ ಸಿಗುವ ಸಾಧ್ಯತೆಯೇ ಹೆಚ್ಚು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.