ಲವ್ ಜಿ’ಹಾದ್ ಕುರಿತು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದಂತೆ ಸಿ’ಡಿದೆದ್ದ ಯೋಗಿ ಮಹತ್ವದ ನಿರ್ಧಾರ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಇದೀಗ ಇತ್ತೀಚಿನ ದಿನಗಳಲ್ಲಿ ಲವ್ ಜಿ’ಹಾದ್ ಭಾರಿ ಸದ್ದು ಮಾಡುತ್ತಿದೆ. ಕೆಲವರು ಯುವಕರು ಮ’ತಾಂತರ ನಡೆಸಲು ತಮ್ಮ ಧರ್ಮವನ್ನು ಮರೆಮಾಚಿ ಮದುವೆಯಾದ ಬಳಿಕ ಅಥವಾ ಮದುವೆಗೂ ಕೆಲವೇ ಕೆಲವು ದಿನಗಳಿಗೆ ಮುನ್ನ ತಮ್ಮ ಧರ್ಮವನ್ನು ಬಹಿರಂಗಗೊಳಿಸಿ ಪ್ರೀತಿ ಎಂಬ ಮಾಯೆಗೆ ಸಿಲುಕಿಸಿ ಬಲವಂತವಾಗಿ ಮ’ತಾಂತರ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಕುರಿತು ಇಡೀ ದೇಶದ ಎಲ್ಲೆಡೆ ಹಲವಾರು ಪ್ರ’ಕರಣಗಳು ಕೂಡ ದಾಖಲಾಗಿವೆ. ಇನ್ನು ಮದುವೆಯಾದ ಬಳಿಕ ವಿವಿಧ ರೀತಿಯ ಘಟನೆಗಳು ನಡೆದಿದ್ದು ಅವು ಕೂಡ ದೇಶದೆಲ್ಲೆಡೆ ಭಾರೀ ಸಂಚಲನವನ್ನು ಮೂಡಿಸಿವೆ.

ಇದೇ ರೀತಿಯ ಘಟನೆ ಮತ್ತೊಂದು ನಡೆದಿದ್ದು ನವದಂಪತಿಗಳು ಮದುವೆಯಾದ ಬಳಿಕ ಹುಡುಗಿಯ ತಂದೆ ಅಂತರ್ ಧ’ರ್ಮೀಯ ಮದುವೆಯಲ್ಲಿ ತೊ’ಡಕು ಉಂಟಾಗಬಹುದು ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದರ ಕುರಿತು ವಿಚಾರಣೆ ನಡೆಸಿ ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್ ಕೇವಲ ಮದುವೆ ಕಾರಣಕ್ಕಾಗಿ ಮತ್ತೊಂದು ಧರ್ಮಕ್ಕೆ ಮ’ತಾಂತರವಾಗುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಈ ರೀತಿ ಮಾಡುವುದು ಮಾನ್ಯವಲ್ಲ ಎಂದು ತೀರ್ಪು ನೀಡಿದೆ. ಇದರ ಬೆನ್ನಲ್ಲೇ ಬಹುಶಹ ಈ ತೀರ್ಪಿಗಾಗಿ ಯೋಗಿ ಆದಿತ್ಯನಾಥ್ ಅವರು ಕಾಯುತ್ತಿದ್ದರು ಎಂದು ಕಾಣುತ್ತದೆ.

ಈ ತೀರ್ಪಿನ ಬಳಿಕ ಮಾತನಾಡಿರುವ ಯೋಗಿ ಆದಿತ್ಯನಾಥ್ ರವರು, ಅಂತರ್ ಧ’ರ್ಮೀಯ ಮದುವೆ ಗಳಿಗಾಗಿ ಬಲವಂತವಾಗಿ ಯಾರಾದರೂ ಮ’ತಾಂತರ ಮಾಡಿದರೇ ಅವರಿಗೆ ರಾಮ ನಾಮ ಸತ್ಯದ ಪ್ರಯಾಣಕ್ಕೆ ಕಳುಹಿಸಿಕೊಡಲಾಗುವುದು, ಅಲಹಾಬಾದ್ ಹೈಕೋರ್ಟ್ ಮದುವೆಯ ಸಂದರ್ಭದಲ್ಲಿ ಮ’ತಾಂತರ ಅಗತ್ಯವಿಲ್ಲ ಎಂದು ತೀರ್ಪು ನೀಡಿದೆ. ಇದೇ ಕಾರಣಕ್ಕಾಗಿ ಉತ್ತರ ಪ್ರದೇಶದಲ್ಲಿ ಲ’ವ್ ಜಿ’ಹಾದ್ ತಡೆಯಲು ಸ’ರ್ಕಾರ ಕ’ಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಯಾರಾದರೂ ಈ ರೀತಿಯ ಕೆಲಸಗಳಿಗೆ ಕೈ ಹಾಕಿ ನಮ್ಮ ಸಹೋದರಿಯರ ಗೌರವಕ್ಕೆ ಧ’ಕ್ಕೆ ತರುವ ಕೆಲಸ ಮಾಡಲು ಮುಂದಾದರೇ‌ ಅವರಿಗೆ ರಾಮ ನಾಮ ಸತ್ಯದ ಪ್ರಯಾಣವನ್ನು ತೋರಿಸುತ್ತೇವೆ ಎಂದು ಹೇಳುವ ಮೂಲಕ ಎಲ್ಲರಿಗೂ ಎ’ಚ್ಚರಿಕೆಯ ಸಂದೇಶ ರವಾನೆ ಮಾಡಿದ್ದಾರೆ.

Comments are closed.