ಅಂಜಲಿ ನಂತರ ಶಿವಣ್ಣ ರವರ ಜೊತೆ ಕನ್ನಡಕ್ಕೆ ಪಾದಾರ್ಪಣೆ ಮಾಡಲು ತಯಾರಾದ ತೆಲುಗಿನ ಖ್ಯಾತ ಯುವ ನಟಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಚಂದನವನದ ಅಂಗಳಕ್ಕೆ ತೆಲಗು ತಮಿಳು ಹಿಂದಿ ಹೀಗೆ ಎಲ್ಲ ಭಾಷೆಗಳಿಂದಲೂ ತಾರೆಯರು ನಾಯಕಿಯರಾಗಿ ಬರುತ್ತಾರೆ. ಕೆಲವರು ಫೇಮಸ್ ಆಗಿ ಇನ್ನಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದರೆ ಇನ್ನೂ ಕೆಲವರು ಒಂದೇ ಚಿತ್ರದಲ್ಲಿ ನಟಿಸಿ ಹೇಳ ಹೆಸರಿಲ್ಲದಂತೆ ಹೋಗುತ್ತಾರೆ. ಹಾಗೇ ಸಿನಿಮಾಗಳಿಗೆ ಅಭಿಮಾನಿಗಳ ಕ್ರೇಜ್ ಹೆಚ್ಚಿಸಲು ಸಾಮಾನ್ಯವಾಗಿ ನಿರ್ಮಾಪಕರು ಹಾಗೂ ನಿರ್ದೇಶಕರು ತಾವು ಮಾಡುವ ಸಿನಿಮಾಗಳ ಹೀರೋ ಒಟ್ಟಿಗೆ ಇತರ ಚಿತ್ರರಂಗ ಗಳಿಂದ ನಾಯಕಿಯನ್ನು ಕರೆ ತಂದರೆ ಅಭಿಮಾನಿಗಳಿಗೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ ಎಂಬುದು ಗಾಂಧಿ ನಗರದ ಲೆಕ್ಕಾಚಾರವಾಗಿದೆ.

ಇನ್ನು ಇದೀಗ ಕನ್ನಡದ ಕನ್ನಡದ ಟಾಪ್ ನಟರೊಬ್ಬರೊಂದಿಗೆ ತೆಲುಗಿನ ಖ್ಯಾತ ನಟಿ ಹಾಗೂ ತಮಿಳು ಚಿತ್ರರಂಗದಲ್ಲಿ ಇತ್ತೀಚೆಗಷ್ಟೇ ಸದ್ದು ಮಾಡಲು ಆರಂಭಿಸಿರುವ ನಟಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹೌದು ಸ್ನೇಹಿತರೇ ಇದೀಗ ಕನ್ನಡದ ಖ್ಯಾತ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆ ಚಿತ್ರವೊಂದರಲ್ಲಿ ಹೆಜ್ಜೆಹಾಕಲು ಬರುತ್ತಿದ್ದಾರೆ ನಟಿ ಮೆಹ್ರಿನ್ ಫಿರ್ಝಾದಾ. ಮೆಹ್ರಿನ್ ಮೊದಲು ಮಾಡಲಿಂಗ್ ಲೋಕದಲ್ಲಿ ಮಿಂಚಿದವರು. ನಂತರ ಕೃಷ್ಣ ಗಾದಿ ತೆಲಗು ಚಿತ್ರರಂಗಕ್ಕೆ ಕಾಲಿಟ್ಟರು.

2017ರಲ್ಲಿ ತಮಿಳು ಚಿತ್ರ, ‘ತುನೀವಿರುಂಡಲ್’ ನಟಿಸಿ ಜನಪ್ರಿಯತೆಗಳಿಸಿದರು. ತದನಂತರವೂ ಕೆಲವು ಚಿತ್ರಗಳಿಗೆ ಬಣ್ಣ ಹಚ್ಚಿದ ನಟಿ ಮೆಹ್ರಿನ್ ಈಗ ಬಂದಿದ್ದು ಕನ್ನಡಕ್ಕೆ. ರಾಮ್ ಧೂಳಿಪುಡಿಯವರು ನಿರ್ದೇಶನ ಮಾಡಲಿರುವ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ 124 ನೇ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಮೆಹ್ರಿನ್. ಶ್ರೀಕಾಂತ್ ಧೂಲಿಪುಡಿ ಮತ್ತು ಶ್ರೀನಿವಾಸ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಇನ್ನು ಟಗರು ಹಿಟ್ ಸಾಂಗ್ ಕೊಟ್ಟ ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮೆಹ್ರಿನ್ ಅವರ ಕನ್ನಡದ ಮೊದಲ ಚಿತ್ರವೇ ಕನ್ನಡದ ಮೇರು ನಟ ಶಿವಣ್ಣಅವರೊಂದಿಗೆ ಎಂಬುದೇ ವಿಶೇಷ.

Comments are closed.