Technology: ಜುಜುಬಿ ಹಣಕ್ಕೆ ಸಾಕಷ್ಟು ಬೆಲೆಬಾಳುವ ಸೆಕೆಂಡ್ ಹ್ಯಾಂಡ್ ಫೋನ್ ಗಳಲ್ಲಿ ಖರೀದಿ ಮಾಡುವುದು ಎಲ್ಲಿ ಗೊತ್ತೆ? ಮನೆ ಬಾಗಿಲಿಗೆ ಬರುತ್ತದೆ.
Technology: ಐಫೋನ್ ನಂತಹ ದುಬಾರಿ ಬೆಲೆ ಬಾಳುವ ಸ್ಮಾರ್ಟ್ ಫೋನ್ ಖರೀದಿಸುವುದು ಹೆಚ್ಚಿನವರ ಕನಸಾಗಿರುತ್ತದೆ. ಆದರೆ ಅಷ್ಟು ದೊಡ್ಡ ಮೊತ್ತದ ಹಣ ನೀಡಿ ಐಫೋನ್ ಖರೀದಿಸುವುದು ಕಷ್ಟ ಸಾಧ್ಯವೇ ಸರಿ. ಸಾಮಾನ್ಯ ಜನರು ಲಕ್ಷ ಲಕ್ಷ ಕೊಟ್ಟು ಐಫೋನ್ ಖರೀದಿಸುವುದು ದೊಡ್ಡ ಸಾಹಸವೆ. ಒಂದು ಫೋನ್ ಗಾಗಿ ಅಷ್ಟು ಹಣವನ್ನು ಖರ್ಚು ಮಾಡಲು ಎಷ್ಟೋ ಜನರಿಗೆ ಸಾಧ್ಯವಿರುವುದಿಲ್ಲ. ಹೀಗಿದ್ದರೂ ಕೂಡ ಐಫೋನ್ ಖರೀದಿಸುವುದು ಅವರಿಗೆ ದೊಡ್ಡ ಆಸೆ ಮತ್ತು ಕನಸಾಗಿಯೇ ಉಳಿದಿರುತ್ತದೆ. ಆದರೆ ಎಷ್ಟೋ ಜನರಿಗೆ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸುವ ಜಾಲತಾಣಗಳ ಬಗ್ಗೆ ತಿಳಿದಿರುವುದಿಲ್ಲ. ಇಂತಹ ಕೆಲವು ಸೈಟ್ಸ್ ಗಳಲ್ಲಿ ಅತ್ಯಂತ ಗುಣಮಟ್ಟದ ಮತ್ತು ಒಳ್ಳೆಯ ಸ್ಥಿತಿಯಲ್ಲಿರುವ ಸೆಕೆಂಡ್ ಹ್ಯಾಂಡ್ ಫೋನ್ ಗಳನ್ನು ಕೊಳ್ಳುವ ಮತ್ತು ಮಾರಾಟ ಮಾಡುವ ಪ್ರಕ್ರಿಯೆ ನಡೆಯುತ್ತದೆ. ಅಂದ ಹಾಗೆ ಅತಿ ಕಡಿಮೆ ಬೆಲೆಗೆ ಗುಣಮಟ್ಟದ ಐಫೋನ್ ಗಳನ್ನು ಖರೀದಿಸಬಹುದಾದ ಕೆಲವು ತಾಣಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಸೆಕೆಂಡ್ ಹ್ಯಾಂಡ್ ನಲ್ಲಿ ಅತ್ಯುತ್ತಮ ಗುಣಮಟ್ಟದ ಐಫೋನ್ ಅಥವಾ ಸ್ಮಾರ್ಟ್ ಫೋನ್ ಖರೀದಿಸಲು ಅತ್ಯುತ್ತಮ ವೇದಿಕೆ ಎಂದರೆ ಅದು Cashify. ಈ ಸೈಟ್ ಮೂಲಕ ನಾವು ಉತ್ತಮ ಸ್ಥಿತಿಯಲ್ಲಿರುವ ಯಾವುದೇ ಕಂಪನಿಯ ಯಾವುದೇ ಮಾಡೆಲ್ ಮೊಬೈಲ್ ಗಳನ್ನು ಖರೀದಿಸಲು ಸಾಧ್ಯವಿದೆ. ಈ ತಾಣದಲ್ಲಿ ನಮ್ಮ ನೆಚ್ಚಿನ ಮೊಬೈಲ್ ಬ್ರಾಂಡ್, ಮಾಡೆಲ್ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಸಹ ನೀಡಲಾಗಿದೆ. ಇಲ್ಲಿ ಮೊಬೈಲ್ ಗಳನ್ನು ಕೊಳ್ಳುವ, ಮಾರಾಟ ಮಾಡುವ ಪ್ರಕ್ರಿಯೆ ಇದ್ದು ತನ್ನ ಬಳಕೆದಾರರಿಗೆ ಈ ತಾಣದ ಮೂಲಕ ಅನೇಕ ರಿಯಾಯಿತಿಗಳನ್ನು ಸಹ ನೀಡಲಾಗುತ್ತಿರುತ್ತದೆ. ಇದನ್ನು ಓದಿ..Kannada News: ಕಾಂತಾರ ಯಶಸ್ಸು ಪಡೆದ ಬೆನ್ನಲ್ಲೇ, ಪ್ರೀತಿಯನ್ನು ತೆರೆದಿಟ್ಟ ನಟಿ ಸಪ್ತಮಿ ಗೌಡ: ಮೊದಲ ಬಾರಿಗೆ ಬಹಿರಂಗವಾಗಿ ಹೇಳಿದ್ದೇನು ಗೊತ್ತೇ? ಪ್ರೊಪೋಸ್ ಮಾಡಿದ್ದು ಯಾರಿಗೆ ಗೊತ್ತೆ?
