ಕನ್ನಡ ಕಿರುತೆರೆಯ ಟಾಪ್ ಧಾರಾವಾಹಿ ಗಟ್ಟಿಮೇಳದಲ್ಲಿ ನಟಿಸುತ್ತಿರುವ ಖ್ಯಾತ ಕಲಾವಿದರ ವಿದ್ಯಾರ್ಹತೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಧಾರವಾಹಿಗಳು ಪ್ರಸಾರವಾಗುತ್ತಿದ್ದು, ಸಿನಿಮಾದಂತೆ ಹೆಚ್ಚಿನ ವೀಕ್ಷಕರನ್ನು ತಮ್ಮತ್ತ ಸೆಳೆಯುತ್ತಿವೆ. ಇನ್ನು ಧಾರವಾಹಿಗಳು ಸಿನಿಮಾಗಳಿಗಿಂತ ಹೆಚ್ಚಿನ ಮನರಂಜನೆಯನ್ನು ಜನರಿಗೆ ನೀಡುತ್ತವೆ. ಇನ್ನು ಇದೀಗ ಲಾಕ ಡೌನ ಆದಕಾರಣ ಚಿತ್ರಮಂದಿರಗಳು ತೆರೆದಿಲ್ಲ. ಈ ಒಂದು ಕಾರಣದಿಂದಲೂ ಕೂಡ ಸಾಕಷ್ಟು ಜನರು ಕಿರುತೆರೆಯ ಧಾರವಾಹಿಯತ್ತ ಮುಖ ಮಾಡಿದ್ದಾರೆ. ಇನ್ನು ಕನ್ನಡ ಕಿರುತೆರೆಯ ಧಾರಾವಾಹಿಗಳಲ್ಲಿ ಪ್ರಮುಖವಾದ ಧಾರಾವಾಹಿ ಗಟ್ಟಿಮೇಳ.

ಹೌದು ಇದೀಗ ಕನ್ನಡ ಕಿರುತೆರೆಯ ಧಾರವಾಹಿಗಳಲ್ಲಿ ಗಟ್ಟಿಮೇಳ ಧಾರವಾಹಿ ಕೂಡ ಒಂದಾಗಿದೆ. ಇನ್ನು ಇದರಲ್ಲಿ ಅಭಿನಯಿಸಿರುವ ಸಾಕಷ್ಟು ಕಲಾವಿದರು ಜನರಿಗೆ ತುಂಬಾ ಇಷ್ಟವಾಗಿದ್ದು, ಸಾಕಷ್ಟು ಅಭಿಮಾನಿಗಳನ್ನು ಕೂಡ ಹೊಂದಿದ್ದಾರೆ. ಇನ್ನು ವೀಕ್ಷಕರಿಗೆ ಈ ಕಲಾವಿದರು ಎಷ್ಟರಮಟ್ಟಿಗೆ ವಿದ್ಯಾಭ್ಯಾಸ ಮುಗಿಸಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಹಾಗಾದರೆ ಗಟ್ಟಿಮೇಳೆ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿಮ್ಮ ನೆಚ್ಚಿನ ನಟ ಹಾಗೂ ನಟಿಯರ ವಿದ್ಯಾರ್ಹತೆ ಕುರಿತು ಈ ಕೆಳಗೆ ಸಂಪೂರ್ಣವಾದ ಮಾಹಿತಿ ನೀಡಲಾಗಿದ್ದು, ಇದನ್ನು ಓದಿ.

ಹೌದು ಇದೀಗ ಕನ್ನಡ ಕಿರುತೆರೆಯ ಧಾರವಾಹಿಗಳಲ್ಲಿ ಗಟ್ಟಿಮೇಳ ಧಾರಾವಾಹಿ ಕೂಡ ಒಂದಾಗಿದೆ. ಇನ್ನು ಇದು ಪ್ರತಿ ವಾರದ ಟಿ ಆರ್ ಪಿ ರೇಟಿಂಗ್ ನಲ್ಲಿ ಕೂಡ ಒಳ್ಳೆಯ ಸ್ಥಾನವನ್ನು ಪಡೆಯುತ್ತಿದೆ. ಇನ್ನು ಈ ಧಾರಾವಾಹಿಯಲ್ಲಿ ಸಾಕಷ್ಟು ಪಾತ್ರಗಳು ಜನರಿಗೆ ಇಷ್ಟವಾಗಿವೆ. ಅಂತಹ ಪಾತ್ರಗಳಲ್ಲಿ ಅಂಜಲಿ ಪಾತ್ರ ಕೂಡ ಒಂದು.

