ಬಿಗ್ ಬಾಸ್ ಎಂಟು ಸೀಸನ್ ಗಳಲ್ಲೇ ನಡೆಯದ ಘಟನೆ, ನಿನ್ನೆಯ ಏಪಿಸೋಡ್ ನಲ್ಲಿ ನಡೆಯಿತೇ, ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ನ ಇಷ್ಟು ದಿನದ ಸೀಸನ್ ಗಳಲ್ಲಿ ಇದೇ ಮೊದಲು ಅನಿಸುತ್ತಿದೆ. ಬಿಗ್ ಬಾಸ್ ನ ಎಲ್ಲಾ ಸೀಸನ್ ಸ್ಪರ್ಧಿಗಳು ಪರಸ್ಪರ ಎಷ್ಟೇ ಕಚ್ಚಾಡಿಕೊಂಡರೂ, ನಿರೂಪಕ ಸುದೀಪ್ ಮುಂದೆ ಸುಮ್ಮನಾಗಿಬಿಡುತ್ತಿದ್ದರು. ಸುದೀಪ್ ಮಾತಿಗೆ ಎಂದು ಎದುರು ಮಾತನಾಡುತ್ತಿರಲಿಲ್ಲ. ಆದರೇ ಬಿಗ್ ಬಾಸ್ ನ ಎಂಟು ಸೀಸನ್ ಗಳ ಸ್ಪರ್ಧಿಗಳು ಬಿಗ್ ಬಾಸ್ ನ ಈ ಎಂಟು ಸೀಸನ್ ಗಳಲ್ಲಿ ಇದೇ ಮೊದಲ ಭಾರಿಗೆ ಸ್ಪರ್ಧಿಯೊಬ್ಬರು,

ನಿರೂಪಕ ಕಿಚ್ಚ ಸುದೀಪ್ ಮೇಲೆ ಬಹಿರಂಗವಾಗಿ ಆರೋಪಗಳ ಸುರಿಮಳೆ ಸುರಿಸಿದ್ದಾರೆ. ಸುದೀಪ್ ರದ್ದೇ ತಪ್ಪು ಎಂಬ ರೀತಿಯ ಮಾತನ್ನ ವಾರದ ಕತೆ ಕಿಚ್ಚ ಸುದೀಪನ ಜೊತೆ ಎಂದು ಶನಿವಾರ ನಡೆದ ಏಪಿಸೋಡ್ ನಲ್ಲಿ ನಡೆದಿದೆ. ಕಳೆದ ವಾರ ಸ್ಪರ್ಧಿ ಪ್ರಿಯಾಂಕಾ ತಿಮ್ಮೇಶ್ ಮನೆಯಿಂದ ಏಲಿಮಿನೇಟ್ ಆದ ನಂತರ , ಬಿಗ್ ಬಾಸ್ ನೀಡಿದ ವಿಶೇಷ ಅಧಿಕಾರದ ಅನ್ವಯ ಚಕ್ರವರ್ತಿ ಚಂದ್ರಚೂಡ್ ರವರನ್ನ ಮುಂದಿನ ವಾರ ಮನೆಯಿಂದ ಹೊರಹೋಗುವ ಸ್ಪರ್ದಿಯಾಗಿ ನೇರವಾಗಿ ನಾಮಿನೇಟ್ ಮಾಡಿದ್ದರು.

ಆದರೇ ಇದರಿಂದ ಕೆರಳಿದ ಚಕ್ರವರ್ತಿ ಚಂದ್ರಚೂಡ್ ಮಧ್ಯದ ಕೈ ಬೆರಳು ತೋರುವ ಮೂಲಕ ಅಸಭ್ಯವಾಗಿ ವರ್ತಿಸಿದ್ದರು. ಈ ವಾರ ನಡೆದ ಶನಿವಾರದ ಏಪಿಸೋಡ್ ನಲ್ಲಿ ವಾರದ ಕತೆ ಕಿಚ್ಚನ ಜೊತೆ ಶುರುವಾದ ಕೆಲವೇ ನಿಮಿಷಗಳಲ್ಲಿ ಕಿಚ್ಚ ಸುದೀಪ್ ಈ ವಿಷಯ ಪ್ರಸ್ತಾಪಿಸಿದರು. ಅದಲ್ಲದೇ ಚಕ್ರವರ್ತಿ ಚಂದ್ರಚೂಡ್ ಮಾಡಿದ ತಪ್ಪುಗಳನ್ನು ಸವಿಸ್ತಾರವಾಗಿ ವಿವರಿಸಿದರು.

