ಮನೆಯ ಒಳಗಡೆ ಹೇಳಿದಂತೆ ಹೊರ ಬಂದ ಒಂದೇ ತಿಂಗಳಲ್ಲಿ ಸಿಹಿ ಸುದ್ದಿ ನೀಡಿದ ವೈಷ್ಣವಿ. ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆ ಇತಿಹಾಸದಲ್ಲಿ ಅತ್ಯಂತ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಖಂಡಿತವಾಗಿಯೂ ಬಿಗ್ ಬಾಸ್ ಕನ್ನಡ. 2013ರಿಂದ ಪ್ರಾರಂಭವಾಗಿ ಈಗಲೂ ಕೂಡ ಚಾಲ್ತಿಯಲ್ಲಿರುವ ರಿಯಾಲಿಟಿ ಶೋ ಅಂದರೆ ಅದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಿರೂಪಕರಾಗಿ ನಡೆಸಿಕೊಡುತ್ತಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ. ಆದರೆ ಈ ಸೀಸನ್ ಅದ್ದೂರಿಯಾಗಿ ಏನೋ ಪ್ರಾರಂಭವಾಯಿತು.

ಆದರೆ ಪೂರ್ಣವಾಗಿ ಮುಗಿಯದೆ ಕೇವಲ 70 ದಿನಕ್ಕೆ ಸ್ಪರ್ಧಿಗಳು ಹೊರಗಡೆ ಬರುವಂತಾಯಿತು ಅದಕ್ಕೆ ಕಾರಣ ಕೂಡ ನಿಮಗೆ ಗೊತ್ತು. ಹೌದು ಲಾಗ್ ಡೌನ್ ನ ಕಠಿಣ ನಿಯಮಗಳ ಪ್ರಕಾರ ಬಿಗ್ ಬಾಸ್ ಮನಸ್ಸಿಲ್ಲದ ಮನಸ್ಸಿನಿಂದ ರದ್ದುಗೊಳಿಸಲಾಗಿದೆ ಸ್ಪರ್ಧಿಗಳು ಮನೆಯಿಂದ ತಮ್ಮ ಸ್ವಂತ ಮನೆಗೆ ಹೋಗುವಂತಾಯಿತು. ಈ ಬಾರಿಯ ಬಿಗ್ ಬಾಸ್ ಸೀಸನ್ 8 ಅರ್ಧಕ್ಕೆ ಮುಗಿದಿದ್ದರೂ ಇದರಲ್ಲಿ ಬಂದಿದ್ದ ಸ್ಪರ್ಧಿಗಳು ಈಗಾಗಲೇ ಕರ್ನಾಟಕದ ಜನರ ಮನೆಮಾತಾಗಿದ್ದಾರೆ. ಇರುವಷ್ಟು ದಿನವಂತೂ ಅವರು ವೀಕ್ಷಕರಿಗೆ ಎಂಟರ್ಟೈನ್ಮೆಂಟ್ ತಪ್ಪದೆ ನೀಡಿದ್ದಾರೆ.

ಅದರಲ್ಲಿ ಎಲ್ಲರಿಗಿಂತ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾದರೂ ಗುಳಿಕೆನ್ನೆ ಚೆಲುವೆ ವೈಷ್ಣವಿ ಗೌಡ ಎನ್ನಬಹುದು. ಅಗ್ನಿಸಾಕ್ಷಿ ಎಂಬ ಧಾರವಾಹಿ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ನೀಡಿದ ವೈಷ್ಣವಿ ಗೌಡ ಈಗ ಕರ್ನಾಟಕದ ಕಿರುತೆರೆಯ ಕ್ರಶ್ ಎಂದೆ ಹೇಳಬಹುದು. ಬಿಗ್ ಬಾಸ್ ನಂತರವಂತೂ ವೈಷ್ಣವಿ ಗೌಡ ರವರಿಗೆ ಫ್ಯಾನ್ ಫಾಲೋವಿಂಗ್ ತುಂಬಾನೇ ಜಾಸ್ತಿ ಆಗಿದೆ ಅದಕ್ಕೆ ಉದಾಹರಣೆ ಎಂಬಂತೆ ಬಿಗ್ಬಾಸ್ ಮನೆಗೆ ತೆರಳುವ ಮುನ್ನ ಅವರ ಇನ್ಸ್ಟಾಗ್ರಾಮ್ ಖಾತೆ ಕೇವಲ ನಾಲ್ಕು ಲಕ್ಷಕ್ಕೂ ಅಧಿಕ ಫಾಲವರ್ಸ್ ಅನ್ನು ಹೊಂದಿತ್ತು.

