ಮಹಿಳೆಯರಿಗೆ ಕಾಡುವ ಪ್ರಮುಖ ಈ ನಾಲ್ಕು ಸಮಸ್ಯೆಗಳಿಗೆ ಕೇವಲ ಹಸಿ ಈರುಳ್ಳಿ ಒಂದೇ ಪರಿಹಾರ. ಯಾವ ರೀತಿ ಬಳಸಬೇಕು ಗೊತ್ತೇ?

ನಮಸ್ಕಾರ ಸ್ನೇಹಿತರೇ ಈರುಳ್ಳಿಯನ್ನು ಸಾಮಾನ್ಯವಾಗಿ ಎಲ್ಲಾಅಡುಗೆಗಳಲ್ಲಿಯೂ ಬಳಸಲಾಗುತ್ತದೆ. ಹಾಗೆಯೇ ಈರುಳ್ಳಿಯ ಹಸಿ ವಾಸನೆಗೆ ಅದನ್ನು ಬಳಸದೇ ಇರುವವರೂ ಹಲವರಿದ್ದಾರೆ. ಸಾಕಷ್ಟು ಜನರಿಗೆ ಈರುಳ್ಳಿ ಸೇವನೆ ಅಷ್ಟು ಇಷ್ಟವಿರುವುದಿಲ್ಲ. ಆದರೆ ಈ ಹಸಿ ಈರುಳ್ಳಿಯಲ್ಲಿರುವ ಆರೋಗ್ಯ ಪ್ರಯೋಜನಗಳನ್ನು ಕೇಳಿದ್ರೆ ಈರುಳ್ಳಿ ಬಳಸದವರೂ ಬಳಸಲು ಶುರು ಮಾಡುವುದು ಖಂಡಿತ. ಯಾವ ಪ್ರಯೋಜನ ಗೊತ್ತಾ?

ಹೌದು ಸ್ನೇಹಿತರೆ, ಹಸಿ ಈರುಳ್ಳಿಯಲ್ಲಿ ಕ್ಯಾಲರಿ ತುಂಬಾ ಕಡಿಮೆ ಇದೆ ಹಾಗೆಯೇ ವಿಟಮಿನ್ ಬಿ, ಸಿ, ಕಬ್ಬಿಣ ಮೊದಲಾದ ಪೋಷಕಾಂಶಗಳು ಹೇರಳವಾಗಿವೆ. ಹಾಗಾಗಿ ಇದು ಸಾಕಷ್ಟು ಔಷಧಿಗೂ ಬಳಸಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಮಹಿಳೆಯರಿಗೆ ಕಾಡುವ ಕೆಲವು ಆರೋಗ್ಯ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಬಲ್ಲದು ಈರುಳ್ಳಿ. ಮುಟ್ಟಾಗುವುದು ನಿಂತ ನಂತರ ಮಹಿಳೆಯರಲ್ಲಿ ಈಸ್ಟ್ರೊಜೆನ್ ಉತ್ಪಾದನೆಯು ಕಡಿಮೆಯಾಗುತ್ತದೆ. ಇದರಿಂದಾಗಿ ಕ್ಯಾಲ್ಸಿಯಂ ಕೊರತೆ ಉಂಟಾಗುತ್ತದೆ. ಹಾಗಾಗಿ ಕ್ಯಾಲ್ಸಿಯಂ ಪೂರಕವಾದ ಈರುಳ್ಳಿ ಸೇವನೆ ಅತ್ಯಂತ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಚರ್ಮದ ಕಾಂತಿ ಹೆಚ್ಚಿಸಲು ಅಥವಾ ತ್ವಚೆಯಲ್ಲಿನ ಸುಕ್ಕನ್ನು ತೆಗೆಯಲು ಈರುಳ್ಳಿಯನ್ನು ಬಳಸಿ ವಿಟಮಿನ್ ಎ, ಸಿ ಮತ್ತು ಇ ಅಂಶವುರುವ ಈರುಳ್ಳಿ ನಂಜುನಿರೋಧಕ ಗುಣಲಕ್ಷಣಗಳನ್ನೂ ಹೊಂದಿದ್ದು ಸೋಂಕನ್ನು ತಡೆಯುತ್ತದೆ.

onion | ಮಹಿಳೆಯರಿಗೆ ಕಾಡುವ ಪ್ರಮುಖ ಈ ನಾಲ್ಕು ಸಮಸ್ಯೆಗಳಿಗೆ ಕೇವಲ ಹಸಿ ಈರುಳ್ಳಿ ಒಂದೇ ಪರಿಹಾರ. ಯಾವ ರೀತಿ ಬಳಸಬೇಕು ಗೊತ್ತೇ?
ಮಹಿಳೆಯರಿಗೆ ಕಾಡುವ ಪ್ರಮುಖ ಈ ನಾಲ್ಕು ಸಮಸ್ಯೆಗಳಿಗೆ ಕೇವಲ ಹಸಿ ಈರುಳ್ಳಿ ಒಂದೇ ಪರಿಹಾರ. ಯಾವ ರೀತಿ ಬಳಸಬೇಕು ಗೊತ್ತೇ? 2

ಈರುಳ್ಳಿ ಆಂಟಿಬ್ಯಾಕ್ಟೀರಿಯಲ್, ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಹಾಗಾಗಿ ಇದು ಮುಖದಲ್ಲಿ ಏಳುವ ಮೊಡವೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಈರುಳ್ಳಿ ರಸಕ್ಕೆ1 ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ ಮುಖಕ್ಕೆ ಹಚ್ಚಬೇಕು ೧೫ ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ನಿಯಮಿತವಾಗಿ ಹೀಗೆ ಮಾಡುತ್ತಾ ಬಂದರೆ ಮೊಡವೆ ಸಮಸ್ಯೆ ನಿಮ್ಮಿಂದ ದೂರವಾಗುತ್ತದೆ. ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸವಂಥ ಸಲ್ಫರ್ ಅಂಶ ಈರುಳ್ಳಿಯಲ್ಲಿದೆ. ಇದು ಕೂದಲಿನ ಆರೈಕೆ ಮಾಡುತ್ತದೆ. ಈರುಳ್ಳಿ ರಸವನ್ನು ಕೂದಲಿಗೆ ಲೇಪಿಸುವುದು ಕೂದಲ ಬೆಳವಣಿಗೆಗೆ ಸಹಾಯಕಾರಿ. ಹೀಗೆ ಕೇವಲ ಊಟಕ್ಕೆ ಮಾತ್ರವಲ್ಲದೇ ನಮ್ಮ ದೇಹದ ಹಲವು ಆರೋಗ್ಯ ಸಮಸ್ಯೆಗಳನ್ನೂ ನಿವಾರಿಸಬಲ್ಲ ಈರುಳ್ಳಿಯನ್ನು ನಿಯಮಿತವಾಗಿ ಬಳಸುತ್ತಾ ಬಂದರೆ ಉತ್ತಮ ಪ್ರಯೋಜನ ಪಡೆಯುತ್ತೀರಿ.

Comments are closed.