Toyota EV: ಎಲೆಕ್ಟ್ರಿಕ್ ಕಾರ್ ನಲ್ಲಿ ಹೊಸ ಯುಗ ಶುರು- 10 ನಿಮಿಷ ಚಾರ್ಜ್ ಮಾಡಿ, 1200 KM ರೇಂಜ್.

Toyota EV new concept with High range

ನಮಸ್ಕಾರ ಸ್ನೇಹಿತರೇ ವಾಹನ ನಿರ್ಮಾಣ ಕಂಪನಿ ಆಗಿರುವಂತಹ ಟೊಯೋಟಾ(Toyota )ಒಂದಲ್ಲ ಒಂದು ಹೊಸ ಪ್ರಯತ್ನಗಳನ್ನು ಮಾಡುತ್ತಾ, ಪ್ರಯೋಗಗಳನ್ನು ಮಾಡುತ್ತಾ ತನ್ನ ಗ್ರಾಹಕರಿಗೆ ಉತ್ತಮವಾದ ಕಾರುಗಳ ಎಕ್ಸ್ಪೀರಿಯನ್ಸ್ ಅನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಮುಂದಿನ ದಿನಗಳಲ್ಲಿ ಜಪಾನ್ ಮೂಲದ ಟೊಯೋಟಾ ಕಂಪನಿ ಎಲೆಕ್ಟ್ರಿಕ್ ವಾಹನಗಳಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆ ತರುವಂತಹ ಯೋಜನೆ ಮಾಡಿದ್ದು ಹೊಸ ರೀತಿಯ ಬ್ಯಾಟರಿ ಮೂಲಕ ಇನ್ನಷ್ಟು ಹೆಚ್ಚಿನ ರೇಂಜ್ ಹಾಗೂ ಕಡಿಮೆ ಸಮಯದಲ್ಲಿ ಚಾರ್ಜ್ ಆಗುವಂತಹ ಟೆಕ್ನಾಲಜಿ ಜಾರಿಗೆ ತರುವಂತ ಯೋಚನೆ ಮಾಡಿದೆ. ಹೌದು ನಾವು ಮಾತಾಡ್ತಿರೋದು ಸಾಲಿಡ್ ಸ್ಟೇಟ್ ಬ್ಯಾಟರಿ(solid state battery) ಬಗ್ಗೆ. ಇನ್ನು ಇದರ ಉತ್ಪಾದನೆ 2027 ಅಥವಾ 28 ರಲ್ಲಿ ಪ್ರಾರಂಭವಾಗುವ ನೀರಿಕ್ಷೆ ಇದೆ.

Loan: ಕರುನಾಡಿನ ಜನರೇ, ಸಾಕಷ್ಟು ಸುದ್ದಿಗಳ ನಡುವೆ- ಇಂದು ನಾವು ನಿಮಗೆ ಹೊಸ ಸಿಹಿ ಸುದ್ದಿ ಯನ್ನು ಹೊತ್ತು ತಂದಿದ್ದೇವೆ. ಒಂದು ವೇಳೆ ನಿಮಗೆ ಹಣದ ಅವಶ್ಯಕತೆ ಇದ್ದರೇ, ಹಾಗೂ ನೀವು ಫೋನ್ ಪೇ ನಲ್ಲಿ ಅರ್ಜಿ ಹಾಕಿದರೆ ಯಾವುದೇ ಗ್ಯಾರಂಟಿ ಇಲ್ಲದೆ ನಿಮಗೆ ಲೋನ್ ಸಿಗುತ್ತದೆ. ಒಂದು ವೇಳೆ ನಿಮಗೆ ಲೋನ್ ಅಗತ್ಯವಿದ್ದರೆ, ಈ ಲೇಖನದ ಕೊನೆಯಲ್ಲಿ ನೀಡಿರುವ ಮಾಹಿತಿಯನ್ನು ಒಮ್ಮೆ ನೋಡಿ.

