ನಾವು ಹೇಳಿದ ಹಾಗೆ ಬೆಂಡೆಕಾಯಿಯನ್ನು ಸೇವಿಸಿದರೆ ಮಧುಮೇಹದಿಂದ, ಕಿಡ್ನಿ ಸೇರಿದಂತೆ ಎಷ್ಟೆಲ್ಲಾ ಲಾಭಗಳಲಿವೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ‘ಆರೋಗ್ಯವೇ ಭಾಗ್ಯ’ ಎಂಬ ಮಾತಿನಂತೆ ಈ ಭೂಮಿ ಮೇಲೆ ಜೀವಿಸುತ್ತಿರುವ ಪ್ರತಿಯೊಬ್ಬ ಮನುಷ್ಯನು ಕೂಡ ಆರೋಗ್ಯವಾಗಿರಬೇಕೆಂದು ಆಸೆಪಡುತ್ತಾನೆ. ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಆರೋಗ್ಯವೇ ಮುಖ್ಯವಾಗಿದ್ದು, ಆರೋಗ್ಯ ಇದ್ದರೆ ಮಾತ್ರ ವ್ಯಕ್ತಿ ಏನು ಬೇಕಾದರೂ ಕೂಡ ಸಾಧಿಸಬಹುದು. ಇನ್ನು ನಮ್ಮ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಲು ನಾವು ಹಲವಾರು ಪ್ರೀತಿಯ ಆಹಾರ, ವ್ಯಾಯಾಮ, ಯೋಗ ಹಾಗೂ ಡಯಟ್ ಮೊರೆಹೋಗುತ್ತೇವೆ. ಎಲ್ಲದಕ್ಕಿಂತ ಹೆಚ್ಚಾಗಿ ನಾವು ಆಹಾರದಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸುತ್ತೇವೆ. ಇನ್ನು ನಾವು ಸೇವಿಸುವ ಪ್ರತಿಯೊಂದು ಆಹಾರದಲ್ಲಿ ಒಂದೊಂದು ರೀತಿಯ ಲವಣಾಂಶಗಳು, ಪ್ರೋಟೀನ್ ಗಳು, ಇತರೆ ಖನಿಜಾಂಶಗಳು ದೊರೆಯುತ್ತವೆ. ಇನ್ನು ನಿಮಗೆಲ್ಲ ಬೆಂಡೆಕಾಯಿ ಗೊತ್ತಿರಬೇಕಲ್ಲವೇ? ಹೌದು ಬೆಂಡೆಕಾಯಿ ಪ್ರತಿಯೊಬ್ಬರಿಗೂ ಕೂಡ ಗೊತ್ತಿದ್ದ ತರಕಾರಿ. ಈ ಬೆಂಡೆಕಾಯಿ ಕೂಡ ನಮ್ಮ ದೇಹದ ಆರೋಗ್ಯಕ್ಕೆ ವಿವಿಧ ರೀತಿಯಲ್ಲಿ ಸಹಕರಿಸುತ್ತದೆ.

