ಅಭಿಮಾನಿಗಳಿಗೆ ಒಮ್ಮೆಲೇ ಶಾಕ್ ನೀಡಿದ ರಶ್ಮಿಕಾ, ನಾನು ಸಿನಿಮಾ ಮಾಡಬಾರದು ಎಂದು ಕೊಂಡಿದ್ದೆ, ಆದರೆ ಆಮೇಲೆ ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ರಶ್ಮಿಕಾ ಮಂದಣ್ಣ ಸದ್ಯದ ನ್ಯಾಶನಲ್ ಕ್ರಶ್. ಕನ್ನಡದ ಕಿರಿಕ್ ಪಾರ್ಟಿಯಿಂದ ಶುರುವಾದ ಇವರ ಸಿನಿ ಜರ್ನಿ, ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಹೀಗೆ ಪ್ಯಾನ್ ಇಂಡಿಯಾ ಗುರುತಿಸುವ ಹಿರೋಯಿನ್ ಆಗಿ ಬೆಳೆದಿದ್ದಾರೆ.ದೊಡ್ಡ ದೊಡ್ಡ ಬ್ರಾಂಡ್ ಗಳ ಜಾಹೀರಾತುಗಳಿಗೆ ಮಾಡೆಲ್ ಆಗಿ ಕೆಲಸ ಮಾಡಿದ್ದಾರೆ.ಸದ್ಯ ಪುಷ್ಪ ಸಿನಿಮಾದ ಸಕ್ಸಸ್ ನಲ್ಲಿರುವ ರಶ್ಮಿಕಾ ಮಂದಣ್ಣ ಇತ್ತಿಚೆಗೆ ತಮ್ಮ ಸಿನಿ ಜರ್ನಿ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ರಶ್ಮಿಕಾ ನಟನೆಗಿಂತ ಹೆಚ್ಚು ಫೇಮಸ್ ಆಗಿರುವುದು ಟ್ರೋಲ್ ಗಳಿಂದ. ಈ ಬಗ್ಗೆ ನಿಮಗೆ ಬೇಸರವಿಲ್ಲವೇ ಎಂದು ಪ್ರಶ್ನಿಸಿದಾಗ ರಶ್ಮಿಕಾ ತಮ್ಮ ಮನದಾಳದ ನೋವನ್ನು ತೋಡಿಕೊಂಡಿದ್ದಾರೆ. ಎಲ್ಲಾ ಟ್ರೋಲರ್ ಗಳು ನನ್ನನ್ನ ನೆಗೆಟಿವ್ ಆಗಿ ನಿಂದಿಸಿದ್ದಾರೆ. ಅವರ ಟ್ರೋಲ್ ಗಳಿಂದ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಸಿನಿಮಾ ಇಂಡಸ್ಟ್ರಿಯನ್ನೇ ಬಿಡಲು ನಿರ್ಧರಿಸಿದ್ದೆ. ನನ್ನ ಕ್ಯಾರೆಕ್ಟರ್ ಬಗ್ಗೆ, ಬಾಡಿ ಶೇಮಿಂಗ್ ಬಗ್ಗೆ, ವಯಸ್ಸಿನ ಬಗ್ಗೆ ಎಲ್ಲಾ ಬಹಳ ಕೀಳಾಗಿ ಟ್ರೋಲ್ ಮಾಡುತ್ತಿದ್ದರು. ಅದರ ಅರ್ಥ ನನಗೆ ಗೊತ್ತಾಗುತ್ತಿರಲಿಲ್ಲ. ಕೆಲವೊಮ್ಮೆ ನಮ್ಮ ಅಮ್ಮನಿಗೆ ತೋರಿಸಿ ಅದರ ಅರ್ಥ ಕೇಳುತ್ತಿದ್ದೆ ಎಂದಿದ್ದಾರೆ.

rashmika 36 | ಅಭಿಮಾನಿಗಳಿಗೆ ಒಮ್ಮೆಲೇ ಶಾಕ್ ನೀಡಿದ ರಶ್ಮಿಕಾ, ನಾನು ಸಿನಿಮಾ ಮಾಡಬಾರದು ಎಂದು ಕೊಂಡಿದ್ದೆ, ಆದರೆ ಆಮೇಲೆ ನಡೆದ್ದದೇನು ಗೊತ್ತೇ??
ಅಭಿಮಾನಿಗಳಿಗೆ ಒಮ್ಮೆಲೇ ಶಾಕ್ ನೀಡಿದ ರಶ್ಮಿಕಾ, ನಾನು ಸಿನಿಮಾ ಮಾಡಬಾರದು ಎಂದು ಕೊಂಡಿದ್ದೆ, ಆದರೆ ಆಮೇಲೆ ನಡೆದ್ದದೇನು ಗೊತ್ತೇ?? 2

ಇನ್ನು ನಟ ರಕ್ಷಿತ್ ಶೆಟ್ಟಿಯವರ ಜೊತೆಗಿನ ಸಂಭಂದ ಮುರಿದು ಬಿದ್ದಿದ್ದರ ಬಗ್ಗೆ ಮಾತನಾಡಿರುವ ರಶ್ಮಿಕಾ, ನಾನು ಜೀವನದಲ್ಲಿ ಕೆಲವರನ್ನ ಅತಿಯಾಗಿ ಪ್ರೀತಿಸಿದ್ದೆ. ಆದರೇ ಅವರು ಯಾರು ನನ್ನನ್ನ ಅರ್ಥ ಮಾಡಿಕೊಳ್ಳಲಿಲ್ಲ. ಅವರು ಏನೇನೋ ಕಲ್ಪಿಸಿಕೊಂಡು ನನ್ನಿಂದ ದೂರವಾದರು ಎಂದು ಹೇಳಿದರು. ಟ್ರೋಲ್ ಗಳ ಬಗ್ಗೆ ನಾನೀಗ ಅತಿಯಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ. ಬದಲು ಟ್ರೋಲರ್ ಗಳ ಬಗ್ಗೆ ಮರುಕವುಂಟಾಗುತ್ತಿದೆ. ದಿನವೀಡಿ ನನ್ನ ಬಗ್ಗೆ ಟ್ರೋಲ್ ಮಾಡುತ್ತಾ ಸಮಯ ಕಳೆಯುತ್ತಾರಲ್ವಾ, ಇವರು ಹೊಟ್ಟೆ ಪಾಡಿಗೆ ಏನು ಮಾಡುತ್ತಾರೆಂಬುದು ನನಗೆ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಹಲವಾರು ದಿನಗಳಿಂದ ಕುತೂಹಲವುಳಿಸಿಕೊಂಡಿದ್ದ ಪ್ರಶ್ನೆಗೆ ರಶ್ಮಿಕಾ ಮಂದಣ್ಣ ಉತ್ತರ ನೀಡಿದ್ದಾರೆ ಎಂದು ಹೇಳಬಹುದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ

Comments are closed.