ಇತ್ತೀಚಿಗೆ ಜನಪ್ರಿಯ ಈ ಕಾಮರ್ಸ್ ಸೈಟ್ಗಳು ಸಹ ಈ ರೀತಿ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್ ಫೋನ್ ಗಳನ್ನು ಮಾರಾಟ ಮಾಡುತ್ತಿದೆ. ಅದರಲ್ಲೂ ಸಹ ಅಮೆಜಾನ್ ಈ ರೀತಿಯಾಗಿ ಮೊಬೈಲ್ ಗಳನ್ನು ಸೆಕೆಂಡ್ ಹ್ಯಾಂಡ್ ರೂಪದಲ್ಲಿ ಮಾರಾಟ ಮಾಡಲು Amazon Renewed ಎಂಬ ಹೆಸರಿನ ವಿಶೇಷ ವಿಭಾಗವನ್ನೇ ತೆರೆದಿದೆ. ಈ ಸೈಟ್ ನಲ್ಲಿ ಈ ಮೇಲ್ಕಾಣಿಸಿದ ವಿಭಾಗಕ್ಕೆ ಟ್ಯಾಪ್ ಮಾಡುವ ಮೂಲಕ ನಾವು ನಮಗೆ ಬೇಕೆನಿಸಿದ ಅತ್ಯುತ್ತಮ ಗುಣಮಟ್ಟದ ಸ್ಮಾರ್ಟ್ ಫೋನ್ ಸುಲಭವಾಗಿ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.
ಹಳೆಯ ಸ್ಮಾರ್ಟ್ ಫೋನ್ ಮಾರಾಟ ಮಾಡಲು ಮತ್ತು ಕೊಂಡುಕೊಳ್ಳಲು ಅತ್ಯಂತ ವಿಶ್ವಾಸಾರ್ಹ ವೇದಿಕೆ ಎಂದರೆ ಅದು ಓ ಎಲ್ ಎಕ್ಸ್(OLX). ಈ ರೀತಿ ಅಳೆಯ ವಸ್ತುಗಳನ್ನು ಕೊಳ್ಳುವ, ಮಾರಾಟ ಮಾಡುವ ತಾಣಗಳು ಅತ್ಯಂತ ಕಡಿಮೆ ಇದ್ದಾಗ ಶುರುವಾದ ಓ ಎಲ್ ಎಕ್ಸ್ ಇಂದಿಗೂ ಕೂಡ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. ಏಕೆಂದರೆ ಅದು ನೀಡುವ ಅತ್ಯಂತ ಗುಣಮಟ್ಟದ ಸೇವೆಯಿಂದಾಗಿ ಜನರು ಇಂದಿಗೂ ಕೂಡ ಹಳೆಯ ವಸ್ತುಗಳನ್ನು ಮಾರಾಟ ಮಾಡಲು ಕೊಳ್ಳಲು ಈ ತಾಣವನ್ನು ಹೆಚ್ಚು ನಂಬುತ್ತಾರೆ. ಇದರಲ್ಲೂ ಕೂಡ ಸ್ಮಾರ್ಟ್ ಫೋನ್ ಗಳನ್ನು ಮಾರಾಟ ಮಾಡುವ ಮತ್ತು ಕೊಳ್ಳುವ ವ್ಯವಸ್ಥೆಯಿದೆ. ಅತ್ಯಂತ ಗುಣಮಟ್ಟದ ಫೋನ್ ಗಳನ್ನು ಈ ಮೂಲಕ ಕಡಿಮೆ ಬೆಲೆಗೆ ಕೊಂಡುಕೊಳ್ಳುವ ಅವಕಾಶವನ್ನು ಈ ಸೈಟ್ ಗಳು ನೀಡುತ್ತವೆ. ಇದನ್ನು ಓದಿ..Kannada News: ಬಿಕಿನಿ ವಿವಾದವನ್ನು ಮತ್ತೊಂದು ರೀತಿಯಲ್ಲಿ ಬಳಸಿಕೊಳ್ಳಲು ಮುಂದಾದ ದೀಪಿಕಾ ಪಡುಕೋಣೆ; ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ?
Comments are closed.