ಯಪ್ಪಾ, ಕುದ್ದು ಡ್ರೀಮ್ ಗರ್ಲ್ ಹೇಮಾಮಾಲಿನಿಯ ಪ್ರೀತಿಯನ್ನು ತಿರಸ್ಕರಿಸಿದ್ದ ಕನ್ನಡದ ಖ್ಯಾತ ನಟ ಯಾರು ಗೊತ್ತೇ?

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಸುಂದರ ನಾಯಕಿಯರಿಗೆ ಹೆಸರಾದ ಚಿತ್ರರಂಗ. ಕನ್ನಡ ಚಿತ್ರರಂಗಕ್ಕೆ ಯಾವಾಗೆಲ್ಲ ನಾಯಕಿಯರ ಕೊರತೆ ಉಂಟಾಗುತ್ತಿತ್ತೋ ಆವಾಗೆಲ್ಲ ನಿರ್ಮಾಪಕರು ಹೇಳುತ್ತಿದ್ದದ್ದು ಹೀರೋಯಿನ್ ನ್ನ ಬಾಂಬೆಯಿಂದ ತರಿಸೋಣ ಎಂದು. ಬಾಲಿವುಡ್ ಆ ಮಟ್ಟಿಗೆ ನಾಯಕಿಯರ ವಿಚಾರದಲ್ಲಿ ಪರಿಣಾಮ ಬೀರಿತ್ತು. ಬಾಂಬೆಯ ರಂಗಾದ ಜಗತ್ತಲ್ಲಿ ನಾಯಕಿಯರು ಮಿಂಚಿನ ಮೋಡಿ ಮಾಡಿದ್ದರು. ಅದರಲ್ಲೂ ಆಗಿನ ಕಾಲದಲ್ಲಿ ನಟಿ ಹೇಮಮಾಲಿನಿ ಯವರ ಹವಾ ಬಾಲಿವುಡ್ ಅಂಗಳದಲ್ಲಿ ಆಗಸದ ಎತ್ತರಕ್ಕೆ ಏರಿದ್ದ ಕಾಲವದು.

ನಟನೆಯಲ್ಲಿ,ಸೌಂದರ್ಯದಲ್ಲಿ ಹಾಗೂ ಗ್ಲಾಮರ್ ನಲ್ಲಿ ಎಲ್ಲದರಲ್ಲೂ ಸೈ ಅನ್ನಿಸಿಕೊಂಡು ಬಾಲಿವುಡ್ ಚಿತ್ರ ಜಗತ್ತಿನ ಟಾಪ್ ನಟಿಯಾಗಿ ಮೆರೆಯುತ್ತಿದ್ದ ಕಾಲವದು. ಬಾಲಿವುಡ್ ನಟರ ಪ್ರತಿಯೊಂದು ಫಿಲ್ಮ್ ನಲ್ಲಿ ನಿರ್ಮಾಪಕರು ಹೇಮಮಾಲಿನಿ ಇರಲೇಬೇಕು ಎಂದು ಪಟ್ಟು ಹಿಡಿಯುತ್ತಿದ್ದ ಕಾಲವದು. ಎಲ್ಲದಕ್ಕಿಂತ ಹೆಚ್ಚಾಗಿ ಎಂತೆಂಥ ಸ್ಟಾರ್ ಹೀರೋ ಗಳು, ಪ್ರೊಡ್ಯುಸರ್ ಗಳು ಹೇಮಮಾಲಿನಿಯವರನ್ನು ವರಿಸಲು ಕ್ಯೂನಲ್ಲಿ ಕಾಯುತ್ತಿದ್ದ ಕಾಲಘಟ್ಟವದು. ಆದರೆ ಈ ಬಾಲಿವುಡ್ ಬೆಡಗಿಯ ಮನಗೆದ್ದವರು, ಹೇಮಮಾಲಿನಿ ಮನಸೋತದ್ದು ಮಾತ್ರ ಕನ್ನಡದ ಕುವರನಿಗೆ. ಯಾರದು ಎಂದು ತಿಳಿಯೋಣ ಬನ್ನಿ.

