ಪುಟ್ಟಗೌರಿ ಮದುವೆ ಖ್ಯಾತಿಯ ಪುಟ್ಟ ಮಹೇಶ್ ಇದೀಗ ಹೇಗಿದ್ದಾರೆ ಗೊತ್ತಾ? ಅವರ ತಂದೆ ಕೂಡ ಖ್ಯಾತ ನಟರಂತೆ.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಧಾರವಾಹಿಗಳು ಇದೀಗ ಮುಕ್ತಾಯಗೊಂಡಿದ್ದು ಕೂಡ ಅವುಗಳ ಒಂದು ಪ್ರತಿಬಿಂಬ ಇಂದಿಗೂ ಕೂಡ ಜನರ ಮನಸ್ಸಿನಲ್ಲಿ ಕಂಡುಬರುತ್ತದೆ. ಇನ್ನು ಇಂತಹ ಆದಷ್ಟು ಧಾರವಾಹಿಗಳು ಸಾಕಷ್ಟು ಸಂಚಿಕೆಗಳ ಮೂಲಕ ಜನರಿಗೆ ಮನರಂಜನೆ ನೀಡಿ ಇಂದಿಗೂ ಕೂಡ ಅಚ್ಚಳಿಯದೇ ಉಳಿದಿವೆ. ಇನ್ನು ಇಂತಹ ಧಾರಾವಾಹಿಗಳಲ್ಲಿ ‘ಪುಟ್ಟಗೌರಿ ಮದುವೆ’ ಧಾರಾವಾಹಿ ಕೂಡ ಒಂದು. ಇನ್ನು ಇದು ಹಿಂದಿ ಭಾಷೆಯ ‘ಬಾಲಿಕಾವಧು’ ಎಂಬ ಧಾರವಾಹಿ ರಿಮೇಕ್ ಆಗಿದೆ.

2012 ಮಾರ್ಚ್ ತಿಂಗಳಿನಲ್ಲಿ ಪ್ರಸಾರವಾದ ‘ಪುಟ್ಟಗೌರಿ ಮದುವೆ’ ‘ಮಂಗಳ ಗೌರಿ ಮದುವೆ’ ಎಂಬ ಮರುನಾಮಕರಣದೊಂದಿಗೆ ಇಂದಿಗೂ ಪ್ರಸಾರವಾಗುತ್ತಿದೆ. ಈ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ರಂಜನಿ ರಾಘವನ್, ರಕ್ಷಿತ್ ಗೌಡ, ನಮ್ರತಾ ಗೌಡ, ಚಂದ್ರಕಲಾ ಮೋಹನ್ ಸೇರಿದಂತೆ ಸುನಿಲ್ ಪೌರಾಣಿಕ್ ಹಾಗೂ ಇತರೆ ಫೇಮಸ್ ಕಲಾವಿದರು ಸಾಕಷ್ಟು ಪಾತ್ರಗಳನ್ನು ಮಾಡಿದ್ದಾರೆ. ಇನ್ನು ಈ ಧಾರಾವಾಹಿಯಲ್ಲಿ ಪುಟ್ಟ ಮಹೇಶನ್ ಆಗಿ ಕಾಣಿಸಿಕೊಂಡ ಬಾಲನಟನ ತಂದೆ ಕೂಡ ಖ್ಯಾತನಟರಂತೆ. ಹಾಗಾದರೆ ಅವರು ಯಾರು? ಬಾಲ ಮಹೇಶ್ ಈಗ ಹೇಗಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಬಾಲ ಮಹೇಶನ್ ಆಗಿ ನಟಿಸಿದ್ದ ರಕ್ಷಿತ್ ಗೌಡ ಅವರು ಅದೇ ದಾರವಾಹಿಯಲ್ಲಿ ದೊಡ್ಡಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸುನಿಲ್ ಪುರಾಣಿಕ್ ಅವರ ಸುಪುತ್ರ. ಹೌದು ರಕ್ಷಿತ್ ಗೌಡ ನಿಜಜೀವನದಲ್ಲಿ ಸುನಿಲ್ ಪುರಾಣಿಕ್ ಅವರ ಮಗ. ಇನ್ನು ಅವನ ನಿಜವಾದ ಹೆಸರು ಸಮೀರ್ ಪುರಾಣಿಕ್. ಇನ್ನು ತಂದೆ ಹಾಗೂ ಮಗ ಒಂದೇ ಧಾರವಾಹಿಯಲ್ಲಿ ಅಭಿನಯಿಸಿರುವುದು ವಿಶೇಷ. ಇದೀಗ ಸುನಿಲ್ ಪುರಾಣಿಕ್ ಅವರು ಕರ್ನಾಟಕ ಫಿಲಂ ಅಕಾಡೆಮಿ ಚೇರ್ಮನ್. ಸಮೀರ್ ಪುರಾಣಿಕ್ ಅವರು ತಂದೆಯೊಂದಿಗೆ ನಟನಾ ಕ್ಷೇತ್ರಕ್ಕೆ ಬಂದು ಪುಟ್ಟಗೌರಿ ಮದುವೆ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದರು.

