ತಮಿಳಿನ ಶ್ರೀ ದೇವಿ ಎಂದೇ ಖ್ಯಾತಿ ಪಡೆದುಕೊಂಡಿದ್ದ ಈ ಟಾಪ್ ನಟಿ ಜೇವನಕ್ಕಾಗಿ ಏನು ಮಾಡುತ್ತಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಮ್ಮ ಜೀವನದಲ್ಲಿ ಸಾಕಷ್ಟು ರೀತಿಯ ಏರುಪೇರುಗಳನ್ನು ಕಾಣುತ್ತೇವೆ. ಹೌದು ನಮ್ಮ ಜೀವನದಲ್ಲಿ ಒಂದು ದಿನ ಸಂತೋಷವೆಂದರೆ ಮತ್ತೊಂದು ದಿನ ಬಂದೇ ಬರುತ್ತದೆ. ಇನ್ನು ಸಂತೋಷ ಬಂದಾಗ ಅದನ್ನು ಬಾಚಿಕೊಂಡು ದುಃಖ ಬಂದಾಗ ದೂರ ತಳ್ಳುವುದು ಎಷ್ಟು ಉಚಿತ ನೀವೇ ಹೇಳಿ. ಎರಡನ್ನು ಕೂಡ ಸಮಾನವಾಗಿ ತೆಗೆದುಕೊಂಡಾಗ ಅದಕ್ಕೆ ಒಂದು ಅರ್ಥ ಬರುವುದು. ಇನ್ನು ಸಾಕಷ್ಟು ಜನರು ತಾವು ದೊಡ್ಡವರಾದ ಮೇಲೆ ತಮ್ಮ ಹೆತ್ತ ತಂದೆ ತಾಯಿಗಳನ್ನು ಬೀದಿ ಮೇಲೆ ಬಿಟ್ಟುಬಿಡುವ ಅದೆಷ್ಟೋ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಆದರೆ ಇಂತಹ ಪರಿಸ್ಥಿತಿ ಸ್ಟಾರ್ ನಟಿ ಒಬ್ಬರಿಗೆ ಬಂದಿದೆ. ಹೌದು ಸುಮಾರು 500 ಚಿತ್ರಗಳಲ್ಲಿ ಅಭಿನಯಿಸಿದ್ದ ನಟಿ ಇದೀಗ ಬೀಚ್ ಪಕ್ಕದಲ್ಲಿ ಕರವಸ್ತ್ರ ಮಾರುತ್ತಾ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಹಾಗಾದರೆ ಆ ನಟಿ ಯಾರು? ಆಕೆಗೆ ಈ ಪರಿಸ್ಥಿತಿ ಯಾಕೆ ಬಂದಿದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಬನ್ನಿ.

ಒಂದಾನೊಂದು ಕಾಲದಲ್ಲಿ ನಟರೊಂದಿಗೆ ಅಭಿನಯಿಸಿದ್ದ ನಟಿ ಇದೀಗ ಒಣ ಬಿಸಿಲಿನಲ್ಲಿ ಕರವಸ್ತ್ರ ಮಾರುತ್ತ ತಮ್ಮ ದಿನನಿತ್ಯದ ಬದುಕನ್ನು ಸಾಗಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಅವರ ಇಂದಿನ ಪರಿಸ್ಥಿತಿ ನೋಡಿ ಸಾಕಷ್ಟು ಪ್ರೇಕ್ಷಕರು ಅವರನ್ನು ಭೇಟಿಯಾಗಿ ಕಣ್ಣೀರು ಹಾಕಿದ್ದಾರೆ. ಹೌದು ಆ ನಟಿ ಮತ್ಯಾರು ಅಲ್ಲ ತಮಿಳು ನಟಿ ರಂಗಮ್ಮಲ್. ಇವರು ಸುಮಾರು 500ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರಿಗೆ ಇದೀಗ 93 ವರ್ಷ ವಯಸ್ಸು. ತಮಿಳುನಾಡಿನ ವಡಪ್ಪಣ್ಣಳ್ ಎಂಬ ಸ್ಲಂ ಏರಿಯಾದಲ್ಲಿ ವಾಸಿಸುತ್ತಿದ್ದಾರೆ. ಇನ್ನೂ ಅಲ್ಲೇ ಬೀಚ್ ಬದಿಯಲ್ಲಿ ಕರವಸ್ತ್ರ ಮಾಡುತ್ತಾ ಬಂದ ಹಣದಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ.

