ದರ್ಬೆಯ ಧಾರ್ಮಿಕ ಹಾಗೂ ಆರ್ಯುವೇದ ಉಪಯೋಗ ಏನು..?

ದರ್ಬೆಯನ್ನು ನಲ, ರಂದ್ರಿ, ಪುಷ್ಪ, ಮೃತ್ಯ, ದಮನ, ನರ್ತಕ, ಅಗ್ನಿಗರ್ಭಮ್, ದರ್ಭಗಡ್ಡಿ, ದರ್ಭೆಪಿಲ್ಲಿ, ಕುಸೈ ಎಂಬ ಹೆಸರುಗಳಿಂದ ಕರೆಯುತ್ತಾರೆ. ನದಿಪಾತ್ರ ಭೂಮಿಯಲ್ಲಿ, ಹುಲ್ಲುಗಾವಲು ಅರಣ್ಯ, ಕೆರೆಕಟ್ಟೆ, ಕುಂಟೆಗಳಸುತ್ತ, ಹುತ್ತಗಳಮೇಲೆ ಬೆಳೆಯುವ ಒಂದು ರೀತಿಯ ಪವಿತ್ರವಾದ ಹುಲ್ಲು. ಕೆಲವು ಹಳೆಯ ಗ್ರಂಥಗಳಲ್ಲಿ 7 ರೀತಿಯ ಪ್ರಭೇಧಗಳಿವೆ ಎಂದು ಉಲ್ಲೇಖವಾಗಿದ್ದರೆ, ಮತ್ತೆ ಕೆಲವು ಗ್ರಂಥಗಳಲ್ಲಿ 9 ಪ್ರಭೇದಗಳಿವೆ ಎಂದು ಉಲ್ಲೇಖವಿದೆ. ಅವುಗಳಲ್ಲಿ ಉದ್ದವಾಗಿ ಬೆಳೆಯುವ “ವಿಶಾಮಿತ್ರ” ಹಾಗು ಗಿಡ್ಡದಾಗಿ ಬೆಳೆಯುವ “ವಶಿಷ್ಠ” ತುಂಬಾ ಶ್ರೇಷ್ಠವಾದದ್ದು ಎಂದು ಉಲ್ಲೇಖಿಸಿದ್ದಾರೆ.

ನವಗ್ರಹಗಳಲ್ಲಿ ಒಂದಾದ ಕೇತುಗ್ರಹವನ್ನು ಪ್ರತಿನಿಧಿಸುವ ದರ್ಭೆಹುಲ್ಲು, ಹೋಮ,ಯಜ್ಞ, ಯಾಗಾದಿಗಳನ್ನು ಆಚರಿಸುವಾಗ ಇರಲೇಬೇಕು. ಹೋಮ, ಯಜ್ಞ, ಯಾಗಾದಿಗಳನ್ನು ಮಾಡಲು ಸಿದ್ಧವಾಗುವಾಗ, ಯಜ್ಞದೀಕ್ಷೆ ಪಡೆಯಲು ಉಂಗುರದ ಬೆರಳಿಗೆ ದರ್ಭೆಯನ್ನು ಉಂಗುರದಂತೆ ಧರಿಸುತ್ತಾರೆ. ಇದಕ್ಕೆ “ಪವಿತ್ರ” ಎಂದು ಕರೆಯುತ್ತಾರೆ.

ದರ್ಭೆಯನ್ನು ಶುಭ ಅಶುಭ ಕಾರ್ಯಗಳೆರಡಕ್ಕೂ ಪುರಾತನ ಕಾಲದಿಂದಲೂ ಹಿಂದೂ ಸಂಪ್ರಾಯದಲ್ಲಿ ಉಪಯೋಗಿಸುತ್ತಾ ಬಂದಿದ್ದಾರೆ. ಇದನ್ನ ತುಂಬಾ ಪರಮಪವಿತ್ರವೆಂದು ಭಾವಿಸುತ್ತಾರೆ. ರಾಮಾಯಣ ಮಹಾಭಾರತ ಕಾಲದಲ್ಲೂ, ದರ್ಭೆಯ ಪ್ರಸ್ತಾಪ ಇರುವುದು ಪುರಾಣ ಗ್ರಂಥಗಳಲ್ಲಿ ಉಲ್ಲೇಖ ಇರುವುದನ್ನು ಕಾಣಬಹುದು. ಋಷಿಮುನಿಗಳು ಆಶ್ರಮ ನಿರ್ಮಿಸಲು ದರ್ಭೆ ಹುಲ್ಲನ್ನು, ಜಪತಪ ಮಾಡಲು ದರ್ಭಾಸನಗಳನ್ನು ಉಪಯೋಗಿಸುತ್ತಿದ್ದರು.

