ಹೋಟೆಲ್ ಗೆ ಹೋಗಲು ಆಗದೆ ಇದ್ದಾರೆ ಏನಂತೆ. ಮನೆಯಲ್ಲಿಯೇ ಕರಾವಳಿ ಚಿಕನ್ ಗ್ರೇವಿ ಮಾಡಿ, ಎಲ್ಲರೂ ಜಾಸ್ತಿ ತಿಂತಾರೆ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಕರಾವಳಿಯಲಿ ನಾನ್ ವೆಜ್ ಪ್ರಿಯರು ಜಾಸ್ತಿ. ಇಲ್ಲಿ ಮೀನು, ಮೊಟ್ಟೆ, ಚಿಕನ್ ಊಟವೇ ಸ್ವೇಷಲ್. ಅದರಲ್ಲೂ ಚಿಕನ್ ನಲ್ಲಿ ಮಾಡುವ ಕೆಲವು ಖಾಧ್ಯಗಳು ತುಂಬಾನೇ ರುಚಿಕಟ್ಟಾಗಿರುತ್ತೆ. ಹೋಟೆಲ್ ಸ್ಟೈಲ್ ನಲ್ಲಿ ಮನೆಯಲ್ಲಿಯೇ ಮಾಡಬಹುದಾದ ಚಿಕನ್ ಗ್ರೇವಿ ಕೂಡ ಸಿಕ್ಕಾಪಟ್ಟೆ ರುಚಿಕರವಾಗಿರತ್ತೆ. ಇನ್ಯಾಕೆ ತಡ ಬಾಯಲ್ಲಿ ನೀರೂರಿಸುವ ಈ ಗ್ರೇವಿಯನ್ನು ಮನೆಯಲ್ಲಿ ಹೇಗೇ ಮಾಡೋದು ಬನ್ನಿ ನೋಡೋಣ.

ಚಿಕನ್ ಗ್ರೇವಿ ಮಾಡಲು ಬೇಕಾಗಿರುವ ಸಾಮಗ್ರಿಗಳು: ಚಿಕನ್ ಸ್ವಚ್ಛಗೊಳಿಸಿದ್ದು, ಕೊಬ್ಬರಿ ತುರಿ ಸ್ವಲ್ಪ, ಬ್ಯಾಡಗಿ ಮೆಣಸು -10, ಹುರಿಯಲು ಲವಂಗ, ದಾಲ್ಚಿನ್ನಿ, ಚಕ್ಕೆ, ಗೋಡಂಬಿ ಸ್ವಲ್ಪ, ಬಿಳಿ ಎಳ್ಳು ಅರ್ಧ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಅಡುಗೆ ಎಣ್ಣೆ, ಹಸಿ ಮೆಣಸಿನಕಾಯಿ 4-5, ಶುಂಠಿ ಒಂದು ಇಂಚು, ಬೆಳ್ಳುಳ್ಳಿ 10-15 ಎಸಳು, ಕರಿಬೇವು, ಹೆಚ್ಚಿದ ಈರುಳ್ಳಿ, ಟೊಮೆಟೋ, ಅರಿಶಿಣ ಪುಡಿ, ಖಾರದ ಪುಡಿ, ದನಿಯಾ ಪುಡಿ, ಗರಂ ಮಸಾಲಾ ಪುಡಿ ತಲಾ ಒಂದು ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ.

ಚಿಕನ್ ಗ್ರೇವಿ ಮಾಡುವ ವಿಧಾನ: ಮೊದಲು ಒಂದು ಮಿಕ್ಸಿ ಜಾರಿಗೆ ಕೊಬ್ಬರಿ ತುರಿ, ಬ್ಯಾಡಗಿ ಮೆಣಸು, ಲವಂಗ, ದಾಲ್ಚಿನ್ನಿ, ಗೋಡಂಬಿ, ಬಿಳಿ ಎಳ್ಳು, ಹಾಗೂ ಉಪ್ಪು ಮತ್ತು ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಒಂದು ಪಾತ್ರೆಗೆ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ. ಅದು ಬಿಸಿಯಾದ ನಂತರ ಹೆಚ್ಚಿದ ಹಸಿ ಮೆಣಸಿನಕಾಯಿ, ಹೆಚ್ಚಿದ ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಹಾಕಿ ಹುರಿಯಿರಿ. ಇದಕ್ಕೆ ಕರಿಬೇವನ್ನು ಹಾಕಿ. ನಂತರ ಹೆಚ್ಚಿದ ಈರುಳ್ಳಿ ಹಾಗೂ ಟೊಮ್ಯಾಟೋ ಹಾಕಿ ಚೆನ್ನಾಗಿ ಫ್ರೈ ಮಾಡಿ. ಇದಕ್ಕೆ ಉಪ್ಪನ್ನು ಸೇರಿಸಿ. ನಂತರ ಚಿಕನ್ ಹಾಕಿ ಚೆನ್ನಾಗಿ ಫ್ರೈ ಮಾಡಿ. ಚಿಕನ್ ಬೆಂದ ನಂತರ ಅರಿಶಿಣ ಪುಡಿ, ಅಚ್ಚ ಖಾರದ ಪುಡಿ, ದನಿಯಾ ಪುಡಿ ಹಾಗೂ, ಗರಂ ಮಸಾಲಾ ಪುಡಿಯನ್ನು ತಲಾ ಒಂದು ಚಮಚ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ರುಬ್ಬಿಟ್ಟುಕೊಂಡ ಮಿಶ್ರಣವನ್ನು ಕುದಿಯುತ್ತಿರುವ ಚಿಕನ್ ಗೆ ಹಾಕಿ ಚೆನ್ನಾಗಿ ಕುದಿಸಿ, ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಸ್ವಾಧಿಷ್ಟವಾದ ಕರಾವಳಿ ಸ್ಪೆಷಲ್ ಚಿಕನ್ ಗ್ರೇವಿ ರೆಡಿ.

Comments are closed.