ಬಸವರಾಜ ಬೊಮ್ಮಾಯಿ ರವರ ಫ್ಯಾಮಿಲಿ ಹೇಗಿದೆ ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಒಂದು ಸಮಯದಲ್ಲಿ ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹೆಚ್ಚು ತಲೆಕೆಡಿಸಿದ ಪ್ರಶ್ನೆಯೆಂದರೆ ಕರ್ನಾಟಕ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಆಗುತ್ತಾರೆ ಎಂಬುದು. ಕೊನೆಗೂ ಕೂಡ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಬಸವರಾಜ ಬೊಮ್ಮಾಯಿ ರವರ ರೂಪದಲ್ಲಿ. ಹೌದು ಸ್ನೇಹಿತರ ಬಸವರಾಜ ಬೊಮ್ಮಾಯಿ ರವರು ಯಡಿಯೂರಪ್ಪನವರ ನಂತರ ಅವರ ಆಪ್ತರಾಗಿದ್ದರು ಹೀಗಾಗಿಯೇ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಅವರು ಆಯ್ಕೆಯಾಗಿದ್ದಾರೆ.

ಇನ್ನು ಬಸವರಾಜ ಬೊಮ್ಮಾಯಿ ರವರು ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಅಜಾತಶತ್ರು ಎಂಬ ಪಟ್ಟವನ್ನು ಪಡೆದವರು. ಇನ್ನು ಇವರ ಕುಟುಂಬದ ಕುರಿತಂತೆ ಸವಿವರವಾಗಿ ಹೇಳುತ್ತೇವೆ.ಹೌದು ಸ್ನೇಹಿತರೆ ಬಸವರಾಜ ಬೊಮ್ಮಾಯಿ ರವರು ಎಸ್ ಆರ್ ಬೊಮ್ಮಾಯಿ ರವರ ಪುತ್ರರಾಗಿದ್ದಾರೆ. ಇನ್ನು ಬಸವರಾಜ ಬೊಮ್ಮಾಯಿ ರವರ ತಂದೆ ಎಸ್ ಆರ್ ಬೊಮ್ಮಾಯಿ ರವರು ಕರ್ನಾಟಕ ರಾಜ್ಯದ 11ನೇ ಮುಖ್ಯಮಂತ್ರಿಯಾಗಿದ್ದರು. ಹೀಗಾಗಿಯೇ ಚಿಕ್ಕಂದಿನಿಂದಲೂ ಕೂಡ ಬೊಮ್ಮಾಯಿ ಅವರಿಗೆ ರಾಜಕೀಯ ಕ್ಷೇತ್ರದ ಮೇಲೆ ಆಸಕ್ತಿಯಿತ್ತು. ಇನ್ನು ಇವರು 4 ಬಾರಿ ಶಾಸಕರಾಗಿ ಶಿಂಕಾರ ಕ್ಷೇತ್ರದ ಮೂಲಕ ಆಯ್ಕೆಯಾಗಿದ್ದಾರೆ. ಇನ್ನು ಬಸವರಾಜ ಬೊಮ್ಮಾಯಿ ಅವರು ಮೂಲತಹ ಉದ್ಯಮಿಯಾಗಿದ್ದಾರೆ.

ಇನ್ನು ಇವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿ ಟಾಟಾ ಕಂಪನಿ ಯಲ್ಲಿ ಕೂಡ ಕೆಲಸ ಮಾಡಿ ಅನುಭವ ಪಡೆದಿದ್ದಾರೆ. ಇನ್ನು ಬಸವರಾಜ ಬೊಮ್ಮಾಯಿ ರವರು ಚೆನ್ನಮ್ಮ ಎಂಬುವರನ್ನು ವಿವಾಹವಾಗಿದ್ದು ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳು ಇವರಿಗೆ ಇದ್ದಾರೆ. ಇನ್ನು ಮಗ ಭರತ ರವರು ಅಮೆರಿಕದಲ್ಲಿ ಶಿಕ್ಷಣವನ್ನು ಪೂರೈಸಿ ತಂದೆಯ ಕಂಪನಿಯನ್ನು ನೋಡಿಕೊಳ್ಳುತ್ತಿದ್ದಾರೆ. ಇನ್ನು ಬಸವರಾಜ ಬೊಮ್ಮಾಯಿ ರವರ ಮಗಳು ಅದಿತಿ ಬೆಂಗಳೂರಿನಲ್ಲಿ ಉನ್ನತ ವ್ಯಾಸಂಗವನ್ನು ಮಾಡುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಅವರ ಮಗ ಭರತ್ ಕೂಡ ತಂದೆ ಹಾಗು ತಾತನ ಹಾದಿಯಲ್ಲೇ ಪಾಲಿಟಿಕ್ಸ್ ಗೆ ಎಂಟ್ರಿ ನೀಡುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಬಸವರಾಜ ಬೊಮ್ಮಾಯಿ ರವರ ಸುಂದರ ಕುಟುಂಬದ ಫೋಟೋಗಳನ್ನು ನೀವು ಈ ಕೆಳಗಡೆ ನೋಡಬಹುದಾಗಿದೆ. ಬಸವರಾಜ ಬೊಮ್ಮಾಯಿ ರವರು ಮುಖ್ಯಮಂತ್ರಿ ಆಗಿರುವುದರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.