ದರ್ಭೆಯನ್ನು ಬೆರಳಿಗೆ ಧಾರಣೆಮಾಡುವುದರಿಂದ ಶರೀರದ ಎಲ್ಲಾ ಭಾಗಗಳಿಗೂ ಒಂದು ವಿಧವಾದ ಆಯಾಸ್ಕಾಂತ ಶಕ್ತಿಯು ಪಸರಿಸುವುದು. ಇದರಿಂದ ಮನೋವಿಕಲ್ಪಗಳು ದೂರವಾಗಿ ಜಿತೇಂದ್ರಯತ್ವ ಲಭಿಸುವುದು. ಮನಸ್ಸಿನ ಮೇಲೆ ಹತೋಟಿ ಸಾಧಿಸಿದ ನಂತರ ಲೋಕಕಲ್ಯಾಣಾರ್ಥ ಕಾರ್ಯಗಳಾದ, ಹೋಮ, ಯಜ್ಞ, ಯಾಗಾದಿಗಳನ್ನು ಮಾಡುವಾಗ ಇರಬೇಕಾದದ್ದು ಅತ್ಯಗತ್ಯವೆ. “ಪವಿತ್ರ” ಜ್ಞಾನವಾಹಿನಿ, ಮತ್ತು ಕ್ರಿಯವಾಹಿನಿ, ನರಗಳ ಮೂಲಕ ಮಹಾಮಸ್ತಿಷ್ಕ, ಹಾಗೂ ಅನು ಮಸ್ತಿಷ್ಕಗಳಿಗೆ ನೇರವಾದ ಸಂಪರ್ಕವನ್ನು ಉಂಟುಮಾಡುವುದರಿಂದ ಇಂತಹ ಅದ್ಭುತ ಪರಿಣಾಮ ಉಂಟಾಗುವುದು.

ದರ್ಭೆಯ ಸ್ಪರ್ಶ ಮಾತ್ರದಿಂದಲೇ ಎಲ್ಲಾ ವಿದಧ ಚರ್ಮ ವ್ಯಾಧಿಗಳು ದೂರವಾಗುವುವು. ಅಷ್ಟೇ ಅಲ್ಲದೇ ಮೂತ್ರದಲ್ಲಿ ಉರಿ, ರ’ಕ್ತ ದೋಷ, ರ’ಕ್ತ ಪಿತ್ತ, ಕಫ ಮುಂತಾದ ರೋಗಗಳು ದೂರವಾಗುವುವು. ಶರೀರ ಶುದ್ಧಿಯನ್ನು ಸಹ ಉಂಟು ಮಾಡಲು ಶಕ್ತವಾಗಿದೆ. ದರ್ಭೆಯೊಡನೆ ಸಂಪರ್ಕಕ್ಕೆ ಬಂದ ನೀರನ್ನು ಕುಡಿಯುವುದರಿಂದ ಮುಖದಲ್ಲಿ ವಿಶಿಷ್ಟವಾದ ತೇಜಸ್ಸು ಓಜಸ್ಸು ಮೂಡುವುದು, ರ’ಕ್ತದ ಏರೊತ್ತಡ ಉಂಟಾಗುವುದಿಲ್ಲ. ಆದ್ದರಿಂದಲೇ ತಾಮ್ರದ ಹೋಮ ಪಾತ್ರೆಯ ಮೇಲೆ ದರ್ಭೆಯನ್ನು ಇಡುತ್ತಾರೆ.