ಇನ್ನು ಸಮೀರ್ ಪುರಾಣಿಕರು ತಮ್ಮ ನಟನೆಯ ಬಗ್ಗೆ ಮಾತನಾಡಿದ್ದು, ನಾನು ಬಾಲ್ಯದಿಂದಲೇ ಅಪ್ಪನೊಂದಿಗೆ ಶೂಟಿಂಗ್ ಗೆ ತೆರಳುತ್ತಿದ್ದೆ. ಅಪ್ಪ ನಟಿಸುವಾಗ ನಾನು ದೂರದಲ್ಲಿ ಕುಳಿತು ಎಲ್ಲವನ್ನೂ ನೋಡುತ್ತಿದ್ದೆ. ನಾನು ಲೈಟ್ಸ್ ಹಾಗೂ ಕ್ಯಾಮೆರಾಗಳ ಮಧ್ಯೆ ಬೆಳೆದೆ ಎಂದು ಹೇಳಬಹುದು. ನನಗೆ ನನ್ನ ತಂದೆಯೇ ದೊಡ್ಡ ಸ್ಪೂರ್ತಿ. ನನ್ನನ್ನು ನಾನು ತೆರೆಮೇಲೆ ನೋಡಲು ಬಹಳ ಆಸೆ ಪಡುತ್ತಿದ್ದೆ. ನನಗೆ ನನ್ನದೇ ಆದ ಗುರುತು ಬೇಕು. ಇನ್ನು ಈ ವಿಷಯದಲ್ಲಿ ನನಗೆ ಸಂಪೂರ್ಣವಾದ ಸ್ವಾತಂತ್ರ್ಯ ಇದೆ ಎಂದು ಅವರು ಹೇಳಿದ್ದಾರೆ.

ಪುಟ್ಟಗೌರಿ ಮದುವೆ ಧಾರಾವಾಹಿ ಆಡಿಶನ್ ಗಾಗಿ ಧಾರವಾಹಿ ತಂಡ ನಮ್ಮ ಸ್ಕೂಲ್ ಗೆ ಬಂದಿತ್ತು. ಅದೇ ಸರಿಯಾದ ಸಮಯ ಎಂದುಕೊಂಡು ನಾನು ಆಡಿಷನ್ ನಲ್ಲಿ ಭಾಗಿಯಾಗಿ ಸೆಲೆಕ್ಟ್ ಕೂಡ ಆದೆ. ಆದರೆ ಅಲ್ಲಿಯವರೆಗೂ ಕೂಡ ನಾನು ಸುನಿಲ್ ಪುರಾಣಿಕ್ ಅವರ ಮಗ ಎಂದು ಯಾರಿಗೂ ಗೊತ್ತಿರಲಿಲ್ಲ. ಧಾರಾವಾಹಿ ಶೂಟಿಂಗ್ ಆರಂಭವಾದ ಬಳಿಕ ನಾನು ಸ್ಕೂಲಿಗೆ ರಜೆ ಹಾಕಬೇಕಾಗಿತ್ತು. ಈ ಸಮಯದಲ್ಲಿ ನನ್ನ ಸ್ನೇಹಿತರು ನನಗೆ ಬಹಳ ಪ್ರೋತ್ಸಾಹ ನೀಡಿದರು.

ನಾನು ತೆರೆ ಮೇಲೆ ಮಹೇಶನಾಗಿ ನಟಿಸಿದರೆ ನನ್ನ ಅಪ್ಪ ದೊಡ್ಡಪ್ಪನಾಗಿ ನಟಿಸಿದ್ದರು. ಯಾವ ಸಂಬಂಧವೇ ಆಗಿರಲಿ ತೆರೆಮೇಲೆ ಪ್ರೊಫೆಷನಲ್ ಆಗಿರಬೇಕು. ಆ ಸಮಯದಲ್ಲಿ ಅವರು ಅಪ್ಪ, ಮಗ, ಅಣ್ಣತಮ್ಮ ಎಂಬ ಸೆಂಟಿಮೆಂಟ್ ಯಾವತ್ತಿಗೂ ಇರಬಾರದು ಎಂದು ನನ್ನ ತಂದೆ ಹೇಳಿಕೊಡುತ್ತಿದ್ದರು. ಇನ್ನು ಡಿಗ್ರಿ ಮುಗಿದ ಮೇಲೆ ನಾನು ಮತ್ತೆ ತೆರೆ ಮೇಲೆ ವಾಪಸ್ ಬರುತ್ತೇನೆ. ಆದರೆ ಒಂದು ಒಳ್ಳೆಯ ಪತ್ರಕ್ಕೆ ಆದ್ಯತೆ ನೀಡುತ್ತೇನೆ ಎಂದು ಸಮೀರ್ ಪುರಾಣಿಕ್ ಅವರು ಹೇಳುತ್ತಾರೆ.

Comments are closed.