ಅಪ್ಪನ ಸಂಸ್ಕಾರ ನಡೆದ ಜಾಗಕ್ಕೆ ಜನುಮದಿನ ಆಚರಿಸಲು ಬಂದ ಮಗಳು ಆನಂತರ ನಡೆದದ್ದೇ ಬೇರೆ??

ನಮಸ್ಕಾರ ಸ್ನೇಹಿತರೇ ಈ ಭೂಮಿಯ ಮೇಲೆ ನಾವು ಎಷ್ಟು ದಿನ ಇರುತ್ತೇವೆ ಎಂಬುದು ಇಂದಿನ ಕಾಲದಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ. ಮೊದಲು ಮನುಷ್ಯ ನೂರು ವರ್ಷಗಳ ಕಾಲ ಬದುಕುತ್ತಾನೆ ಎಂಬ ಮಾತಿತ್ತು ಆದರೆ ಈಗ ಯಾವ ವಯಸ್ಸಿನ ದೃಢೀಕರಣ ಕೂಡ ಇಂದು ನಿಜವಾಗಿ ಉಳಿದಿಲ್ಲ. ಇತ್ತೀಚಿಗಷ್ಟೇ ಸ್ಪಂದನ ಎಂಬ ಚಿಕ್ಕಮಗು ಅಗಲಿರುವ ತನ್ನ ತಂದೆಯ ಜೊತೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ವಿಶೇಷವಾಗಿದ್ದು ಹಾಗೂ ಎಲ್ಲರ ಮನಕಲುಕುವಂತಿತ್ತು. ಹೌದು ಸ್ನೇಹಿತರೆ ಸ್ಪಂದನ ಕೊಪ್ಪಳ ಜಿಲ್ಲೆಯ ಮೂಲದವಳು.

ಸ್ಪಂದನಾಳಿಗೆ ಇದೀಗ ಎಂಟು ವರ್ಷ ತುಂಬಿದೆ. ಪ್ರತಿ ವರ್ಷ ತನ್ನ ತಂದೆ ಮಹೇಶ್ ಜೊತೆಗೆ ತನ್ನ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದ ಹುಡುಗಿ ಇದೀಗ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಆಗದಂತೆ ಆಗಿದೆ. ಹೌದು ಸ್ನೇಹಿತರೇ ಇದೆ ವರ್ಷ ಮೇ ತಿಂಗಳಿನಲ್ಲಿ ಮಹೇಶ್ ಮಹಾಮಾರಿಗೆ ತನ್ನ ಜೀವವನ್ನು ಕಳೆದುಕೊಂಡಿದ್ದಾರೆ. ಈ ವರ್ಷದ ಜನುಮ ದಿನವನ್ನು ಕೂಡ ಸ್ಪಂದನ ಮನೆಯವರು ಸರಳವಾಗಿ ಮನೆಯಲ್ಲಿ ಆಚರಿಸುವ ಯೋಜನೆ ಮಾಡಿಕೊಂಡಿದ್ದರು. ಆದರೆ ಸ್ಪಂದನ ಮಾತ್ರ ತನ್ನ ತಂದೆಯೊಡನೆ ತನ್ನ ಜನ್ಮದಿನವನ್ನು ಸೆಲೆಬ್ರೇಟ್ ಮಾಡಲೇ ಬೇಕೆಂದು ಹಠ ಹಿಡಿದಿದ್ದಳು. ಕೊನೆಗೂ ಕೂಡ ದಾರಿಕಾಣದೆ ಸ್ಪಂದನ ರವರ ತಾಯಿಯವರು ಹಾಗೂ ಮನೆಯವರು ಮಹೇಶ್ ಕೊನೆಯ ಸಂಸ್ಕಾರ ನಡೆದಿದ್ದ ಸ್ಥಳಕ್ಕೆ ಬಂದು ಅಲ್ಲಿಯೇ ಕೇಕನ್ನು ತಂದಿದ್ದರು.

ಮುಂದೆ ನಡೆದಿದ್ದು ಖಂಡಿತವಾಗಿ ನಿಮ್ಮ ಕಣ್ಣಿನಲ್ಲಿ ಕೂಡ ನೀರು ಬರುವಂತೆ ಮಾಡುವ ಸಂಗತಿ. ಹೌದು ಸ್ನೇಹಿತರೆ ಪ್ರತಿವರ್ಷ ಮಹೇಶ್ ಬದುಕಿದ್ದಾಗ ತನ್ನ ಮಗಳ ಜನ್ಮದಿನವನ್ನು ವಿಜ್ರಂಭಣೆಯಿಂದ ಆಚರಿಸುತ್ತಿದ್ದರು ಹಾಗೆಯೇ ಮಗಳಿಂದ ಮೊದಲ ಕೇಕನ್ನು ಕೂಡ ಅವರೇ ತಿನ್ನುತ್ತಿದ್ದರು. ಈ ಬಾರಿ ಕೂಡ ಅವರ ಮಗಳು ಸ್ಪಂದನ ಆಕೆಯ ತಂದೆ ಮಹೇಶ್ ರವರ ಕೊನೆ ಸಂಸ್ಕಾರ ನಡೆದ ಜಾಗಕ್ಕೆ ಹೋಗಿ ಅಪ್ಪ ಕೇಕ್ ತಿನ್ನಪ್ಪ ಎಂದು ಗೋಗರೆದಿದ್ದು ಎಲ್ಲರ ಕಣ್ಣು ತೇವವಾಗುವಂತೆ ಮಾಡಿದೆ. ಇನ್ನು ಹಲವಾರು ಬಾರಿ ಈ ತರಹ ಮಾಡಿದ ಮಗಳು ನಂತರ ಅಪ್ಪ ಕೇಕ್ ತಿನ್ನದೆ ಇದ್ದದ್ದನ್ನು ನೋಡಿ ನಿಧಾನವಾಗಿ ತಿನ್ನು ನಾನು ಆಮೇಲೆ ಸಿಗುತ್ತೇನೆ ಎಂದು ಹೇಳಿರುವ ದೃಶ್ಯ ಕೂಡ ಎಲ್ಲರ ಮನ ಹಿಂಡಿತ್ತು. ಜೊತೆಗಿರದ ಜೀವ ಎಂದಿಗಿಂತ ಸನಿಹ ಎಂಬ ಮಾತು ಇಲ್ಲಿ ನಿಜವಾದಂತೆ ಕಾಣಿಸುತ್ತದೆ. ತನ್ನ ಮಗಳ ನಿಷ್ಕಲ್ಮಶ ಪ್ರೀತಿಯನ್ನು ತಂದೆ ಸ್ವರ್ಗದಲ್ಲಿ ನಿಂತು ಸಂತೋಷಪಡುತ್ತಿದ್ದ ಭಾವನೆ ಎಲ್ಲರಲ್ಲೂ ಕಾಣುತ್ತಿತ್ತು.

Comments are closed.