ಈ ದೇವಾಲಯದ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಶನಿದೋಷ ಪರಿಹಾರ ಆಗುತ್ತೆ. ಅದು ಯಾವುದು ಗೊತ್ತಾ..?

ನಮ್ಮ ರಾಜ್ಯದಲ್ಲಿ ಎಷ್ಟೆಲ್ಲಾ ಗಣೇಶನ ದೇವಾಲಯಗಳಿವೆ. ಪ್ರತಿಯೊಂದು ಗಣೇಶನ ದೇವಾಲಯಕ್ಕೂ ಅದರದ್ದೇ ಆದ ಇತಿಹಾಸ, ವಿಶೇಷತೆ ಇದೆ. ಇಂದು ನಾವು ಪುರಾಣ ಪ್ರಸಿದ್ಧ ಗಣೇಶನ ಬಗ್ಗೆ ತಿಳಿಸಲಿದ್ದೇವೆ. ಈ ಗಣೇಶನು ಪವಾಡವನ್ನು ಸೃಷ್ಠಿಸುತ್ತಾನೆ ಎನ್ನಲಾಗುತ್ತದೆ. ಬಹಳ ಕಾರಣೀಕವನ್ನು ಹೊಂದಿರುವ ಈ ದೇವಸ್ಥಾನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಎಲ್ಲಿದೆ ಈ ದೇವಸ್ಥಾನ?: ಕಮಂಡಲ ಗಣಪತಿ ದೇವಸ್ಥಾನವು ಚಿಕ್ಕಮಗಳೂರಿನ ಕೊಪ್ಪ ದಲ್ಲಿದೆ. ಕೊಪ್ಪ ಬಸ್ ‌ನಿಲ್ದಾಣದಿಂದ 4 ಕಿ.ಮಿ ದೂರದಲ್ಲಿದೆ. ಬೆಂಗಳೂರಿನಿಂದ ಕೊಪ್ಪಕ್ಕೆ 359ಕಿ.ಮೀ ಇದೆ.

ಪವಿತ್ರ ಕಮಂಡಲ ತೀರ್ಥ: ಇಲ್ಲಿನ ತೀರ್ಥವನ್ನು ಕಮಂಡಲ ತೀರ್ಥ ಎನ್ನಲಾಗುತ್ತದೆ. ಇದೇ ವರ್ಷವಿಡೀ ಹರಿಯುತ್ತಲೇ ಇರುತ್ತದೆ. ಈ ತೀರ್ಥವು ಕಮಲಾಕಾರದಲ್ಲಿ ಹರಿಯುತ್ತದೆ. ಈ ತೀರ್ಥದಲ್ಲಿ ಸ್ನಾನ ಮಾಡಿದರೆ ಶನಿ ದೋಷ ಪರಿಹಾರವಾಗುತ್ತದಂತೆ. ಇಲ್ಲಿನ ತೀರ್ಥ ತೆಗೆದುಕೊಂಡು ಮಕ್ಕಳಿಗೆ ಕುಡಿಸಿದರೆ ವಿದ್ಯಾಭ್ಯಾಸಕ್ಕೆ, ಜ್ಞಾಪಕಶಕ್ತಿಗೆ ಉತ್ತಮವಾಗುತ್ತದೆ. ಓದುವುದರಲ್ಲಿ ಮುಂದಿರುತ್ತಾರಂತೆ.

ಇತಿಹಾಸ: ಶನಿದೇವನ ಕಾಟದಿಂದ ಪಾರಾಗಲು ಪಾರ್ವತಿ ದೇವಿಯು ಭೂಮಿಗಿಳಿದು ಬಂದ ಸ್ಥಳ ಇದಾಗಿದೆ. ತಪಸ್ಸು ಮಾಡಲು ಭೂಮಂಡಲಕ್ಕೆ ಬಂದ ಪಾರ್ವತಿ ಮೈಗವಧೆ ಎಂಬಲ್ಲಿ ತಪಸ್ಸು ಮಾಡುತ್ತಾಳೆ. ನಂತರ ಈ ದೇವಾಲಯದ ಸ್ಥಳಕ್ಕೆ ಬಂದು ಗಣೇಶನ ಪೂಜೆ ಮಾಡಲು ಸಿದ್ಧಳಾಗುತ್ತಾಳೆ. ಆದರೆ ನೀರಿರುವುದಿಲ್ಲ. ನೀರಿಗಾಗಿ ಬ್ರಹ್ಮದೇವನ ಬೇಡಿಕೊಂಡಾಗ ಬ್ರಹ್ಮ ದೇವ ಬಾಣ ಹೊಡೆದು ನೀರು ಸೃಷ್ಠಿಸಿದರು. ಇನ್ನು ಗಣೇಶನ ವಿಗ್ರಹ ಕುರಿತು ಹೇಳುವುದಾದರೇ ಇಲ್ಲಿನ ಗಣೇಶ ಬಹಳ ಅಪರೂಪದ ಗಣೇಶನ ವಿಗ್ರಹವಾಗಿದೆ. ಈ ವಿಗ್ರಹದ ವಿಶೇಷತೆ ಎಂದರೆ ಯೋಗ ಮುದ್ರೆಯಲ್ಲಿ ಕುಳಿತಿರುವುದು.

ಇಲ್ಲಿ ಮಳೆಗಾಲದಲ್ಲಿ ತೀರ್ಥದ ನೀರು ಗಣೇಶನ ಪಾದದ ವರೆಗೆ ಬರುತ್ತದಂತೆ. ಇಲ್ಲಿನ ಗಣೇಶನ ದರ್ಶನ ಪಡೆದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವುದು ಜನರ ನಂಬಿಕೆ.ಕಮಂಡಲ ಎನ್ನುವ ಹೆಸರು ಬರಲು ಕಾರಣವೇನು ಎಂಬುದನ್ನು ನೋಡುವುದಾದರೇ ಕಮಲದ ಆಕಾರದಲ್ಲಿ ಕುಂಡದಿಂದ ಬರುವ ತೀರ್ಥ ಹಾಗಾಗಿ ಈ ಗಣಪತಿಗೆ ಕಮಂಡಲ ಗಣಪತಿ ಎನ್ನುವ ಹೆಸರು ಬಂದಿದೆ. ಈ ಪುರಾಣ ಪ್ರಸಿದ್ಧ ಗಣೇಶನಿಗೆ ಹರಕೆ ಸಲ್ಲಿಸಿದ್ರೆ ಇಷ್ಟ ಈಡೇರುತ್ತದಂತೆ.

ಪೂಜಾ ಸಮಯ: ಬೆಳಗ್ಗೆ 7.30 ರಿಂದ 8.30 ರವರೆಗೆ ಪೂಜೆ ಅಭಿಷೇಕಪೂಜೆ ಇರುತ್ತದೆ. ಮಧ್ಯಾಹ್ನ 12 ಗಂಟೆಯ ನಂತರ ಯಾವುದೇ ಪೂಜೆಗೆ ಅವಕಾಶವಿರುವುದಿಲ್ಲ. ಹಾಗಾಗಿ ಕಮಂಡಲ ಗಣಪತಿ ದೇವಸ್ಥಾನದಲ್ಲಿ ಪೂಜೆ ಮಾಡಲಿಚ್ಚಿಸುವವರು ಬೆಳಗ್ಗಿನ ಸಮಯದಲ್ಲೇ ದೇವಸ್ಥಾನಕ್ಕೆ ಭೇಟಿ ನೀಡುವುದು ಒಳ್ಳೆಯದು.

Comments are closed.