ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದಲ್ಲಿ ಗೆದ್ದ ಹಣದಿಂದ ವಂಶಿಕ ಖರೀದಿಸಿದ್ದೇನು ಗೊತ್ತಾ?? ಒಳ್ಳೆ ಆಯ್ಕೆ ಎಂದ ನೆಟ್ಟಿಗರು. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕಿರುತೆರೆ ಲೋಕದಲ್ಲಿ ಹಲವಾರು ರಿಯಾಲಿಟಿ ಶೋ ಕಾರ್ಯಕ್ರಮಗಳು ಕಾಲಿಟ್ಟು ಕಿರುತೆರೆ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಇನ್ನು ಕೆಲವು ತಿಂಗಳುಗಳ ಹಿಂದಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವನ್ನು ಕಾಣುತ್ತಿದ್ದಂತಹ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮ ಕೂಡ ಒಂದಾಗಿದೆ. ಹೌದು ಗೆಳೆಯರೇ ಈ ಕಾರ್ಯಕ್ರಮದಲ್ಲಿ ಅನುಪಮಾ ಗೌಡ ರವರ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ಸೃಜನ್ ಲೋಕೇಶ್ ಅನುಪ್ರಭಾಕರ್ ಹಾಗೂ ನಟಿ ತಾರಾ ಅನುರಾಧಾ ರವರು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು.

ಇನ್ನು ಈ ಕಾರ್ಯಕ್ರಮದಲ್ಲಿ ಹಲವಾರು ಅಮ್ಮ ಮಕ್ಕಳ ಜೋಡಿ ಕಲರ್ಸ್ ಕನ್ನಡ ವಾಹಿನಿಯ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮವನ್ನು ಯಾರು ಗೆದ್ದಿದ್ದಾರೆ ಎಂಬುದಾಗಿ ನಿಮಗೆ ಹೇಳುವ ಅವಶ್ಯಕತೆ ಇಲ್ಲ ಎಂಬುದಾಗಿ ನಾವು ಭಾವಿಸುತ್ತೇವೆ. ಹೌದು ಗೆಳೆಯರೇ ಅಮ್ಮ ಮಕ್ಕಳ ಬಾಂಧವ್ಯವನ್ನು ಮನರಂಜನಾತ್ಮಕವಾಗಿ ತೋರಿಸಿ ಕೊಡುವಂತಹ ಕಾರ್ಯಕ್ರಮ ವಾಗಿರುವ ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮವನ್ನು ಗೆದ್ದಿರುವುದು ಯಶಸ್ವಿನಿ ಹಾಗೂ ವಂಶಿಕ ಜೋಡಿ. ಹೌದು ಗೆಳೆಯರೇ ಮಾಸ್ಟರ್ ಆನಂದ್ ರವರ ಮಗಳಾಗಿರುವ ವಂಶಿಕ ಕಾರ್ಯಕ್ರಮದ ಪ್ರಾರಂಭದಿಂದಲೇ ತನ್ನ ಚುರುಕುತನದ ಮೂಲಕ ಪ್ರತಿಯೊಬ್ಬ ಪ್ರೇಕ್ಷಕರನ್ನು ಕೂಡ ಮೊದಲ ನೋಟದಲ್ಲೇ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಕೊನೆಯಲ್ಲಿ ಕಾರ್ಯಕ್ರಮದ ಮೊದಲ ಸ್ಥಾನವನ್ನು ಕೂಡ ಗೆಲ್ಲಲು ಯಶಸ್ವಿನಿ ಹಾಗೂ ವಂಶಿಕ ಜೋಡಿ ಯಶಸ್ವಿಯಾಗಿದ್ದಾರೆ.

vanshika anand | ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದಲ್ಲಿ ಗೆದ್ದ ಹಣದಿಂದ ವಂಶಿಕ ಖರೀದಿಸಿದ್ದೇನು ಗೊತ್ತಾ?? ಒಳ್ಳೆ ಆಯ್ಕೆ ಎಂದ ನೆಟ್ಟಿಗರು. ಯಾಕೆ ಗೊತ್ತೇ??
ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದಲ್ಲಿ ಗೆದ್ದ ಹಣದಿಂದ ವಂಶಿಕ ಖರೀದಿಸಿದ್ದೇನು ಗೊತ್ತಾ?? ಒಳ್ಳೆ ಆಯ್ಕೆ ಎಂದ ನೆಟ್ಟಿಗರು. ಯಾಕೆ ಗೊತ್ತೇ?? 2

ಇನ್ನು ಈ ಕಾರ್ಯಕ್ರಮದಲ್ಲಿ ಮೊದಲ ಬಹುಮಾನವಾಗಿ 5 ಲಕ್ಷ ರೂಪಾಯಿ ನಗದು ಬಹುಮಾನ ಸೇರಿದಂತೆ ಕಾರ್ಯಕ್ರಮದಲ್ಲಿ ಇದ್ದಷ್ಟು ದಿನದ ಸಂಭಾವನೆಯನ್ನು ಕೂಡ ಪಡೆದುಕೊಂಡಿದ್ದಾರೆ. ಇದರಲ್ಲಿ ಈಗ ಏನು ಮಾಡಿದ್ದಾರೆ ಗೊತ್ತಾ. ಹೌದು ಗೆಳೆಯರೆ ಈ ಹಣದಲ್ಲಿ ವಂಶಿಕ ರವರ ತಂದೆ-ತಾಯಿ ಇಬ್ಬರೂ ಕೂಡ 8 ಲಕ್ಷ ರೂಪಾಯಿ ಮೌಲ್ಯದ ಮಾರುತಿ ಸುಜುಕಿ ಇಗ್ನಿಸ್ ಕಾರನ್ನು ಖರೀದಿಸಿದ್ದಾರೆ. ಈ ಕುರಿತಂತೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಬ್ಬರು ಕೂಡ ಮಾತನಾಡಲು ಆರಂಭಿಸಿದ್ದಾರೆ. ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿಯೇ ತನ್ನ ಪ್ರತಿಭೆಯ ಮೂಲಕ ವಂಶಿಕ ಕಾರನ್ನು ಖರೀದಿಸುವಂತಾಗಿದೆ ಎಂಬುದಾಗಿ ಎಲ್ಲರೂ ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ನೀವು ಕೂಡ ತಪ್ಪದೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.