ಬಿಗ್ ನ್ಯೂಸ್: ಕೇವಲ ಹತ್ತನೇ ತರಗತಿ ಪಾಸ್ ಆಗಿದ್ದರೆ ಸಿಗಲಿದೆ ಸರ್ಕಾರೀ ಉದ್ಯೋಗ, ಇಂದೇ ಸಲ್ಲಿಸಿ ಅರ್ಜಿ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಹತ್ತನೇ ತರಗತಿ ತೇರ್ಗಡೆ ಹೊಂದಿದವರಿಗೂ ಕೂಡ ಉತ್ತಮ ವೇತನ ಇರುವ ಸರ್ಕಾರಿ ನೌಕರಿ ಸಿಗಲಿದೆ. ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಆರ್ಜ್ಯ ನ್ಯಾಯ ಮಂಡಳಿ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಈಗಾಗಲೇ ಅರ್ಜಿ ಸಲ್ಲಿಸಲು ಕರೆ ನೀಡಿದ್ದು ಫೆಬ್ರವರಿ 9 ರಿಂದ ಅರ್ಜಿ ಸಲ್ಲಿಸುವ ಪ್ರಕ್ತಿಯೆ ಆರಂಭವಾಗಿದೆ. ಈ ಹುದ್ದೆಯ ಬಗ್ಗೆ ಇನ್ನಷ್ಟು ಮಾಹಿತಿಗಳು ಇಲ್ಲಿವೆ.

ಹೌದು, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇಲ್ಲಿ ಒಟ್ಟು 7 ದಲಯಾತ್ (ಗ್ರೂಪ್ ಡಿ) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದೇ ತಿಂಗಳ ಅಂದರೆ ಫೆಬ್ರವರಿ 25.

sslc jobs | ಬಿಗ್ ನ್ಯೂಸ್: ಕೇವಲ ಹತ್ತನೇ ತರಗತಿ ಪಾಸ್ ಆಗಿದ್ದರೆ ಸಿಗಲಿದೆ ಸರ್ಕಾರೀ ಉದ್ಯೋಗ, ಇಂದೇ ಸಲ್ಲಿಸಿ ಅರ್ಜಿ. ಹೇಗೆ ಗೊತ್ತೇ??
ಬಿಗ್ ನ್ಯೂಸ್: ಕೇವಲ ಹತ್ತನೇ ತರಗತಿ ಪಾಸ್ ಆಗಿದ್ದರೆ ಸಿಗಲಿದೆ ಸರ್ಕಾರೀ ಉದ್ಯೋಗ, ಇಂದೇ ಸಲ್ಲಿಸಿ ಅರ್ಜಿ. ಹೇಗೆ ಗೊತ್ತೇ?? 2

ದಲಯಾತ್ (ಗ್ರೂಪ್ ಡಿ) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್ನಿಂದ ಕಡ್ಡಾಯವಾಗಿ 10ನೇ ತರಗತಿ ತೇರ್ಗಡೆ ಹೊಂದಿರಬೇಕು ಎಂದು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ನೇಮಕಾತಿ ಅಧಿಸೂಚನೆ ತಿಳಿಸಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 25, 2022ಕ್ಕೆ 18-35 ವರ್ಷ ಮೀರಿರಬಾರದು. ಆದರೆ ಒಬಿಸಿ ಅಭ್ಯರ್ಥಿಗಳಿಗೆ (2ಎ,2ಬಿ, 3ಎ, 3ಬಿ): 03 ವರ್ಷ, ಎಸ್ ಸಿ ಎಸ್ ಟಿ ಕ್ಯಾಟಗರಿ 1 ಅಭ್ಯರ್ಥಿಗಳಿಗೆ 05 ವರ್ಷ ಹಾಗೂ ವಿಧವಾ ಅಭ್ಯರ್ಥಿಗಳಿಗೆ: 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ಇನ್ನು ಅರ್ಜಿ ಶುಲ್ಕದ ಮೊತತ್ವು 150ರೂ. ಗಳು. ಆದರೆ ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಡಿಡಿ/ಐಪಿಒ ಮೂಲಕ ಕಟ್ಟಬೇಕು. ದಲಯಾತ್ (ಗ್ರೂಪ್ ಡಿ) ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ರೂ.17,000-28,950 ವರೆಗೆ ತಿಂಗಳ ವೇತನ ಇರುತ್ತದೆ. ಅಭ್ಯರ್ಥಿಗಳನ್ನು ಸಂದರ್ಶನ ಮಾಡಿ ಆಯ್ಕೆ ಮಾಡಲಾಗುವುದು. ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದ್ದರಿಂದ ಅಭ್ಯರ್ಥಿಗಳು ತಮ್ಮ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ವಿಳಾಸಕ್ಕೆ ಕಳುಹಿಸಬೇಕು. ವಿಳಾಸ; ಕರೆಸ್ಪಾಂಡೆಂಟ್, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಂದಾಯ ಭವನ, 7ನೇ ಮಹಡಿ, ಕೆ.ಜಿ.ರಸ್ತೆ, ಬೆಂಗಳೂರು-560009 ಹೆಚ್ಚಿನ ಮಾಹಿತಿಗಾಗಿ ksat.karnataka.gov.in ಗೆ ಭೇಟಿ ನೀಡಿ.

Comments are closed.