ಹೌದು ಬೆಂಡೆಕಾಯಿಯ ಮೂಲಕ ನಮ್ಮ ದೇಹಕ್ಕೆ ಫೈಬರ್ ಅಂಶ ಅತ್ಯಧಿಕ ಪ್ರಮಾಣದಲ್ಲಿ ದೊರೆಯುತ್ತದೆ. ಅಷ್ಟೇ ಅಲ್ಲದೆ ಇದರಿಂದ ಸಾಕಷ್ಟು ಪ್ರಯೋಜನ ಗಳಿದ್ದು ಇದು ಪ್ರತಿಯೊಬ್ಬರ ಮನೆಯಲ್ಲಿ ಕೂಡ ಕಂಡುಬರುತ್ತದೆ. ಇದು ಹೇರಳವಾಗಿ ಮಾರುಕಟ್ಟೆಯಲ್ಲಿ ಕೂಡ ಸಿಗುವುದರಿಂದ ಪ್ರತಿಯೊಬ್ಬರು ಕೂಡ ಇದನ್ನು ಆಹಾರ ರೂಪದಲ್ಲಿ ಬಳಸುತ್ತಾರೆ. ಇನ್ನು ಇದು ನಮ್ಮ ದೇಹಕ್ಕೆ ಅನೇಕ ಪೋಷ್ಟಿಕಾಂಶಗಳನ್ನು ಒದಗಿಸುವುದರಿಂದ ಇದನ್ನು ಪ್ರತಿಯೊಬ್ಬರು ಆಹಾರ ಪದಾರ್ಥವಾಗಿ ಬಳಸುತ್ತಾರೆ. ಇನ್ನು ಬೆಂಡೆಕಾಯಿ ಯಾವ ಯಾವ ರೀತಿಯಲ್ಲಿ ನಮ್ಮ ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ಒದಗಿಸುತ್ತದೆ ಎಂಬುದು ಸಾಕಷ್ಟು ಜನರಿಗೆ ತಿಳಿದಿಲ್ಲ. ಹಾಗಾದರೆ ಬೆಂಡಿಕಾಯಿ ಸೇವಿಸುವುದರಿಂದ ನಮ್ಮ ದೇಹಕ್ಕೆ ಯಾವ ರೀತಿಯ ಲಾಭವಿದೆ ಎಂಬುದನ್ನು ಈ ಕೆಳಗಿನ ಮಾಹಿತಿ ಮೂಲಕ ತಿಳಿದುಕೊಳ್ಳೋಣ ಬನ್ನಿ.

ಬೆಂಡೆಕಾಯಿಯಲ್ಲಿ ಫೈಬರ್ ಅಂಶ ಅಧಿಕವಾಗಿರುವುದರಿಂದ ಇದು ನಮ್ಮ ದೇಹದ ಜೀರ್ಣಕ್ರಿಯೆಗೆ ಸಹಾಯಕವಾಗಿದೆ. ಫೈಬರ್ ಅಂಶ ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೌದು ಫೈಬರ್ ಅಂಶ ನಮ್ಮ ದೇಹದ ಜೀರ್ಣಕ್ರಿಯೆ ಸರಾಗವಾಗಿ ಸಾಗಲು ಸಹಕರಿಸುತ್ತದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಧುಮೇಹ ನಿಯಂತ್ರಿಸುತ್ತದೆ:- ಹೌದು ಬೆಂಡೆಕಾಯಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಿಕೊಳ್ಳಬಹುದು. ಬೆಂಡೆಕಾಯಿಯಲ್ಲಿ ಅಧಿಕ ಪ್ರಮಾಣದ ಫೈಬರ್ ಇರುವುದರಿಂದ ಇದು ರೋಗಗಳನ್ನು ತಡೆಗಟ್ಟಲು ಸಹಕರಿಸುತ್ತದೆ. ಅಷ್ಟೇ ಅಲ್ಲದೆ ಮಧುಮೇಹಿಗಳು ಬೆಂಡೆಕಾಯಿಯನ್ನು ಪ್ರತಿನಿತ್ಯ ಸೇವಿಸುವುದರ ಮೂಲಕ ಅವರ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಈ ಸಂದರ್ಭದಲ್ಲಿ ಬೆಂಡೆಕಾಯಿಯನ್ನು ರಾತ್ರಿ ಮಲಗುವುದಕ್ಕಿಂತ ಮುಂಚೆ ನೀರಿನಲ್ಲಿ ಬೆಂಡೆಕಾಯಿಯನ್ನು ನೆನೆಯಿಟ್ಟು ಮುಂಜಾನೆಯ ನೀರನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಿಕೊಳ್ಳಬಹುದು.

