ಗ್ರಾಹಕರನ್ನು ಸೆಳೆಯುವಂಥ ನೂತನ ಪ್ಲಾನ್ ಬಿಡುಗಡೆ ಮಾಡಿದ ಬಿ ಎಸ್ ಎನ್ ಎಲ್; ಉಳಿದ ಟೆಲಿಕಾಂ ಕಂಪನಿಗೆ ಟಕ್ಕರ್ ಕೊಡತ್ತಾ ಬಿ ಎಸ್ ಎನ್ ಎಲ್.

ನಮಸ್ಕಾರ ಸ್ನೇಹಿತರೇ, ಸರ್ಕಾರಿ ಒಡೆತನದಲ್ಲಿರುವ ಬಿ ಎಸ್ ಎನ್ ಎಲ್, ಹೆಚ್ಚಾಗಿ ಗ್ರಾಹಕರಿಗೆ ಬೇಕಾದ ಸೇವೆಯನ್ನು ಒದಗಿಸುವಲ್ಲಿ ಎಡವುತ್ತಿರುವ ಕಾರಣ, ಬಿ ಎಸ್ ಎಲ್ ಎಲ್ ಗ್ರಾಹಕರು ಬೇರೆ ಟೆಲಿಕಾಂ ಸರ್ವೀಸ್ ಗಳ ಮೊರೆ ಹೋಗುತ್ತಿದ್ದರು. ಹೀಗಾಗಿ ಬಿ ಎಸ್ ಎನ್ ಎಲ್ ಇತ್ತೀಚಿಗೆ ಹೊಸ ಹೊಸ ಪ್ಲಾನ್ ಗಳನ್ನು ಬಿಡುಗಡೆ ಮಾಡುವುದರ ಮೂಲಕ ಗ್ರಾಹಕರರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ಹಾಗಾದರೆ ಬನ್ನಿ ಬಿಎಸ್ ಎನ್ ಎಲ್ ಘೋಷಿಸಿರುವ ಹೊಸ ಯೋಜನೆಗಳ ಬಗ್ಗೆ ತಿಳಿಯೋಣ.

ಹೌದು ಬಿ ಎಸ್ ಎನ್ ಎಲ್ ನಾಲ್ಕು ಹೊಸ ಯೋಜನೆಗಳನ್ನು ರೂಪಿಸಿದೆ ಅವುಗಳಲ್ಲಿ ಮೊದಲನೆಯದು 184ರೂ ಯೋಜನೆ. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ, 1GB ದೈನಂದಿನ ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಸೌಲಭ್ಯವನ್ನು ಒಳಗೊಂಡಿದೆ. ಇದರ ಜೊತೆಗೆ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಸಹ ಒಳಗೊಂಡಿದೆ. ಇನ್ನು ನಿಗದಿತ ಡೇಟಾ ಮುಗಿದ ಬಳಿಕ ಇಂಟರ್ನೆಟ್ ವೇಗವು 80 Kbps ಗೆ ಇಳಿಯಲಿದೆ.

ಇನ್ನು 185ರೂಪಾಯಿಗಳ ಪ್ಲಾನ್ ಇದರಲ್ಲಿಯೂ 28 ದಿನಗಳ ವ್ಯಾಲಿಡಿಟಿ, 1GB ದೈನಂದಿನ ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಜೊತೆಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯವಿದೆ. ಇದರ ಜೊತೆಗೆ ಗ್ರಾಹಕರು ಪ್ರೋಗ್ರೆಸ್ಸಿವ್ ವೆಬ್ ಆಪ್ ನಲ್ಲಿ ಸವಾಲುಗಳ ಅರೆನಾ ಮೊಬೈಲ್ ಗೇಮಿಂಗ್ ಸೇವೆಯನ್ನು M/S ಆನ್‌ಮೊಬೈಲ್ ಗ್ಲೋಬಲ್ ಲಿಮಿಟೆಡ್ ಮತ್ತು ಬಿಎಸ್‌ಎನ್‌ಎಲ್‌ ಟ್ಯೂನ್ಸ್‌ನಿಂದ ಪಡೆಯಬಹುದು.

