ಮೆಕ್ಯಾನಿಕ್ ಆಗಿದ್ದ ಅಜಿತ್ ರವರು ಇಂದು ಬಹುಬೇಡಿಕೆಯ ನಟನಾಗಿ ಬೆಳೆಯಲು ಹೇಗೆ ಸಾಧ್ಯವಾಯಿತು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಚಿತ್ರರಂಗದ ಬಗ್ಗೆ ಬಹುಶಃ ನಿಮಗೆ ಸ್ವಲ್ಪ ಮಟ್ಟಿಗೆ ಎಲ್ಲ ನಟರ ಬಗ್ಗೆ ತಿಳಿದಿರುತ್ತದೆ. ಕಷ್ಟದಿಂದ ಮೇಲೆದ್ದು ಬಂದ ನಟರ ಯಶಸ್ಸಿನ ಹಿಂದೆ ಅವರು ಪಟ್ಟಿರುವ ಶ್ರಮ ತಿಳಿದೇ ಇರುತ್ತದೆ. ಆದರೆ ಪರಭಾಷಾ ಚಿತ್ರರಂಗದಲ್ಲಿ ಇರೋ ಕೆಲವು ಸ್ಟಾರ್ ನಟರು ಇಂದು ಅವರವರ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ನಟರಾಗಿ ಭಾರತದಲ್ಲಿಯೇ ಅತ್ಯಂತ ದೊಡ್ಡ ಫ್ಯಾನ್ ಬೇಸ್ ಗೆ ಜವಾಬ್ದಾರ ರಾಗಿದ್ದಾರೆ. ಆದರೆ ಅವರಲ್ಲಿ ಕೂಡ ಕೆಲವರು ಕಷ್ಟಪಟ್ಟು ಈ ಸ್ಥಾನಕ್ಕೆ ಬಂದಿದ್ದಾರೆಂಬುದು ನೆನನಪಿರಲಿ. ಅಂತವರಲ್ಲಿ ಒಬ್ಬರ ಕುರಿತಂತೆ ಹಾಗೂ ಅವರು ಹೇಗೆ ಸ್ಟಾರ್ ನಟರಾಗಿ ರೂಪುಗೊಂಡರು ಎಂಬ ಬಗ್ಗೆ ತಿಳಿಸುತ್ತೇವೆ.

ತಮಿಳು ಚಿತ್ರರಂಗವನ್ನು ಈಗ ಅವಲೋಕಿಸುವುದಾದರೆ ನಮ್ಮ ಚಿತ್ರರಂಗದಲ್ಲಿ ಮಾಸ್ ಗೆ ಹೇಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಬ್ರಾಂಡೋ ಹಾಗೇ ತಮಿಳುನಾಡಿನ ಕಾಲಿವುಡ್ ಚಿತ್ರರಂಗದಲ್ಲಿ ಕೂಡ ಮಾಸ್ ಗೆ ಒಬ್ಬರು ಐಕಾನಿಕ್ ನಟ ಇದ್ದಾರೆ. ಹೌದು ಅಭಿಮಾನಿಗಳು ಪ್ರೀತಿಯಿಂದ ಇವರನ್ನು ತಲಾ ( ನಾಯಕ ) ಎಂದು ಕರೆಯುತ್ತಾರೆ. ನಿಮಗೆ ಈಗ ನಾವು ಯಾರ ಬಗ್ಗೆ ಹೇಳುತ್ತಿದ್ದೇವೆ ಗಂಬ ಸುಳಿವು ದೊರಕಿರಬಹುದು. ಹೌದು ನಾವು ಮಾತನಾಡುತ್ತಿರೋದು ತಲಾ ಖ್ಯಾತಿಯ ಅಜಿತ್ ಕುಮಾರ್ ರವರ ಬಗ್ಗೆ.

ಅಜಿತ್ ರವರು ಈಗ ಕಾಲಿವುಡ್ ನ ದೊಡ್ಡ ಹೆಸರಲ್ಲಿ ಒಬ್ಬರಾಗಿರಬಹುದು ಆದರೆ ಅವರೂ ಕೂಡ ಒಂದು ಕಾಲದಲ್ಲಿ ತುಂಬಾ ಕಷ್ಟ ಪಟ್ಟೇ ಈ ಚಿತ್ರರಂಗದಲ್ಲಿ ಬಲವಾಗಿ ನೆಲೆ ನಿಂತಿದ್ದು. ಒಂದು ಪ್ರಕಾರದಲ್ಲಿ ಹೇಳುವುದಾದರೆ ಅಜಿತ್ ರವರಿಗೂ ಚಿತ್ರರಂಗಕ್ಕೂ ಯಾವ ಸಂಬಂಧವೂ ಇರಲಿಲ್ಲ. ಹಾಗಾದರೆ ಅವರು ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ಹೇಗೆ ಎಂಬ ನಿಮ್ಮ ಪ್ರಶ್ನೆಗೆ ನಮ್ಮ ಬಳಿ ಉತ್ತರವಿದೆ ಬನ್ನಿ ಹೇಳ್ತೀವಿ. ಅಜಿತ್ ಕುಮಾರ್ ರವರು ಆಂದ್ರಪ್ರದೇಶದಲ್ಲಿ 1971 ರಂದು ಜನಿಸಿದವರು.