 

ಒಂದಾನೊಂದು ಕಾಲದಲ್ಲಿ ಬಹು ಬೇಡಿಕೆಯ ಪೋಷಕ ನಟಿಯಾಗಿದ್ದ ಈ ಅಜ್ಜಿಯ ಇಂದಿನ ಪರಿಸ್ಥಿತಿ ನೋಡಿದರೆ ನಿಜಕ್ಕೂ ಕರುಳು ಕಿತ್ತು ಬರುತ್ತದೆ. ಸಿನಿಮಾರಂಗದಲ್ಲಿ ಬರುಬರುತ್ತಾ ಅವಕಾಶಗಳು ಕಡಿಮೆಯಾದಂತೆ ಅವರ ಜೀವನದಲ್ಲಿ ಕೂಡ ಅದೋಗತಿಗೆ ಹೊರಟಿತ್ತು. ಇನ್ನು ಚೆನ್ನಾಗಿ ಸಂಪಾದನೆ ಮಾಡುತ್ತಿದ್ದ ಕಾಲದಲ್ಲಿ ತನ್ನ ಸಂಪಾದನೆಯನ್ನು ಮಕ್ಕಳಿಗಾಗಿ ಮೀಸಲಿಟ್ಟವರು ಮಕ್ಕಳಿಂದಲೇ ಮನೆ ಹೊರಗೆ ಬಂದಿದ್ದಾರೆ. ಇನ್ನು ಈ ಅಜ್ಜಿಯ ಸಂಪಾದನೆಯನ್ನು ಇಟ್ಟುಕೊಂಡ ಮಕ್ಕಳು ಎಂದು ಅಜ್ಜಿಯನ್ನು ಮನೆ ಬಿಟ್ಟು ಹೊರ ಹಾಕಿದ್ದಾರೆ. ತಮಿಳುನಾಡಿನ ಮರಿನಾ ಬೀಚ್ ನಲ್ಲಿ ಕರವಸ್ತ್ರ ಹಾಗೂ ಇತರೆ ಸಾಮಾನುಗಳನ್ನು ಮಾರುತ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದ್ದಾರೆ.

ಇನ್ನು ತಮಿಳುನಾಡಿನ ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿದ ರಂಗಮ್ಮಲ್ ಅವರು ನಾನು ಎಂ.ಜಿ. ಆರ್ ಕಾಲದಿಂದಲೂ ಕೂಡ ಅಭಿನಯಿಸುತ್ತಿದ್ದೇನೆ. ನಾನು ಸಂಪಾದನೆ ಮಾಡಿದ ಹಣವನ್ನೆಲ್ಲ ನನ್ನ ಮಕ್ಕಳ ಏಳಿಗೆಗೆ ಕೊಟ್ಟೆ. ಆದರೆ ಇದೀಗ ನನ್ನ ಮಕ್ಕಳು ನನ್ನನ್ನು ಮನೆ ಬಿಟ್ಟು ಹೊರಗೆ ಹಾಕಿದ್ದಾರೆ. ತನ್ನ ಹಸಿವನ್ನು ನೀಗಿಸಿಕೊಳ್ಳಲು ಬೀಚ್ ಕರವಸ್ತ್ರ ಮಾರುತ್ತಿದ್ದೇನೆ. ದಿನಕ್ಕೆ ಐವತ್ತರಿಂದ ನೂರು ರೂಪಾಯಿ ಸಂಪಾದನೆಯಾಗುತ್ತದೆ. ಇದರಲ್ಲಿ ನನಗೆ ಬಹಳ ಸಂತೋಷವಿದೆ ಎಂದು ಅವರು ಹೇಳುತ್ತಾರೆ. ಇನ್ನು ಇವರಿಗೆ 93 ವರ್ಷ ವಯಸ್ಸಾಗಿದ್ದರೂ ಕೂಡ ಯಾರ ಬಳಿಯೂ ಕೈಚಾಚದೆ ತಮ್ಮ ಹೊಟ್ಟೆಯನ್ನು ತಮ್ಮ ಕೈಯಾರೆ ದುಡಿದು ತುಂಬಿಕೊಳ್ಳುತ್ತಾರೆ. ನಿಜಕ್ಕೂ ಈ ಅಜ್ಜಿಯ ಸ್ವಾಭಿಮಾನದ ಜೀವನಕ್ಕೆ ನಮ್ಮದೊಂದು ಸಲಾಂ.

Comments are closed.