ಪೋಲೇಟ್ ಗಳು:- ಇದೀಗ ತಾನೆ ಜನಿಸಿದ ನವಜಾತ ಶಿಶುಗಳ ನ-ರ ಕೊಳವೆಗಳಲ್ಲಿ ಅಳಸಿನ ಯಾದಾಗ ಚಿಕಿತ್ಸೆ ರೂಪದಲ್ಲಿ ಬೆಂಡೆಕಾಯಿಯಲ್ಲಿರುವ ಪೋಲೇಟ್ ಗಳು ಸಹಾಯಕ್ಕೆ ಬರುತ್ತವೆ. ಆದ ಕಾರಣದಿಂದಲೇ ಗರ್ಭಿಣಿಯಾಗಿರುವ ಹೆಣ್ಣುಮಕ್ಕಳಿಗೆ ಬೆಂಡೆಕಾಯಿಯನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ.

ವಿಟಮಿನ್ ಕೆ:- ಅಂಶ ಬೆಂಡೆಕಾಯಿಯಲ್ಲಿ ಹೇರಳವಾಗಿ ಕಂಡು ಬರುವುದರಿಂದ ಇದನ್ನು ಪ್ರತಿನಿತ್ಯ ಸೇವಿಸುವುದರ ಮೂಲಕ ನಮ್ಮ ದೇಹದ ಮೂಳೆಗಳನ್ನು ಬಲಿಷ್ಠವಾಗಿ ಇಟ್ಟುಕೊಳ್ಳಬಹುದು. ಅಷ್ಟೇ ಅಲ್ಲದೆ ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಕೂಡ ಇದು ಸಹಕಾರಿಯಾಗಿರುತ್ತದೆ. ಅಷ್ಟೇ ಅಲ್ಲದೆ ಆಸ್ತಮಾ ಇರುವ ವ್ಯಕ್ತಿ ಆದರೂ ಕೂಡ ಬೆಂಡೆಕಾಯಿಯನ್ನು ಸೇವಿಸುವುದರ ಮೂಲಕ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಆದ ಕಾರಣದಿಂದಲೇ ಸಾಕಷ್ಟು ವೈದ್ಯರು ಅಸ್ತಮ ಇರುವವರಿಗೆ ಬೆಂಡೆಕಾಯಿಯನ್ನು ಹೆಚ್ಚಿ ಸೇವಿಸಲು ಸಲಹೆ ನೀಡುತ್ತಾರೆ.

ಮಲಬದ್ಧತೆ ಹಾಗೂ ಹೃದಯ ಸಂಬಂಧಿ ಕಾಯಿಲೆಯನ್ನು ತಡೆಗಟ್ಟುವುದು: ಹೌದು ಬೆಂಡೆಕಾಯಿಯನ್ನು ಸೇವಿಸುವುದರಿಂದ ಮಲಬದ್ಧತೆ ಹಾಗೂ ಹೃದಯ ಸಂಬಂಧಿ ಕಾಯಿಲೆಗಳನ್ನು ಕೂಡ ನಾವು ತಡೆಯಬಹುದು. ಬೆಂಡೆಕಾಯಿಯಲ್ಲಿ ನೀರನ್ನು ಹೀರಿಕೊಳ್ಳುವ ಪ್ರಮಾಣ ಹೆಚ್ಚಾಗಿರುವುದರಿಂದ ಇದು ಮಲಬದ್ಧತೆಯನ್ನು ತಡೆಗಟ್ಟುತ್ತದೆ. ಇನ್ನು ಹೆಚ್ಚಿನ ಕೊಲೆಸ್ಟ್ರಾಲ್ ನಿಂದ ಕಂಡುಬರುವ ಹೃದಯ ಸಂಬಂಧಿ ಕಾಯಿಲೆಗಳನ್ನು ಕೂಡ ಈ ತರಕಾರಿ ತಡೆಗಟ್ಟುತ್ತದೆ. ಹೌದು ಪ್ರತಿನಿತ್ಯ ಬೆಂಡೆಕಾಯಿಯನ್ನು ಸೇವಿಸುವುದರ ಮೂಲಕ ರಕ್ತದಲ್ಲಿನ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಇದರಿಂದಾಗಿ ದೇಹದಲ್ಲಿನ ಬೊಜ್ಜು ಕರಗಿ ಹೃದಯ ಆರೋಗ್ಯಕರವಾಗಿ ಇರುತ್ತದೆ.