ಆದರೆ ಬೆಳೆದಿದ್ದು ತಮಿಳುನಾಡಿನ ಚೆನ್ನೈ ನಲ್ಲೇ. ವೃತ್ತಿಯಾಗಿ ಅವರು ಮೊದಲು ಪ್ರಾರಂಭಿಸಿದ್ದು ಮೆಕ್ಯಾನಿಕ್ ಆಗಿ. ಅಜಿತ್ ಕುಮಾರ್ ರವರಿಗೆ ಕಾರ್ ರೇಸಿಂಗ್ ನಲ್ಲಿ ಎಲ್ಲಿಲ್ಲದ ಆಸಕ್ತಿ. ಹಾಗಾಗಿ ಕಾರ್ ರೇಸಿಂಗ್ ಕುರಿತಂತೆ ಸದಾ ಕನಸು ಕಾಣುತ್ತಿದ್ದರು. ಆನಂತರ ದಿನಗಳಲ್ಲಿ ಕಾರ್ ರೇಸಿಂಗ್ ಕುರಿತಂತೆ ಹಣ ಹೂಡಲು ಅದಕ್ಕೆ ಪರ್ಯಾಯವಾಗಿ ದುಡಿಯಲು ಉಡುಪು ರಫ್ತು ಕಂಪೆನಿ ಹಾಗೂ ಸಣ್ಣಪುಟ್ಟ ಜಾಹೀರಾತಿನಲ್ಲಿ ಕೆಲಸ ಮಾಡಿ ಬಂದ ಹಣವನ್ನು ಕಾರ್ ರೇಸಿಂಗ್ ನಲ್ಲಿ ಹೂಡಿದರು.

ಕಾರ್ ರೇಸಿಂಗ್ ನಲ್ಲಿ ಹಣವನ್ನು ಸಹ ಕಳೆದುಕೊಂಡರು. ಆನಂತರ ದಿನಗಳಲ್ಲಿ ಅಜಿತ್ ರವರು ಜಾಹೀರಾತು ಸಂಸ್ಥೆಗಳ ಮೂಲಕ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದು. ಅಲ್ಲಿಂದ ಅಜಿತ್ ರವರಿಗೆ ಚಿತ್ರರಂಗದ ಕುರಿತಂತೆ ಆಸಕ್ತಿ ಮೂಡಲು ಪ್ರಾರಂಭವಾಯಿತು. ಅಜಿತ್ ಕುಮಾರ್ ರವರು ತಮ್ಮ 21ನೇ ವಯಸ್ಸಿನಲಿ ತಮ್ಮ ಮೊದಲ ಚಿತ್ರ ತೆಲುಗಿನಲ್ಲಿ ಪ್ರೇಮ ಪುಸ್ತಗಂ ಎಂಬುದಾಗಿ ಮಾಡಿದರು. ಕ್ರಮೇಣವಾಗಿ ಬರಬರುತ್ತಾ ತಮಿಳು ಚಿತ್ರರಂಗದಲ್ಲಿ ಕಕಡ ನಟಿಸಿ ತಮಿಳು ಚಿತ್ರರಂಗದ ಭರವಸೆಯ ಯುವ ನಟರಾಗಿ ಪರಿಚಿತರಾದರು.

ಅಂದು ಆ ಕಾಲದಲ್ಲಿದ್ದ ಖ್ಯಾತ ನಟರು ಚಿತ್ರಗಳಿಗೂ ಸಹ ಅಜಿತ್ ಚಿತ್ರಗಳು ಸೆಡ್ಡು ಹೊಡೆಯಲು ಪ್ರಾರಂಭಿಸಿದವು. 1995ರಲ್ಲಿ ಅಜಿತ್ ನಟನೆಯ ಅಸೈ ಚಿತ್ರ ಅಜಿತ್ ರವರಿಗೆ ಮೊದಲು ಅದ್ಭುತ ಯಶಸ್ಸನ್ನು ತಂದುಕೊಟ್ಟಿತು. ಇದಾದ ನಂತರ ಅಜಿತ್ ನಟಿಸಿದ ಎಲ್ಲಾ ಚಿತ್ರಗಳು ಒಂದೊಂದಾಗಿ ಬಾಕ್ಸ್ ಆಫೀಸ್ ನಲ್ಲಿ ನಂಬಲಾರದ ದಾಖಲೆಗಳನ್ನು ನಿರ್ಮಿಸುತ್ತಾ ಹೋಯಿತು. ಈಗ ಅಜಿತ್ ರವರು ತಮಿಳು ಚಿತ್ರರಂಗದಲ್ಲಿ ಇರುವ ದೊಡ ಹೆಸರುಗಳಲ್ಲಿ ಒಬ್ಬರಾಗಿದ್ದಾರೆ‌. ಸ್ವಂತ ಪರಿಶ್ರಮ ಹಾಗೂ ದೃಡ ನಿರ್ಧಾರದಿಂದ ಅಜಿತ್ ರವರು ಇಂದೀ ಈ ಸ್ಥಾನದಲ್ಲಿ ನಿಂತಿದ್ದಾರೆ. ನೀವೂ ಕೂಡ ಅಜಿತ್ ಕುಮಾರ್ ರವರ ಅಭಿಮಾನಿಗಳಾಗಿದ್ದಾರೆ ನಿಮ್ಮ ನೆಚ್ಚಿನ ನಟನ ಕಹಾನಿ ಕೇಳಿ ನಿಮಗೆ ಏನು ಅನ್ನಿಸಿತು ಎಂದು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

Comments are closed.