ಯಾವುದೇ ಚಿಕ್ಕ ವಯಸ್ಸಿನ ಹೀರೊಯಿನ್ ಗು ಕಡಿಮೆ ಇಲ್ಲದಂತೆ ಇನ್ನು ಯಂಗ್ ಆಗಿ ಕಾಣುವ ಯಮುನಾ ರವರ ವಯಸ್ಸೆಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಮೊದಲಿನ ಕಾಲದಿಂದಲೂ ಕೂಡ ನಟಿಯರು ಪರಭಾಷೆ ಗಳಿಂದಲೇ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದದ್ದು ಜಾಸ್ತಿ. ಹೀಗಾಗಿ ಇಲ್ಲಿನ ನಟಿಯರಿಗೆ ಅವಕಾಶ ಸಿಗುತ್ತಿದ್ದುದು ಕಡಿಮೆ. ಆದರೆ ಪರಭಾಷಾ ನಟಿಯರು ಕೂಡ ಆ ಕನ್ನಡ ಚಿತ್ರರಂಗಕ್ಕೆ ಹೊಂದುವಂತೆ ನಟಿಸುತ್ತಿದ್ದರು. ಅಂತಹ ನಟಿಯರಲ್ಲಿ ಒಬ್ಬರ ಕುರಿತಂತೆ ಇಂದು ನಾವು ಮಾತನಾಡಲು ಹೊರಟಿದ್ದೇವೆ. ಹೌದು ಸ್ನೇಹಿತರೆ ಇಂದು ನಾವು ಮಾತನಾಡಲು ಹೊರಟಿರುವುದು ಬಹುಭಾಷಾ ನಟಿ ಯಮುನಾ ರವರ ಕುರಿತು. ಯಮುನಾ ರವರು ಅವರು ನಾಯಕಿಯಾಗಿದ್ದ ಕಾಲದಲ್ಲಿ ಹಲವಾರು ಭಾಷೆಗಳಲ್ಲಿ ಬಹುಭಾಷ ತಾರೆಯಾಗಿ ಮಿಂಚಿ ಮೆರೆದವರು.

ಇನ್ನು ಇವರು ಚಿತ್ರ ಲೋಕಕ್ಕೆ ಪಾದಾರ್ಪಣೆ ಮಾಡಿದ್ದು ತೆಲುಗು ಚಿತ್ರರಂಗದ ಮೌನ ಪೋರಾಟಂ ಎಂಬ ಚಿತ್ರದ ಮೂಲಕ. ಇನ್ನು ಇವರು ಕನ್ನಡ ತೆಲುಗು ತಮಿಳು ಮಲಯಾಳಂ ಹೀಗೆ ಎಲ್ಲಾ ಭಾಷೆಗಳಲ್ಲೂ ನಟಿಸಿ ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಜನಪ್ರಿಯರಾಗಿದ್ದರು. ಇನ್ನು ಯಮುನಾ ರವರು ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದು 1989 ರಲ್ಲಿ ಬಿಡುಗಡೆಯಾದಂತಹ ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ಮೋಡದ ಮರೆಯಲ್ಲಿ ಎಂಬ ಚಿತ್ರದ ಮೂಲಕ. ಮಾವನಿಗೆ ತಕ್ಕ ಅಳಿಯ ಹೆಂಡ್ತಿರೆ ಹುಷಾರ್ ಪ್ರೇಮಗೀತೆ ಹೇಗೆ ಹಲವಾರು ಕನ್ನಡ ಚಿತ್ರಗಳಲ್ಲಿ ಯಮನಾ ರವರು ನಟಿಸಿ ಕನ್ನಡಿಗರ ಮನ ರಂಜಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಯಮುನಾ ರವರಿಗೆ ಅತ್ಯಂತ ಹೆಚ್ಚು ಯಶಸ್ಸನ್ನು ತಂದುಕೊಟ್ಟಂತಹ ಚಿತ್ರವೆಂದರೆ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಚಿನ್ನ ಚಿತ್ರ. ಇವರು ದಕ್ಷಿಣ ಭಾರತದಲ್ಲಿ ಎಲ್ಲಾ ಚಿತ್ರರಂಗಗಳಲ್ಲಿ 50ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದು ಎಲ್ಲಾ ಭಾಷೆಗಳಲ್ಲಿಯೂ ಸಹಸ್ರಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು ಇವರು ನಟಿಸಿದ ಕೊನೆಯ ಕನ್ನಡ ಚಿತ್ರವೆಂದರೆ 2017 ರಲ್ಲಿ ಬಿಡುಗಡೆಯಾದಂತಹ ರಾಜರಥ ಚಿತ್ರ. ಇನ್ನು ಯಮುನಾ ರವರು ಈಗ ತಮಿಳು ಹಾಗೂ ತೆಲುಗು ಕಿರುತೆರೆಯ ಧಾರವಾಹಿಗಳಲ್ಲಿ ಸಕ್ರಿಯರಾಗಿ ನಟಿಸುತ್ತಿದ್ದಾರೆ. ಇನ್ನು ಇಂದಿಗೂ ಕೂಡ ಚಿರ ಯುವತಿಯಂತೆ ಕಾಣಿಸುವ ಯಮುನಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತಾ ಸ್ನೇಹಿತರೆ. ಯಮುನಾ ರವರಿಗೆ 49 ವರ್ಷ ವಯಸ್ಸಾಗಿದೆ. ನೋಡೋದಕ್ಕೆ ಮೂವತ್ತರ ಹರೆಯದ ಯುವತಿ ಅಂತೆ ಕಾಣಿಸುತ್ತಾರೆ.

Comments are closed.