ಟೊಯೋಟಾ ಹೇಳಿರುವ ಪ್ರಕಾರ ಈ ಬ್ಯಾಟರಿಗಳ ಮೂಲಕ ಕಾರಿಗೆ (Toyota EV) 1200 ಕಿಲೋಮೀಟರುಗಳ ಲಾಂಗ್ ರೇಂಜ್ ಹಾಗೂ 10 ನಿಮಿಷ ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ ಫುಲ್ ಚಾರ್ಜ್ ಮಾಡುವಂತ ಟೆಕ್ನಾಲಜಿಯನ್ನು ಪರಿಚಯಿಸುವಂತಹ ದಿಕ್ಕಿನ ಕಡೆಗೆ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂಬುದಾಗಿ ಹೇಳಿದ್ದಾರೆ. ಇದರ ಮೂಲ ಆಧಾರವಾಗಿರುವ ಅಂತಹ ಸಾಲಿಡ್ ಸ್ಟೇಟ್ ಬ್ಯಾಟರಿಯ ದೊಡ್ಡಮಟ್ಟದ ಉತ್ಪಾದನೆಗಾಗಿ Idemitsu ಕಂಪನಿಯ ಸಹಭಾಗಿತ್ವದಲ್ಲಿ ಈ ಬ್ಯಾಟರಿಗಳ ದೊಡ್ಡ ಪ್ರಮಾಣದ ಉತ್ಪಾದನೆಯ ಕೆಲಸವನ್ನು ಪ್ರಾರಂಭ ಮಾಡುವ ಬಗ್ಗೆ ತಯಾರಿಗಳು ನಡೆಯುತ್ತಿವೆ ಎಂಬುದಾಗಿ ಹೇಳಿಕೊಂಡಿದೆ.

ಈ ಹೊಸ ತಂತ್ರಜ್ಞಾನದ ಮೂಲಕ ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯಲ್ಲಿ ಟಾಪ್ ಕಂಪನಿಗಳಲ್ಲಿ ಕಾಣಿಸಿಕೊಳ್ಳುವ Tesla ಹಾಗೂ BYD ಕಂಪನಿಗಳನ್ನು ಹಿಂದಿಕ್ಕುವಂತಹ ಯೋಜನೆ ಟೊಯೋಟೊ ಮಾಡುತ್ತಿದೆ. ಮಾರುಕಟ್ಟೆಯಲ್ಲಿ ಸದ್ಯಕ್ಕೆ ಎಲೆಕ್ಟ್ರಿಕ್ ವಾಹನಗಳಲ್ಲಿ ಲಿಥಿಯಂ ಅಯಾನ್ ಬ್ಯಾಟರಿಯನ್ನು ಅಳವಡಿಸಲಾಗುತ್ತಿದ್ದು ಇದರ ಉತ್ಪಾದನೆಗೆ ಬೇಕಾಗಿರುವಂತಹ ವಸ್ತುಗಳು ಕೂಡ ವಿರಳವಾಗಿ ಸಿಗುತ್ತವೆ. ಇದೇ ಕಾರಣಕ್ಕಾಗಿ ಇಂತಹ ಬ್ಯಾಟರಿಗಳನ್ನು ಹೊಂದಿರುವಂತಹ ಎಲೆಕ್ಟ್ರಿಕ್ ವಾಹನಗಳ ಬೆಲೆ ಕೂಡ ಹೆಚ್ಚಾಗಿರುತ್ತದೆ. ಟೊಯೋಟಾ ಸಂಸ್ಥೆ ಜಾರಿಗೆ ತರಬೇಕು ಎಂದುಕೊಂಡಿರುವಂತಹ ಹೊಸ ಟೆಕ್ನಾಲಜಿ ಬ್ಯಾಟರಿ ಮೂಲಕ ಬೆಲೆ ಕೂಡ ಕಡಿಮೆಯಾಗಲಿದೆ ಎಂದು ಹೇಳಬಹುದು.

ಲೀಥಿಯಂ ಅಯಾನ್ ಬ್ಯಾಟರಿ ಹಾಗೂ ಸಾಲಿಡ್ ಸ್ಟೇಟ್ ಬ್ಯಾಟರಿ ಯಾವ ರೀತಿಯಲ್ಲಿ ವ್ಯತ್ಯಾಸವನ್ನು ಹೊಂದಿದೆ.