ದರ್ಭೆಯು ದಗ್ದವಾಗಿ ಬರುವ ಹೋಮ ಧೂಮವು ಕಣ್ಣಿನ ಕಾಂತಿಯನ್ನು ವೃದ್ಧಿಸಿ, ಕಣ್ಣಿನ ವ್ಯಾಧಿಗಳನ್ನು ದೂರಮಾಡಬಲ್ಲದು.
ಸಾಮಾನ್ಯವಾಗಿ ಗ್ರಹಣದ ಸಮಯದಲ್ಲಿ, ನೀರು, ಆಹಾರ ವಸ್ತುಗಳನ್ನು ಭದ್ರ ಪಡಿಸಿರುವ, ಅಂಡೆ, ಕೊಳಗ, ಡಬ್ಬಿಗಳ ಮೇಲೆ ದರ್ಭೆಯನ್ನು ಇಡುವರು. ಗ್ರಹಣ ಸಂಭವಿಸುವ ಪ್ರದೇಶದ ಸುತ್ತಲೂ ಒಂದು ವಿಧವಾದ “ವಿಷವರ್ತುಲ”ವು ರೂಪಗೊಳ್ಳುತ್ತದೆ. ದರ್ಭೆ ಇಡುವಕಡೆ ಒಂದು ಮೀಟರ್ ಪ್ರದೇಶದಷ್ಟು ದೂರ ವಿಷವರ್ತುಲವನ್ನು ತಡೆದು, ನೀರು, ಆಹಾರ ಪಾದರ್ಥಗಳ ಮೇಲುಂಟಾಗುವ ದುಷ್ಪರಿಣಾಮವನ್ನು ಭೇದಿಸಿ ರಕ್ಷಿಸುವ ಶಕ್ತಿ ದರ್ಭೆಯಲ್ಲಿದೆ.

ದರ್ಭೆ ಬೇರಿನ ಕಷಾಯ ಸೇವನೆಯಿಂದ ದೇಹದಲ್ಲಿನ ಉಷ್ಣತೆ ಕಡಿಮೆಯಾಗಿ, ದೇಹ ತಂಪಾಗುತ್ತೆ, ಮೂತ್ರ ಸಮಸ್ಯೆಗಳಾದ, ಮೂತ್ರಬಂಧ, ಮೂತ್ರದಲ್ಲಿ ಉ’ರಿ, ಮೂತ್ರದಲ್ಲಿ ರ’ಕ್ತ ಬೀಳುವುದು ದೂರವಾಗುತ್ತೆ. ಅತಿಸಾರ ಭೇದಿ ನಿವಾರಣೆಯಾಗುತ್ತೆ.
ಬೇರನ್ನು ಜಜ್ಜಿ ಹಸುವಿನ ಹಾಲಲ್ಲಿ ಹಾಕಿ ಕುದಿಸಿ, ಕಲ್ಲುಸಕ್ಕರೆ ಬೆರಸಿ ಕುಡಿಯುತ್ತಾ ಬಂದರೆ, ಬಾಣಂತಿಯರಲ್ಲಿ ಎದೆ ಹಾಲು ಹೆಚ್ಚೆಚ್ಚು ಉತ್ಪತ್ತಿಯಾಗುತ್ತೆ. ಗರಿಯ ರಸ ಅಥವಾ ಕಷಾಯ ಸೇವಿಸುತ್ತಾ ಬಂದರೆ ರ’ಕ್ತದಲ್ಲಿನ ಸಕ್ಕರೆ ಪ್ರಮಾಣ ಹತೋಟಿಗೆ ಬರುತ್ತೆ. ಮೂಲವ್ಯಾಧಿ ವಾಸಿಯಾಗುತ್ತೆ.  ದಿನವು ದರ್ಭಾಸನದಲ್ಲಿ ಕುಳಿತುಕೊಳ್ಳುವ ಅಭ್ಯಾಸ ಮಾಡಿಕೊಂಡರೆ ದೇಹವು ತಂಪಾಗುತ್ತೆ. ಮೆದಳು ಚುರುಕಾಗುತ್ತೆ. ಜ್ಞಾನಶಕ್ತಿ, ಜ್ಞಾಪಕಶಕ್ತಿ ಹೆಚ್ಚುತ್ತೆ.