ಹೌದು ನಟಿ ಹೇಮಮಾಲಿನಿ ಮನಸೋತಿದ್ದ ಹಾಗೂ ಮದುವೆಯಾಗ ಬೇಕೆಂದು ಅಂದು ಕೊಂಡಿದ್ದು ಮಾತ್ರ ಕನ್ನಡದ ಖ್ಯಾತ ನಟ, ನಿರ್ದೇಶಕ, ಸಾಹಿತಿ ಗಿರೀಶ್ ಕಾರ್ನಾಡ್ ರವರನ್ನ. ಕನ್ನಡಕ್ಕೆ ಭಾರತದಲ್ಲಿ ಸಾಹಿತ್ಯ ಲೋಕಕ್ಕೆ ಸಿಗುವ ಅತ್ಯುನ್ನತ ಪ್ರಶಸ್ತಿ ಜ್ಞಾನಪೀಠ ಪ್ರಶಸ್ತಿಯನ್ನು ಗೆದ್ದು ಕೊಟ್ಟವರು. ಗಿರೀಶ್ ಕಾರ್ನಾಡ್ ರವರ ಆರಂಭದ ದಿನಗಳವು. ಅವರು ಪುಣೆಯ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ಇದ್ದಾಗ ಹೇಮಮಾಲಿನಿಯವರ ತಾಯಿ ಜಯ ಚಕ್ರವರ್ತಿ ಗಿರೀಶ್ ಕಾರ್ನಾಡ್ ರವರನ್ನು ನೋಡಿ ಮೆಚ್ಚಿ ತಮ್ಮ ಮಗಳಾದ ಹೇಮಮಾಲಿನಿಗೆ ಇವರೇ ತಕ್ಕನಾದ ವರ, ಇವರೇ ತಮ್ಮ ಅಳಿಯನಾಗಬೇಕು ಎಂದು ನಿಶ್ಚಯಿಸಿಕೊಂಡಿದ್ದರು.

ಅತ್ತ ಹೇಮಮಾಲಿನಿಯವರಿಗೂ ಕೂಡ ಗಿರೀಶ್ ಕಾರ್ನಾಡ್ ರವರ ಮೇಲೆ ಒಲವು ಮೂಡಿತ್ತು. ಇದಕ್ಕಾಗಿಯೇ ಜಯ ಚಕ್ರವರ್ತಿ ತಾವು ನಿರ್ಮಾಣ ಮಾಡುತ್ತಿದ್ದ ಚಿತ್ರವೊಂದರಲ್ಲಿ ಹೇಮಮಾಲಿನಿಯವರ ಜೊತೆ ಜೋಡಿಯಾಗಿ ನಟಿಸುವಂತೆ ಗಿರೀಶ್ ಕಾರ್ನಾಡ್ ರವರನ್ನು ಒತ್ತಾಯಿಸಿದರು. ಗಿರೀಶ್ ಕಾರ್ನಾಡ್ ರವರು ಈ ಚಿತ್ರದಲ್ಲಿ ನಟಿಸಲು ಒಪ್ಪಿ. ಚಿತ್ರೀಕರಣ ಸಂದರ್ಭದಲ್ಲಿ ಹೇಮಮಾಲಿನಿಯವರು ಸುಮ್ಮನೆ ಮಾತಿನ ಭರದಲ್ಲಿ ” ನಮ್ಮಿಬ್ಬರ ನಡುವೆ ಪ್ರೀತಿಯಿದೆ, ನಾವುದುವೆಯಾಗುತ್ತಿದ್ದೇವೆ ಎಂಬ ಮಾತುಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿದೆಯಲ್ಲ.

ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಗಿರೀಶ್ ಕಾರ್ನಾಡ್ ಛೆ ಛೆ ಮಾಧ್ಯಮದವರು ಘನೇನೋ ಬರೆಯಬಹುದು ಆದರೆ ನಾನು ಮದುವೆಯ ಆಗೋ ಹುಡುಗಿ ಈಗಾಗಲೇ ತೀರ್ಮಾನಿಸಿದ್ದೇನೆ ಆಕೆಯ ಹೆಸರು ಸರಸ್ವತಿ ಎಂದು ಅವರು ಈಗ ಅಮೇರಿಕಾ ದಲ್ಲಿ ಇದ್ದಾರೆಂದು ಅದೇ ಕ್ಷಣ ಹೇಮಮಾಲಿನಿಯವರ ಪ್ರೀತಿಯ ನಿವೇದನೆಯನ್ನು ನಯವಾಗಿಯೇ ತಿರಸ್ಕರಿಸುತ್ತಾರೆ ಗಿರೀಶ್ ಕಾರ್ನಾಡ್. ನಂತರದ ದಿನಗಳಲ್ಲಿ ಗಿರೀಶ್ ಕಾರ್ನಾಡ್ ಸರಸ್ವತಿಯವರನ್ನು ಮದುವೆ ಕೂಡ ಆಗುತ್ತಾರೆ.

ಗಿರೀಶ್ ಕಾರ್ನಾಡ್ ರವರು ಕನ್ನಡ ಮಣ್ಣು ಕಂಡ ಅತ್ಯಂತ ಅಮೂಲ್ಯ ರತ್ನ. ಅತ್ತ ಚಿತ್ರಜಗತ್ತಿನಲ್ಲಿ ಅದ್ಭುತ ಸಿನಿಮಾಗಳನ್ನು ನಿರ್ದೇಶಿಸಿ, ನಟಿಸಿದ ಮಹಾನ್ ಕಲಾ ತಪಸ್ವಿ. ಇತ್ತ ಕನ್ನಡ ಸಾರಸ್ವತ ಲೋಕದಲ್ಲಿ ಅಮೂಲ್ಯ ಪುಸ್ತಕಗಳನ್ನು ಬರೆದು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತ ಗೊಳಿಸಿದವರಲ್ಲಿ ಒಬ್ಬ ಟಾಪ್ ಸಾಹಿತಿ ಕೂಡ ಒಬ್ಬರು. ಅವರ ಪೊಲಿಟಿಕಲ್ ವಿಚಾರಧಾರೆ ಸ್ವಲ್ಪ ತರ್ಕಬದ್ಧವಾದರೂ ಮತ್ತೆಲ್ಲ ವಿಚಾರದಲ್ಲಿ ಅವರು ಕ್ರಿಸ್ಟಲ್ ಕ್ಲಿಯರ್ ಆಗಿದ್ದರು. ಅವರ ವಿಚಾರಧಾರೆಗಳು ಅಗಾಧವಾಗಿದ್ದವು.

ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ಅಂಗಳದಲ್ಲಿ ಕೂಡ ಇವರು ಬಹುಬೇಡಿಕೆಯ ಪೋಷಕನಟರಾಗಿ ಮಿಂಚಿದ್ದರು. ಅವರು ಅಸ್ತಂಗತರಾಗುವ ಮುಂಚೆಯವರೆಗೂ ಸಲ್ಮಾನ್ ಖಾನ್ ನಟನೆಯ ದೊಡ್ಡ ಯಶಸ್ಸನ್ನು ಪಡೆದಿದ್ದ ಚಿತ್ರ ಟೈಗರ್ ಜಿಂದಾ ಹೈ ಚಿತ್ರದಲ್ಲಿ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಅವರ ಅಗಲಿಕೆ ಕೇವಲ ಕನ್ನಡ ಸಾಹಿತ್ಯ ಹಾಗೂ ಚಿತ್ರಲೋಕಕ್ಕೆ ಮಾತ್ರವಲ್ಲದೇ ಇಡೀ ದೇಶದ ಚಿತ್ರಲೋಕಕ್ಕೆ ಭರಿಸಲಾರದ ನಷ್ಟವನ್ನುಂಟು ಮಾಡಿದೆ. ಗಿರೀಶ್ ಕಾರ್ನಾಡ್ ರವರ ಬಗ್ಗೆ ನಿಮಗಿರುವ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Comments are closed.