ಸಾಲಿಡ್ ಸ್ಟೇಟ್ ಬ್ಯಾಟರಿಯಲ್ಲಿ ಹೆಸರಲ್ಲಿ ಹೇಳುವಂತೆ ಬಳಕೆಯಾಗುವಂತಹ ಕಾಂಪೊನೆಂಟ್ ಸಾಲಿಡ್ ಆಗಿರುತ್ತದೆ. ಈ ಬ್ಯಾಟರಿ ಕೆಥೋಡ್, ಎನೋಡ್ ಹಾಗೂ ಸಾಲಿಡ್ ಗಳ ಸಮ್ಮಿಲನದಿಂದ ನಿರ್ಮಾಣವಾಗುತ್ತದೆ. ಲಿಥಿಯಂ ಬ್ಯಾಟರಿಯಲ್ಲಿ ಲಿಕ್ವಿಡ್ ಎಲೆಕ್ಟ್ರೋಲೈಟ್ ಅನ್ನು ಬಳಸಲಾಗುತ್ತದೆ. ಇದರಲ್ಲಿ ಬೆಂ’ ಕಿ ಸಂಭವಿಸುವ ಅಥವಾ ಊದಿಕೊಂಡು ಡ್ಯಾಮೇಜ್ ಆಗುವಂತಹ ಸಂಭಾವ್ಯತೆ ಕೂಡ ಇರುತ್ತದೆ. ಅಪಾಯದ ಸಾಧ್ಯತೆ ಇದರಲ್ಲಿ ಹೆಚ್ಚಾಗಿರುತ್ತದೆ.

ಸಾಲಿಡ್ ಸ್ಟೇಟ್ ಬ್ಯಾಟರಿ ಇರುತ್ತದೆ.

ಸಾಲಿಡ್ ಸ್ಟೇಟ್ ಬ್ಯಾಟರಿಯನ್ನು ನಿರ್ಮಾಣ ಮಾಡುವ ರೀತಿಯನ್ನು ಆಧರಿಸಿ ಎರಡು ರೀತಿಯಲ್ಲಿ ಇರುತ್ತದೆ ಎಂಬುದಾಗಿ ಪರಿಗಣನೆಗೆ ತೆಗೆದುಕೊಳ್ಳಬಹುದು. ಮೊದಲನೆಯದು ಬಲ್ಕ್ ಹಾಗೂ ಎರಡನೆಯದು ಥಿನ್ ಫಿಲ್ಮ್. ಬಲ್ಕ್ ಬ್ಯಾಟರಿ ಗಳಲ್ಲಿ ಹೆಚ್ಚಿನ ಪ್ರಮಾಣದ ಎನರ್ಜಿಯನ್ನು ಸ್ಟೋರೇಜ್ ಮಾಡಿ ಇಟ್ಟುಕೊಳ್ಳುವಂತಹ ಸಾಮರ್ಥ್ಯವನ್ನು ಹೊಂದಿರುತ್ತದೆ. Thin Film ಬ್ಯಾಟರಿಗಳಲ್ಲಿ ಕಡಿಮೆ ಪ್ರಮಾಣದ ಎನರ್ಜಿ ಸ್ಟೋರ್ ಆಗುತ್ತದೆ ಆದರೆ ಇದು ಲಾಂಗ್ ಲಾಸ್ಟಿಂಗ್ ಅಂದರೆ ದೀರ್ಘಕಾಲಿಕ ಬಾಳಿಕೆಯನ್ನು ಹೊಂದಿರುತ್ತದೆ.

Instant Loan: ಕಷ್ಟ ಎಂದಾಗ, ಮೊಬೈಲ್ ತೆಗೆದು ಫೋನ್ ಪೇ ಅಲ್ಲಿ ಅರ್ಜಿ ಹಾಕಿ. 2 ನಿಮಿಷದಲ್ಲಿ ಲೋನ್ ಹಣ ಖಾತೆಗೆ.

Comments are closed.