ಇನ್ನು ಈ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಂಜಲಿ ಇದೀಗ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇನ್ನು ಸಾಹಿತ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶರಣ್ಯ ಶೆಟ್ಟಿ ಅವರು ಬಿಬಿಎಂ ಪದವಿಯಲ್ಲಿ ಓದುತ್ತಿದ್ದಾರೆ. ಧ್ರುವ ಪಾತ್ರದಲ್ಲಿ ನಟಿಸುತ್ತಿರುವ ರಂಜನ್ ಅವರು ಪದವಿ ಪಡೆದುಕೊಂಡಿದ್ದಾರೆ. ಆದ್ಯ ಪಾತ್ರದಲ್ಲಿ ಜನರ ಮೆಚ್ಚುಗೆ ಪಡೆದುಕೊಂಡಿರುವ ಅನ್ವಿತಾ ಸಾಗರ್ ಅವರು ಬಿಕಾಂ ವಿಭಾಗದಲ್ಲಿ ಪದವಿ ಪಡೆದುಕೊಂಡಿದ್ದಾರೆ.

ಅದೇ ರೀತಿ ಗಟ್ಟಿಮೇಳ ಧಾರವಾಹಿಯ ವಿಕ್ರಾಂತ್ ಪಾತ್ರದಲ್ಲಿ ಅಭಿನಯಿಸಿರುವ ಅಭಿಷೇಕ್ ದಾಸ್ ಅವರು ಕೂಡ ಪದವೀಧರರಾಗಿದ್ದಾರೆ. ಆರತಿ ಪಾತ್ರ ಮಾಡುತ್ತಿರುವ ಅಶ್ವಿನಿ ಅವರು ಫ್ಯಾಶನ್ ಡಿಸೈನಿಂಗ್ ಕೋರ್ಸ್ ಮಾಡಿಕೊಂಡಿದ್ದಾರೆ. ಇನ್ನು ಆದಿತ್ಯ ಪಾತ್ರದಲ್ಲಿ ನಟಿಸುತ್ತಿರುವ ಪರಿಮಳ ಆಚಾರ್ ಅವರು ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಅದೇ ರೀತಿ ಪರಿಮಳ ಪಾತ್ರದಲ್ಲಿ ಅಭಿನಯಿಸಿರುವ ಕನ್ನಡದ ಹಿರಿಯ ನಟ ನರಸಿಂಹರಾಜು ಅವರ ಪುತ್ರಿ ಸುಧಾ ನರಸಿಂಹರಾಜು ಅವರು ದ್ವಿತೀಯ ಪಿಯುಸಿ ಓದುತ್ತಿದ್ದಾರೆ.

ಅದೇ ರೀತಿ ನಾಯಕ ನಟ ವೆದಾಂತ್ ವಸಿಷ್ಟ ಪಾತ್ರದಲ್ಲಿ ಅಭಿನಯಿಸಿರುವ ರಕ್ಷ ಅವರು ಕೂಡ ಪದವೀಧರರಾಗಿದ್ದಾರೆ. ಇನ್ನು ಅಕ್ಷರ ಜೊತೆಯಾಗಿ ನಾಯಕನಟಿ ಅಮೂಲ್ಯ ಪಾತ್ರದಲ್ಲಿ ಪ್ರೇಕ್ಷಕರ ಮನಗೆದ್ದಿರುವ ನಟಿ ನಿಶಾ ರವಿಕೃಷ್ಣನ್ ಅವರು ಬಿಕಾಂ ಪದವೀಧರೆ ಆಗಿದ್ದಾರೆ. ನೋಡಿದ್ರಲ್ಲ ಸ್ನೇಹಿತರೆ ಗಟ್ಟಿಮೇಳ ಧಾರವಾಹಿಯ ಪ್ರತಿಯೊಬ್ಬರು ಕೂಡ ಈ ರೀತಿಯ ವಿದ್ಯಾರ್ಹತೆ ಹೊಂದಿದ್ದು ಇವರಲ್ಲಿ ನಿಮಗೆ ಯಾರು ತುಂಬಾ ಇಷ್ಟ ಎಂಬುದನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Comments are closed.