ಆದರೆ ಈಗ ಅದು 8 ಲಕ್ಷಕ್ಕೂ ಮೀರಿ ಬೆಳೆದಿದೆ. ಇಂದಿಗೂ ಬಿಗ್ ಬಾಸ್ ಕನ್ನಡ ಸೀಸನ್ 8 ಚಾಲ್ತಿಯಲ್ಲಿದ್ದರೆ ಖಂಡಿತವಾಗಿಯೂ ನಮ್ಮ ಕಿರುತೆರೆಯ ಗುಳಿಕೆನ್ನೆ ಚೆಲುವೆ ವೈಷ್ಣವಿ ಗೌಡ ರವರ ವಿನ್ ಆಗುತ್ತಿದ್ದರು. ಮನೆಯಿಂದ ಹೊರಗೆ ಬಂದಮೇಲೆ ವೈಷ್ಣವಿ ಗೌಡರವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಗೆ ಬಂದಿದ್ದರು ಆಗ ಅವರು ತಮ್ಮ ಮದುವೆ ವಿಚಾರವನ್ನು ಕೂಡ ಬಹಿರಂಗಪಡಿಸಿದ್ದರು.

ಹೌದು ಲೈವ್ ಗೆ ಬಂದಾಗ ಗುಳಿಕೆನ್ನೆಯ ಚೆಲುವೆ ವೈಷ್ಣವಿ ಗೌಡ ತಮ್ಮ ಮದುವೆ ವಿಚಾರವಾಗಿ ಏನು ಹೇಳಿದ್ರು ಗೊತ್ತಾ. ಬಿಗ್ ಬಾಸ್ ನವರಿಗೆ ಬಂದ ಮೇಲೆ ನನಗೆ ಬರುತ್ತಿರುವ ಮೆಸೇಜ್ಗಳು ಸಂಖ್ಯೆ ತುಂಬಾನೇ ಜಾಸ್ತಿ ಆಗ್ತಿದೆ. ಮನೆಯವರು ನನಗೆ ಮದುವೆಯಾಗುವ ವಿಚಾರದಲ್ಲಿ ಪೂರ್ಣ ನಿರ್ಣಯ ನಿನ್ನದೇ ನೀಡಿ ನನಗೆ ಯಾರು ಇಷ್ಟವಿದ್ದರೂ ಅವರೊಂದಿಗೆ ಮದುವೆ ಆಗುವ ಅವಕಾಶ ನೀಡಿದ್ದಾರೆ.

ಆದರೆ ನಮ್ಮ ಅಮ್ಮ ಅವಾಗವಾಗ ಯಾವಾಗ ಮದುವೆ ಆಗುತ್ತೀಯ ಎಂದು ಕೇಳುತ್ತಲೇ ಇರುತ್ತಾರೆ. ಇದು ಗುಳಿಕೆನ್ನೆಯ ನಟಿ ವೈಷ್ಣವಿ ಗೌಡ ರವರು ತಮ್ಮ ಲೈವ್ ನಲ್ಲಿ ಬಂದಾಗ ಮದುವೆ ಕುರಿತಂತೆ ಹೇಳಿದ ಮಾತುಗಳು. ನಿಮಗೇನನ್ನಿಸುತ್ತಿದೆ ಸ್ನೇಹಿತರೆ ವೈಷ್ಣವಿ ಗೌಡರವರು ಯಾವಾಗ ಮದುವೆಯಾಗಬಹುದು ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

Comments are closed.