ಜೂನಿಯರ್ ಚಿರು ಸರ್ಜಾ ರವರಿಗೆ ವಿಶೇಷ ಉಡುಗೊರೆಯೊಂದನ್ನು ಕಳುಹಿಸಿದ ರಾಧಿಕಾ ಪಂಡಿತ್, ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಚಿತ್ರರಂಗದಲ್ಲಿ ನಟ ನಟಿಯರು ಪರಸ್ಪರ ಸ್ನೇಹಿತರು ಹಾಗೂ ಸಿನಿಮಾದಿಂದ ಹೊರಗೆ ಕೂಡ ಉತ್ತಮ ಸಂಬಂಧವನ್ನು ಹೊಂದಿದ್ದಾರೆ ಎಂಬುದು ನಿಮಗೆಲ್ಲಾ ಗೊತ್ತಾಗಿದೆ ಹಾಗೂ ಹಲವಾರು ನಟ-ನಟಿಯರನ್ನು ಈ ತರಹದ ಸಂಬಂಧಗಳನ್ನು ಹೊಂದಿರುವುದು ನೀವು ಕೂಡ ನೋಡಿದ್ದೀರಿ. ಇನ್ನು ಇನ್ನು ನಾವು ಮಾತನಾಡುತ್ತಿರುವುದು ರಾಧಿಕಾ ಪಂಡಿತ್ ಹಾಗೂ ಮೇಘನರಾಜ ರವರ ಕುರಿತಂತೆ. ಹೌದು ಸ್ನೇಹಿತರೆ ಸಿನಿಮಾದಿಂದ ಹೊರಗೆ ಕೂಡ ಇವರಿಬ್ಬರು ಉತ್ತಮ ಸಂಬಂಧವನ್ನು ಹೊಂದಿದ್ದಾರೆ.

ಮೇಘನರಾಜ್ ರವರು ಚಿರು ಸರ್ಜಾ ಅವರನ್ನು ಕಳೆದುಕೊಂಡ ಸಂದರ್ಭದಲ್ಲಿ ಕೂಡ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಮೇಘನರಾಜ ರವರಿಗೆ ಕರೆಮಾಡಿ ಸಮಾಧಾನವನ್ನು ತುಂಬುತ್ತಿದ್ದರು. ಹೀಗಾಗಿ ಈ ಎರಡು ಕುಟುಂಬಗಳ ನಡುವೆ ಸಾಕಷ್ಟು ಸ್ನೇಹಸಂಬಂಧ ಮೊದಲಿನಿಂದಲೂ ಕೂಡ ಇತ್ತು. ಮೇಘನಾ ರಾಜ್ ರವರು ರಾಕಿಂಗ್ ಸ್ಟಾರ್ ಯಶ್ ರವರೊಂದಿಗೆ ರಾಜಾಹುಲಿ ಚಿತ್ರದಲ್ಲಿ ನಟಿಸಿದ್ದರು. ಇನ್ನು ರಾಧಿಕಾ ಪಂಡಿತ್ ಅವರು ಧ್ರುವ ಸರ್ಜಾ ರವರೊಂದಿಗೆ ಕೂಡ ನಟಿಸಿದ್ದರು. ಹೀಗಾಗಿ ಎರಡು ಕುಟುಂಬಗಳ ನಡುವೆ ಸಿನಿಮಾದಲ್ಲಿ ಕೂಡ ಹಾಗೂ ಸಿನಿಮಾದ ಹೊರಗೆ ಕೂಡ ಉತ್ತಮ ಸಂಬಂಧ ಮೊದಲಿನಿಂದಲೂ ಮುಂದುವರಿದುಕೊಂಡು ಬಂದಿದೆ.

ಇನ್ನು ಜೂನಿಯರ್ ಚಿರು ಸರ್ಜಾ ರವರ ನಾಮಕರಣ ನಡೆದಂತ ಹಿನ್ನೆಲೆಯಲ್ಲಿ ಮೇಘನಾ ರಾಜ್ ರವರ ಮನೆಗೆ ಬಂದಿದ್ದ ರಾಧಿಕಾ ಪಂಡಿತ್ ರವರು ಹಲವಾರು ಸಮಯಗಳ ಕಾಲ ಅವರ ಮನೆಯಲ್ಲೇ ಇದ್ದು ಮೇಘನರಾಜ ರವರೊಂದಿಗೆ ಸಾಕಷ್ಟು ವಿಷಯಗಳ ಕುರಿತಂತೆ ಮಾತನಾಡಿದ್ದಾರೆ. ಹಾಗೂ ಜೂನಿಯರ್ ಚಿರು ಸರ್ಜಾ ರವರಿಗೆ ಅತ್ಯಂತ ಬೆಲೆಬಾಳುವ ಬಣ್ಣದ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಇನ್ನು ಚಿರುಸರ್ಜ ರವರ ಕುರಿತಂತೆ ಕೂಡ ಮಾತನಾಡಿದ್ದಾರೆ ಈ ವೇಳೆ ಮೇಘನಾರಾಜ್ ಅವರು ಕೂಡ ಭಾವುಕರಾಗಿದ್ದಾರೆ.

Comments are closed.