ಬಹುಶಃ ಕನ್ನಡದ ಆ ನಟ ಸಿಲ್ಕ್ ಸ್ಮಿತಾ ರವರ ಕೊನೆ ಕರೆಯನ್ನು ರಿಸೀವ್ ಮಾಡಿ ಸಮಾಧಾನ ಮಾಡಿದ್ದರೇ ಸಿಲ್ಕ್ ಸ್ಮಿತಾ ಬದುಕಿರುತ್ತಿದ್ದರೇನೋ, ಏನಾಗಿತ್ತು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ಮಾದಕ ನಟಿಯಾಗಿ ಮಿಂಚಿ ಮೆರೆದಿದ್ದ ಸಿಲ್ಕ್ ಸ್ಮಿತಾ ರವರ ಕುರಿತಂತೆ ಯಾರಿಗೆ ಗೊತ್ತಿಲ್ಲ. ಇಂದು ಅವರ ಜೀವನ ಚರಿತ್ರೆ ಕುರಿತಂತೆ ಒಂದು ಕಿರು ನೋಟವನ್ನು ಬೀರುವ ಪ್ರಯತ್ನ ಮಾಡುತ್ತಿದ್ದೇವೆ ಕೊನೆಯವರೆಗೂ ತಪ್ಪದೇ ಓದಿ. ಹೌದು ಸ್ನೇಹಿತರೆ ಸಿಲ್ಕ್ ಸ್ಮಿತಾ ರವರು ಸಾಕಷ್ಟು ಬಡ ಕುಟುಂಬದಲ್ಲಿ ಜನಿಸಿದವರು. ಇನ್ನು ಸ್ಮಿತಾ ರವರ ಮೂಲ ಹೆಸರು ವಿಜಯಲಕ್ಷ್ಮಿ ಎಂದು. ನೋಡಲು ಕಪ್ಪಗಿದ್ದರೂ ಸಹ ಮೈಕೈ ತುಂಬಿಕೊಂಡು ಆಕರ್ಷಕವಾಗಿದ್ದರು. ಇನ್ನು ಇವರನ್ನು ಬಾಲ್ಯವಿವಾಹ ಮಾಡಿಕೊಡಲಾಗಿತ್ತು.

ಆದರೆ ಗಂಡ ಹಾಗೂ ಗಂಡನ ಮನೆಯವರ ಉಪಟಳವನ್ನು ತಾಳಲಾರದೆ ಚೆನ್ನೈಗೆ ಓಡಿಬಂದರು. ಅಲ್ಲಿ ಖ್ಯಾತ ನಿರ್ದೇಶಕ ವಿನು ಚಕ್ರವರ್ತಿಯವರ ವಲಯಕ್ಕೆ ಸೇರಿಕೊಂಡರು. ವಿನು ಚಕ್ರವರ್ತಿ ಹಾಗೂ ಅವರ ಪತ್ನಿ ಸ್ಮಿತಾ ಅವರಿಗೆ ನಟನೆ ಶಿಕ್ಷಣವನ್ನು ನೀಡಿದರು. ನಂತರ ಮೊದಲ ಬಾರಿಗೆ ಸಿಲ್ಕ್ ಸ್ಮಿತಾ ರವರು ತಮಿಳು ಚಿತ್ರರಂಗದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ ಹಾಗೂ ಆ ಚಿತ್ರದಲ್ಲಿ ಅವರಿಗೆ ಸಿಲ್ಕ್ ಸ್ಮಿತಾ ಎಂಬ ಹೆಸರು ಕೂಡ ಬರುತ್ತದೆ. ಇದಾದನಂತರ ತಮಿಳು ತೆಲುಗು ಕನ್ನಡ ಹಿಂದಿ ಮಲೆಯಾಳಂ ಹೀಗೆ ಎಲ್ಲಾ ಭಾಷೆಗಳನ್ನು ಕೂಡ ಬಹುಬೇಡಿಕೆ ನಟಿಯಾಗಿ ಕಾಣಿಸಿಕೊಂಡರು. 1993 ರಲ್ಲಿ ಅಳಿಮಯ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕೂಡ ಪಾದರ್ಪಣೆ ಮಾಡಿದ್ದರು.

ಇದಾದ ನಂತರ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡರು. ಅದರಲ್ಲೂ ರವಿಚಂದ್ರನ್ ನಟನೆಯ ಹಳ್ಳಿಮೇಷ್ಟ್ರು ಚಿತ್ರದ ಪಾತ್ರ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ಇನ್ನು 1995 ರ ನಂತರ ಸಿಲ್ಕ್ ಸ್ಮಿತಾ ರವರ ಜನಪ್ರಿಯತೆ ಭಾರತೀಯ ಚಿತ್ರರಂಗದಲ್ಲಿ ಕಡಿಮೆಯಾಗತೊಡಗಿತ್ತು. ಹೀಗಾಗಿ ಅವರಿಗೆ ಬರುತ್ತಿದ್ದಂತಹ ಚಿತ್ರಗಳು ಕೂಡ ಆಮೆಗತಿಯಲ್ಲಿ ಬರುತ್ತಿದ್ದವು. ಬಹುಶಃ ಇದೇ ವಿಚಾರವಾಗಿ ಕೊನೆಯ ಬಾರಿಗೆ ಕನ್ನಡ ಚಿತ್ರರಂಗದ ಖ್ಯಾತ ನಟರಾಗಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಕರೆ ಮಾಡಿದ್ದರು. ಆದರೆ ಚಿತ್ರೀಕರಣದಲ್ಲಿ ಬ್ಯುಸಿ ಇದ್ದ ಕಾರಣ ರವಿಚಂದ್ರನ್ ರವರು ಕರೆಯನ್ನು ಪ್ರತಿಕ್ರಿಯಿಸಲಾಗಲಿಲ್ಲ. ಅದರ ಮರುಕ್ಷಣವೇ ಚೆನ್ನೈನ ಅಪಾರ್ಟ್ಮೆಂಟ್ ಒಂದರಲ್ಲಿ ಸಿಲ್ಕ್ ಸ್ಮಿತಾ ರವರು ತಮ್ಮ ಜೀವವನ್ನು ಕಳೆದು ಕೊಂಡಿದ್ದರು. ಚಿತ್ರರಂಗದಲ್ಲಿ ಕೊನೆಗೆ ಕಂಡಂತಹ ತಿರಸ್ಕಾರ ಮನೋಭಾವವೇ ಅವರ ಈ ಪರಿಸ್ಥಿತಿಗೆ ಕಾರಣವಾಯಿತು ಎಂದು ಹೇಳಬಹುದು.

Comments are closed.