ಜಿಐ (ಗ್ಲೈಸೆಮಿಕ್ ಸೂಚ್ಯಂಕ): ಪ್ರತಿಯೊಬ್ಬ ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಅವರ ವೈದ್ಯರು ಕಡಿಮೆ ಜಿಐ ಇರುವ ಆಹಾರ ಪದಾರ್ಥಗಳನ್ನು ಸೇವಿಸಲು ಸೂಚಿಸುತ್ತಾರೆ. ಇನ್ನು ಇಂತಹ ಆಹಾರ ಪದಾರ್ಥಗಳಲ್ಲಿ ಬೆಂಡೆಕಾಯಿ ಕೂಡ ಒಂದು. ಅಷ್ಟೇ ಅಲ್ಲದೆ ಟೈಪ್ 2 ಡಯಾಬಿಟಿಸ್ ನಿಯಂತ್ರಣ ಕೂಡ ಈ ಬೆಂಡೆಕಾಯಿಯನ್ನು ಸೇವಿಸುವುದರ ಮೂಲಕ ನಾವು ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ ಪ್ರತಿನಿತ್ಯ ಬೆಂಡೆಕಾಯಿಯನ್ನು ಸೇವಿಸುವುದರ ಮೂಲಕ ನಮ್ಮಲ್ಲಿ ಕಂಡುಬರುವ ಮೂತ್ರಪಿಂಡದ ಸಮಸ್ಯೆಗಳಿಂದ ನಾವು ದೂರವಿರಬಹುದು.

ಕೂದಲು ಹಾಗೂ ಚರ್ಮದ ಆರೋಗ್ಯಕ್ಕೆ ಉತ್ತಮ: ಹೌದು ಬೆಂಡೆಕಾಯಿಯನ್ನು ಸೇವಿಸುವುದರ ಮೂಲಕ ನಾವು ದಟ್ಟವಾದ ಕೂದಲನ್ನು ಅಥವಾ ಕೂದಲು ಉದುರುವಿಕೆಯನ್ನು ಕೂಡ ತಡೆಯಬಹುದು. ಹೌದು ಬೆಂಡೆಕಾಯಿಯನ್ನು ನೀರಿನಲ್ಲಿ ಕುದಿಸಿ ನಂತರ ಆ ನೀರನ್ನು ನಮ್ಮ ತಲೆಗೆ ಹಚ್ಚಿ ಕೊಳ್ಳುವುದರ ಮೂಲಕ ನಮ್ಮ ಕೂದಲಿನ ಹಲವಾರು ಸಮಸ್ಯೆಗಳಿಂದ ಮುಕ್ತವಾಗಬಹುದು. ಅಷ್ಟೇ ಅಲ್ಲದೆ ಇದು ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ನೋಡಿದ್ರಲ್ಲ ಸ್ನೇಹಿತರೆ ನಾವು ಪ್ರತಿನಿತ್ಯ ನೋಡುವ ಈ ಬೆಂಡೆಕಾಯಿ ನಮಗೆ ವಿವಿಧ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಇನ್ನು ಇದು ನಮಗೆ ನಮ್ಮ ಆರೋಗ್ಯವನ್ನು ಸುರಕ್ಷಿತವಾಗಿ ಹಾಗೂ ಸದೃಢವಾಗಿ ಇಟ್ಟುಕೊಳ್ಳಲು ಅತ್ಯುತ್ತಮವಾಗಿದೆ ಎಂದು ಹೇಳಬಹುದು. ಹಾಗಾದರೆ ಸ್ನೇಹಿತರೆ ಇಂದಿನಿಂದಲೇ ನೀವು ಈ ಮಾಹಿತಿಯ ಸಂಪೂರ್ಣ ಪ್ರಯೋಜನ ಪಡೆದುಕೊಂಡು ಆರೋಗ್ಯ ಎಂದು ನಾವು ಈ ಮೂಲಕ ಆಶಿಸುತ್ತೇನೆ. ಇನ್ನು ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Comments are closed.