ಕೊನೆಗೂ ಬಯಲಾಯಿತು ಕಣ್ಣೇ ಅದಿರಿಂದಿ ಹಾಡಿಗೆ ಮಂಗ್ಲಿ ರವರು ಪಡೆದ ಅಸಲಿ ಸಂಭಾವನೆ ಎಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ಗಾಯಕಿ ಮಂಗ್ಲಿ ಅಲಿಯಾಸ್ ಸತ್ಯವತಿ ರಾಥೋಡ್. ಒಂದೇ ಒಂದು ಹಾಡಿನ ಮೂಲಕ ದಿನ ಬೆಳಗಾಗೋದರಲ್ಲಿ ಫೇಮಸ್ ಆದವರು. ಕಣ್ಣೇ ಅದೆರೆಂದಿ ಹಾಡಿನ ಮೂಲಕ ಆಂದ್ರದಲ್ಲಿ ಮಾತ್ರವಲ್ಲದೇ ಕರ್ನಾಟಕದ ಜನರ ವಾಟ್ಸಪ್ ಸ್ಟೇಟಸ್ ಗಳಲ್ಲಿ ಮಿಂಚಿದವರು. ಈ ಹಾಡಿನ ಜನಪ್ರಿಯತೆಯಿಂದ ಮಸ್ಕಿ ವಿಧಾನಸಭಾ ಚುನಾವಣೆಯ ಉಪಪ್ರಚಾರಕ್ಕೆ ಸಹ ಆಗಮಿಸಿ ಬಿಜೆಪಿ ಪರ ಪ್ರಚಾರ ಮಾಡಿದ್ದರು.

ರಾಬರ್ಟ್ ಚಿತ್ರದ ಈ ಹಾಡು ಸೂಪರ್ ಹಿಟ್ ಆಗಿತ್ತು. ಚಿಕ್ಕಂದಿನಿಂದಲೇ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದ ಸತ್ಯವತಿ ರಾಥೋಡ್ ಸಿನಿಮಾ ಜಗತ್ತಿಗೆ ಬಂದ ನಂತರ ತಮ್ಮ ಹೆಸರನ್ನು ಮಂಗ್ಲಿ ಎಂದು ಬದಲಾಯಿಸಿಕೊಂಡರು. ಮಂಗ್ಲಿ 2013 ರ ತೆಲುಗಿನ ಚಾನೆಲ್ ಒಂದರಲ್ಲಿ ನಿರೂಪಣೆಗಾರ್ತಿಯಾಗಿ ಟಿವಿ ಜಗತ್ತಿಗೆ ಪರಿಚಯವಾದರು. ತಮ್ಮ ಅರಳುಹುರಿದ ಮುದ್ದಾದ ಮಾತುಗಳಿಂದ ಆದಷ್ಟು ಬೇಗ ಆಂದ್ರ ನಾಡಿನ ಜನರ ಮನ ಗೆದ್ದರು. ಕೆಲವು ದಿನಗಳ ನಂತರ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ತೆರೆದ ಮಂಗ್ಲಿ ಎಲ್ಲಾ ಪ್ರಕಾರದ ಹಾಡುಗಳನ್ನ ಹಾಡಿದರು. ವಿಡೀಯೋಗಳನ್ನು ಮಾಡಿದ್ದರು. ಸದ್ಯ ಮಂಗ್ಲಿ ಅವರ ಚಾನೆಲ್ ಗೆ ಬರೋಬ್ಬರಿ 13 ಲಕ್ಷ ಜನ ಸಬ್ಸ್ಕ್ರೈಬ್ ಮಾಡಿದ್ದಾರೆ.

ಅಂದ ಹಾಗೆ ಹಿನ್ನಲೆ ಗಾಯನಕ್ಕೆ ಮಂಗ್ಲಿ ಪ್ರತಿ ಹಾಡಿಗೆ ಒಂದುವರೆ ಲಕ್ಷ ಸಂಭಾವನೆ ಪಡೆಯುತ್ತಾರಂತೆ. ಕೇವಲ ಹಿನ್ನಲೆ ಗಾಯನ ಮಾತ್ರವಲ್ಲದೇ ಆಲ್ಬಮ್ ವಿಡಿಯೋ ಸಾಂಗ್ ಗಳು, ಒಪನ್ ಸ್ಟೇಜ್ ಶೋಗಳನ್ನ ತಮ್ಮ ತಂಡದೊಂದಿಗೆ ನಡೆಸಿಕೊಡುತ್ತಾರಂತೆ. ದೊಡ್ಡ ದೊಡ್ಡ ಇವೆಂಟ್ ಗಳಲ್ಲಿಯೂ ಸಹ ಕಾರ್ಯಕ್ರಮ ಮಾಡಿಕೊಡುತ್ತಾರಂತೆ. 2014 ರಲ್ಲಿ ಒಂದೆರೆಡು ತೆಲುಗು ಸಿನಿಮಾಗಳಲ್ಲಿ ಹಿರೋಯಿನ್ ಆಗಿ ನಟಿಸಿದ್ದರು. ಒಟ್ಟಿನಲ್ಲಿ ಕಣ್ಣೇ ಅದೆರಿಂದಿ ಸಾಂಗ್ ಮೂಲಕ ಮಂಗ್ಲಿಯ ಮಾರ್ಕೇಟ್ ಮತ್ತಷ್ಟು ಏರಿದೆ. ಇತ್ತಿಚಿಗಷ್ಟೇ ಕನ್ನಡದ ಕರಿಯಾ ಐ ಲವ್ ಯೂ ಸಿನಿಮಾಗೆ ಸಹ ಹಾಡಿದ್ದಾರೆ.

Comments are closed.