ಸಮಾಜ ನಿಮ್ಮನ್ನು ನೋಡುವ ದೃಷ್ಠಿಯೇ ಬೇರೆಯಾಗಿರುತ್ತದೆ ಹಾಗಾಗಿ ನಿಮ್ಮ ವರ್ತನೆಗಳಲ್ಲಿ ಬಹಳ ಜಾಗರೂರಕರಾಗಿರಬೇಕು ಎಂದು ತಿಳಿಸಿದರು.  ಆದರೇ ಇದಕ್ಕೆ ಅಸಮಾಧಾನಗೊಂಡ ಚಕ್ರವರ್ತಿ ಚಂದ್ರಚೂಡ್ ಕಿಚ್ಚ ಸುದೀಪ್ ಮೇಲೆ ಆರೋಪಗಳ ಸುರಿಮಳೆಗಳನ್ನ ನೇರವಾಗಿ ಸುರಿಸಿದರು. ನೀವು ನನ್ನನ್ನ ಸ್ತ್ರೀ ನಿಂದಕ ,ಸ್ತ್ರೀ ಪೀಡಕ ಎಂಬುದಾಗಿ ಪ್ರತಿ ವಾರ ಬಿಂಬಿಸುತ್ತಿದ್ದಿರಿ. ಪ್ರತಿ ವಾರದ ಕತೆ ಕಿಚ್ಚನ ಜೊತೆಯ ಏಪಿಸೋಡುಗಳಲ್ಲಿ ನನಗಾಗಿಯೇ ಕನಿಷ್ಠ ಪಕ್ಷ 15 ರಿಂದ 20 ನಿಮಿಷಗಳನ್ನು ನನಗಾಗಿಯೇ ಬಳಸಿಕೊಳ್ಳುತ್ತಿರಿ.

ನನನ್ನು ಬಿಟ್ಟು ಉಳಿದೆಲ್ಲಾ ಸ್ಪರ್ಧಿಗಳು ಏನು ಹಿಮಾಲಯದಿಂದ ಬಂದವರಾ..? ಅವರೆಲ್ಲಾ ಏನು ಸಾಧುಗಳಾ..? ನನ್ನ ಮೇಲೆ ಮಾತ್ರ ಏಕೆ ಈ ರೀತಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಕೊಂಚ ವಿಚಲಿತರಾದಂತೆ ಕಂಡು ಬಂದ ಕಿಚ್ಚ ಸುದೀಪ್ , ಚಕ್ರವರ್ತಿಯವರನ್ನ ಸಮಾಧಾನ ಪಡಿಸಿದ್ದಾರೆ. ನೀವು ಏನು ಮಾಡಿದ್ದಿರೋ ಅದನ್ನಷ್ಟೇ ನಾನು ಮಾತನಾಡಿದ್ದೆನೆ ಹೊರತು, ನಿಮ್ಮ ತಪ್ಪುಗಳಿಗೆ ತುಪ್ಪ ಹಚ್ಚಿಕೊಂಡು ಮಾತನಾಡಿಲ್ಲ, ಅದಲ್ಲದೇ ನಿಮ್ಮ ಪಾಂಡಿತ್ಯ ಹಾಗೂ ವಿದ್ವತ್ತನ್ನು ನಾನು ಬಹಳಷ್ಟು ಮೆಚ್ಚಿಕೊಂಡಿದ್ದೆನೆ.

ಬಹುಷಃ ಈ ಎಂಟು ಸೀಸನ್ ಗಳಲ್ಲಿ ನಾನು ಇಷ್ಟೊಂದು ಬುದ್ದಿವಂತ ಕಂಟೆಸ್ಟೆಂಟ್ ನ್ನ ಎಂದು ಸಹ ಹೇಳಿದ್ದೇನೆ. ನೀವು ತಪ್ಪನ್ನೇ ಮಾಡಬೇಡಿ, ಆಗ ನಾನು ಏನನ್ನೂ ಹೇಳುವುದಿಲ್ಲ ಎಂದು ಸಹ ಹೇಳಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಸೀಸನ್ 8 ರ ಗ್ರಾಂಡ್ ಫಿನಾಲೆಗೆ ಇನ್ನು ಹದಿನಾಲ್ಕು ದಿನಗಳಷ್ಟೇ ಬಾಕಿ ಉಳಿದಿದ್ದು, ಫಿನಾಲೆಗೆ ಹೋಗುವ ಆ ಐದು ಸ್ಪರ್ಧಿಗಳು ಯಾರು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ನಿಮ್ಮ ನೆಚ್ಚಿನ ಆ ಐದು ಸ್ಪರ್ಧಿಗಳು ಯಾರಾಗಬೇಕು.ಎಂಬುದನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.