ಮುಂದಿನದು 186 ರೂ. ಗಳ ಪ್ಲಾನ್. ಇದೂ ಕೂಡ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು 1GB ದೈನಂದಿನ ಡೇಟಾ ಹಾಗೂ 100 ಎಸ್‌ಎಮ್‌ಎಸ್‌ ಹಾಗೆಯೇ ಅನಿಯಮಿತ ವಾಯಿಸ್ ಕರೆಯನ್ನು ಒಳಗೊಂಡಿದೆ. ದೈನಂದಿನ ಡಾಟಾ ಮುಗಿದರೆ ಇಂಟರ್ನೆಟ್ ವೇಗವು 80 Kbps ಗೆ ಇಳಿಯಲಿದೆ. ಇದರ ಜೊತೆಗೆ ಗ್ರಾಹಕರು ನಿಗದಿತ ಡೇಟಾ ಮುಗಿದ ಬಳಿಕ ಇಂಟರ್ನೆಟ್ ವೇಗವು 80 Kbps ಇಳಿಯಲಿದೆ. ಹಾಗೆಯೇ ಹಾರ್ಡಿ ಗೇಮ್ಸ್ ಮತ್ತು ಬಿ ಎಸ್ ಎನ್ ಎಲ್ ಟ್ಯೂನ್‌ಗಳ ಪ್ರಯೋಜನವನ್ನೂ ಕೂಡ ಪಡೆಯಲಿದ್ದಾರೆ.

bsnl | ಗ್ರಾಹಕರನ್ನು ಸೆಳೆಯುವಂಥ ನೂತನ ಪ್ಲಾನ್ ಬಿಡುಗಡೆ ಮಾಡಿದ ಬಿ ಎಸ್ ಎನ್ ಎಲ್; ಉಳಿದ ಟೆಲಿಕಾಂ ಕಂಪನಿಗೆ ಟಕ್ಕರ್ ಕೊಡತ್ತಾ ಬಿ ಎಸ್ ಎನ್ ಎಲ್.
ಗ್ರಾಹಕರನ್ನು ಸೆಳೆಯುವಂಥ ನೂತನ ಪ್ಲಾನ್ ಬಿಡುಗಡೆ ಮಾಡಿದ ಬಿ ಎಸ್ ಎನ್ ಎಲ್; ಉಳಿದ ಟೆಲಿಕಾಂ ಕಂಪನಿಗೆ ಟಕ್ಕರ್ ಕೊಡತ್ತಾ ಬಿ ಎಸ್ ಎನ್ ಎಲ್. 2

ಕೊನೆಯದಾಗಿ ನಾಲ್ಕನೆಯ ಪ್ಲಾನ್ 347ರೂಪಾಯಿಗಳದ್ದು. ಈ ಯೋಜನೆಯು 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಜೊತೆಗೆ 2GB ದೈನಂದಿನ ಡೇಟಾ, 100 ಎಸ್‌ಎಮ್‌ಎಸ್‌ ಸೌಲಭ್ಯ ಹಾಗೂ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಒದಗಿಸುತ್ತದೆ. ಇನ್ನು ಉಳಿದ ಎಲ್ಲಾ ಪ್ಲಾನ್ ಗಳಂತೆ ನಿಗದಿತ ಡೇಟಾ ಮುಗಿದ ಬಳಿಕ ಇಂಟರ್ನೆಟ್ ವೇಗವು 80 Kbps ಇಳಿಕೆಯಾಗುತ್ತದೆ. ಹಾಗೆಯೇ ಗ್ರಾಹಕರಿಗೆ M/S ಆನ್‌ಮೊಬೈಲ್ ಗ್ಲೋಬಲ್ ಲಿಮಿಟೆಡ್ ಮತ್ತು ಬಿಎಸ್‌ಎನ್‌ಎಲ್‌ ಟ್ಯೂನ್ಸ್‌ನಿಂದ ಪ್ರೋಗ್ರೆಸ್ಸಿವ್ ವೆಬ್ ಆಪ್ ನಲ್ಲಿ ಸವಾಲುಗಳ ಅರೆನಾ ಮೊಬೈಲ್ ಗೇಮಿಂಗ್ ಸೇವೆಯನ್ನು ಪಡೆಯಬಹುದು. ಇವಿಷ್ಟು ಬಿ ಎಸ್ ಎನ್ ಎಲ್ ನ ಹೊಸ ಪ್ಲಾನ್ ಗಳಾಗಿದ್ದು ಗ್ರಾಹಕರಿಗೆ ಹೆಚ್ಚಿನ ಪ್ರಯೋಜನ ನೀಡಲಿದೆ.

Comments are closed.