ಬಾಯಲ್ಲಿ ನೀರೂರಿಸುವಂತಹ ವೆಜ್ ಪಲಾವ್ ಮಾಡುವುದು ಅತಿ ಸುಲಭ, ಹೇಗೆ ಗೊತ್ತೇ?? ವೇಗವಾಗಿ ಅದ್ಭುತವಾಗಿ ಹೀಗೆ ಟ್ರೈ ಮಾಡಿ.

ನಮಸ್ಕಾರ ಸ್ನೇಹಿತರೇ ವೆಜ್ ಪಲಾವ್ ನ್ನ ಹೆಚ್ಚಾಗಿ ಹೋಟೆಲ್ ಗಳಲ್ಲಿ ತಿಂದಿರುತ್ತಿರಿ. ಇದು ಸಕ್ಕತ್ ರುಚಿಕರವಾಗಿರತ್ತೆ. ಇದನ್ನ ಮನೆಯಲ್ಲಿಯೂ ಕೂಡ ಸುಲಭವಾಗಿ ಮಾಡಿಕೊಳ್ಳಬಹುದು. ವೆಜ್ ಪಲಾವ್ ವನ್ನು ಮಾಡೋದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿ.

ವೆಜ್ ಪಲಾವ್ ಮಾಡಲು ಬೇಕಾಗುವ ಸಾಮಗ್ರಿಗಳು: ಬೀನ್ಸ್, ಕ್ಯಾರೆಟ್, ಆಲೂಗಡ್ಡೆ, ಹೂಕೋಸ್, ಈರುಳ್ಳಿ ( ತರಕಾರಿಗಳನ್ನು ನಿಮಗೆ ಬೇಕಾದ ಪ್ರಮಾಣದಲ್ಲಿ ಹಾಕಬಹುದು) ಪೇಸ್ಟ್ ತಯಾರಿಸಲು – 2 ಈರುಳ್ಳಿ, ಸ್ವಲ್ಪ ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಸ್ವಲ್ಪ, ಒಂದು ಟೊಮ್ಯಾಟೋ, ಹಸಿಮೆಣಸು-2. ಬಟಾಣಿ ನೆನೆಸಿಟ್ಟಿದ್ದು, ಬಸುಮಾತಿ ಅಕ್ಕಿ ತೊಳೆದು 10 ನಿಮಿಷ ನೀರಿನಲ್ಲಿ ನೆನೆಸಬೇಕು. ಗೋಡಂಬಿ ಸ್ವಲ್ಪ, ತುಪ್ಪ ಒಗ್ಗರಣೆಗೆ, ರುಚಿಗೆ ತಕ್ಕಷ್ಟು ಉಪ್ಪು

ಪಲಾವ್ ಮಾಡುವ ವಿಧಾನ: ಮೊದಲು ತರಕಾರಿಗಳನ್ನು ಕತ್ತರಿಸಿ ಬೇಯಿಸಿಕೊಳ್ಳಬೇಕು. ಹೂಕೋಸ್ ನ್ನು ಬಿಡಿಸಿ ಬಿಸಿನೀರಿನಲ್ಲಿ ಉಪ್ಪು ಹಾಕಿ ಸ್ವಲ್ಪ ಹೊತ್ತು ನೆನಸಿಡಿ. ಇದರಿಂದ ಅದರಲ್ಲಿರುವ ಹುಳುಗಳು ಸಾಯುತ್ತವೆ. ಮೊದಲಿಗೆ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಈರುಳ್ಳಿ, ಶುಂಠಿ, ಹಸಿಮೆಣಸು ಇವುಗಳನ್ನು ಹೆಚ್ಚಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಮಸಾಲೆಗೆ ಬೇಕಾದ ಚಕ್ಕೆ, ಪಲಾವ್ ಎಲೆ, ಕಾಳುಮೆಣಸು, ಮೊಗ್ಗು, ಲವಂಗ ಇವುಗಳನ್ನು ಹಾಕಿ ಕುಟ್ಟಿ ಪುಡಿಮಾಡಿಕೊಳ್ಳಿ.

ಈಗ ಒಂದು ಬಾಣಲೆಯನ್ನು ಸ್ಟೋವ್ ಮೇಲಿಟ್ಟು ಅದಕ್ಕೆ 3 ಚಮಚ ತುಪ್ಪ ಹಾಕಿ. ಅದಕ್ಕೆ ಗೋಡಂಬಿ ಹಾಕಿ ಹುರಿಯಿರಿ. ನಂತರ ಪುಡಿಮಾಡಿಕೊಂಡ ಮಸಾಲ ಹಾಕಿ. ಇದಕ್ಕೆ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ ಹುರಿಯಬೇಕು. ನಂತರ ರುಬ್ಬುಕೊಂಡ ಪೇಸ್ಟ್ ನ್ನು ಮಿಕ್ಸ್ ಮಾಡಿ. ಇದಕ್ಕೆ ಹೆಚ್ಚಿಟ್ಟುಕೊಂಡ ತರಕಾರಿ ಹಾಗೂ ಬಟಾಣಿ ಹಾಕಿ 5-6 ನಿಮಿಷ ಮುಚ್ಚಿಟ್ಟು ಬೇಯಿಸಿಕೊಳ್ಳಿ. ನಂತರ ನೀರನ್ನು ಸೇರಿಸಿ. 1 ಕಪ್ ಅಕ್ಕಿಗೆ 2 ಕಪ್ ಅಳತೆಯಲ್ಲಿ ನೀರು ಹಾಕಬೇಕು. ಇನ್ನು ತರಕಾರಿಗಳು ಇರುವುದಕ್ಕಾಗಿ ಅರ್ಧ ಕಪ್ ನೀರು ಜಾಸ್ತಿ ಹಾಕಿ. ಇನ್ನು ಇದಕ್ಕೆ ನೆನೆಸಿಟ್ಟುಕೊಂಡ ಅಕ್ಕಿ ಸೇರಿಸಿ. ನಡುವಲ್ಲಿ ಒಮ್ಮೆ ಮಿಕ್ಸ್ ಮಾಡಿ ಬೇಯಿಸಿದರೆ ರುಚಿಯಾದ ಪಲಾವ್ ಸಿದ್ಧ. ಇನ್ನು ಬೇಕಿದ್ದರೆ, ಪಲಾವ್ ಗೆ ಹೆಚ್ಚಿದ ಸೌತೆಕಾಯಿ, ಈರುಳ್ಳಿ, ಟೊಮ್ಯಾಟೋ ಹಾಗೂ ಹಸಿಮೆಣಸು, ಸ್ವಲ್ಪ ಉಪ್ಪು ಹಾಕಿ ಜೊತೆಗೆ ಗಟ್ಟಿ ಮೊಸರನ್ನು ಸೇರಿಸಿದರೆ ಸೂಪರ್ ಅದ ಸಲಾಡ್ ಕೂಡ ರೆಡಿಯಾಗುತ್ತದೆ.

Comments are closed.