ಬೇರಿನ ಕಷಾಯ ನಿಯಮಿತವಾಗಿ ಸೇವಿಸುತ್ತಾ ಬಂದರೆ, ಸ್ತ್ರೀಯರಲ್ಲಿನ ಅತಿ ಋತುಸ್ರಾವ ಸಮಸ್ಯೆ ನಿವಾರಣೆಯಾಗುತ್ತೆ.
ಎಳ್ಳೆಣ್ಣೆಯಲ್ಲಿ ದರ್ಭೆಯನ್ನು ಹಾಕಿ ಚೆನ್ನಾಗಿ ಕುದಿಸಿ, ಚರ್ಮ ರೋಗಗಳಾದ, ಬಿಳಿಮಚ್ಚೆ(ತೊನ್ನು) ಕುಷ್ಠದ ಮೇಲೆ ಲೇಪಿಸುತ್ತಾರೆ. ದದ್ದು, ನವೆ, ಕಜ್ಜಿ, ಹುಳುಕಡ್ಡಿ ಸಹ ನಿವಾರಣೆಯಾಗುತ್ತೆ.

ಚೇಳು, ವಿಷಜಂತುಗಳು ಕಚ್ಚಿದಾಗ, ಬೇರಿನ ರಸಕ್ಕೆ ಕಾಳುಮೆಣಸಿನ ಚೂರ್ಣ ಬೆರಸಿ ಕುಡಿಸಿದರೆ, ವಿಷ ನಿವಾರಣೆಯಾಗುತ್ತೆ.
ದರ್ಭೆ ಬೇರನ್ನು ಜಜ್ಜಿ ರಸ ತೆಗೆದು, ಅಕ್ಕಿ ತೊಳೆದ ನೀರಲ್ಲಿ ಕಲಸಿ 3-4 ದಿನ ಕುಡಿದರೆ, ಸ್ತ್ರೀಯರಲ್ಲಿನ ಶ್ವೇತಪ್ರದರ, ರ’ಕ್ತಪ್ರದರ ವ್ಯಾಧಿಗಳು ಗುಣವಾಗುತ್ತೆ. ದೇಹದಲ್ಲಿ ಗಾಯದಿಂದ ರ’ಕ್ತಸ್ರಾವವಾಗುತ್ತಿದ್ದರೆ, ದರ್ಭೆ ಬೇರನ್ನು ಜಜ್ಜಿ ಗಾಯದ ಮೇಲಿಟ್ಟರೆ, ತಕ್ಷಣ ರ’ಕ್ತಸ್ರಾವ ನಿಂತು, ಗಾ’ಯ ಬೇಗನೆ ಗುಣವಾಗುತ್ತೆ.

ಬೇರನ್ನು ಜಜ್ಜಿ ರಸ ತೆಗೆದು, ಮಜ್ಜಿಗೆಯಲ್ಲಿ ಕಲಸಿ ಕುಡಿಯುತ್ತಾ ಬಂದು, ಬೇರಿನ ಗಂಧವನ್ನು ಲೇಪಿಸುತ್ತಾ ಬಂದರೆ ಮೂಲವ್ಯಾಧಿ, ರ’ಕ್ತ ಮೂಲವ್ಯಾಧಿ ನಿವಾರಣೆಯಾಗುತ್ತೆ. ಪುರಾತನ ಕಾಲದಿಂದಲೂ ದರ್ಭೆಗೆ ಅತ್ಯಂತ ಪ್ರಾಮುಖ್ಯತೆ ನೀಡಲಾಗಿದೆ, ಇದನ್ನ ವೈದಿಕ ಸಂಪ್ರದಾಯದಲ್ಲಿ ತುಂಬಾ ಪವಿತ್ರವಾಗಿ ಭಾವಿಸುತ್ತಾರೆ. ದೇವತಕಾರ್ಯ, ಮದುವೆ, ಉಪನಯನ ಮುಂತಾದ ಕಾರ್ಯಗಳಲ್ಲಿ ದರ್ಭೆಗೆ ವಿಶಿಷ್ಟ ಸ್ಥಾನಮಾನ ನೀಡಲಾಗಿದೆ. ಪಿತೃಕಾರ್ಯದಲ್ಲೂ ಸಹ ಉಪಯೋಗಿಸುತ್ತಾರೆ. ಮೊದಲೇ ಹೇಳಿದಂತೆ ದರ್ಭೆಗೆ ಶುಭ ಅಶುಭ ಕಾರ್ಯಗಳೆರಡರಲ್ಲೂ ಸ್ಥಾನ ನೀಡಲಾಗಿದೆ.

Comments are closed.