News from ಕನ್ನಡಿಗರು

ಬಹಿರಂಗವಾಗಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣದ ಕುರಿತಂತೆ ಬೇಸರ ವ್ಯಕ್ತಪಡಿಸಿದ ರವೀನ, ಯಾಕಂತೆ ಗೊತ್ತೇ??

70

ನಮಸ್ಕಾರ ಸ್ನೇಹಿತರೇ ಇಡೀ ಭಾರತೀಯ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಕೆಜಿಎಫ್ ಚಾಪ್ಟರ್ 2 ಚಿತ್ರ ಮಾಡುತ್ತಿರುವಷ್ಟು ಸದ್ದು ಯಾವ ಚಿತ್ರವೂ ಕೂಡ ಮಾಡುತ್ತಿಲ್ಲ ಎಂಬುದನ್ನು ಕನ್ನಡಿಗರಾಗಿ ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದೆ. ದೇಶ-ವಿದೇಶದಲ್ಲಿ ಎಲ್ಲೇ ನೋಡಿದರೂ ಕೂಡ ಸಿನಿಪ್ರೇಮಿಗಳು ಕಾಯುತ್ತಿರುವುದು ನಮ್ಮ ಕನ್ನಡದ ಹೆಮ್ಮೆಯ ಚಿತ್ರವಾಗಿರುವ ಕೆಜಿಎಫ್ ಚಾಪ್ಟರ್ 2 ಕ್ಕಾಗಿ.

ಕೆಜಿಎಫ್ ಚಾಪ್ಟರ್ 2 ಚಿತ್ರದ ಪ್ರಮುಖ ಜೀವಾಳ ವಾಗಿರುವುದು ಚಿತ್ರದ ನಿರ್ದೇಶಕ ನಾಗಿರುವ ಪ್ರಶಾಂತ್ ನೀಲ್ ಹಾಗೂ ಚಿತ್ರದ ನಾಯಕ ನಟನಾಗಿರುವ ರಾಕಿಂಗ್ ಸ್ಟಾರ್ ಯಶ್ ರವರು. ಇವರಿಬ್ಬರನ್ನು ಹೊರತುಪಡಿಸಿದರೆ ಪ್ರಮುಖವಾಗಿ ಸುದ್ದಿಯಾಗುತ್ತಿರುವುದು ರವೀನ ತಂಡನ್ ಹಾಗೂ ಸಂಜಯ್ ದತ್ ಅವರು. ನಾವು ಈಗ ಮಾತನಾಡಲು ಹೊರಟಿರುವುದು ಬಾಲಿವುಡ್ ಬೆಡಗಿ ಆಗಿರುವ ರವೀನ ತಂಡನ್ ಅವರ ಕುರಿತಂತೆ. ರವೀನ ತಂಡನ್ ರವರು ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ರಮಿಕ ಸೆನ್ ಎಂಬ ಪ್ರಧಾನಮಂತ್ರಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರದಲ್ಲಿ ಭಾಗಿಯಾಗುತ್ತಿರುವ ದಕ್ಕಾಗಿ ರವೀನ ತಂಡನ್ ರವರು ಸಾಕಷ್ಟು ಬಾರಿ ಹೆಮ್ಮೆಯನ್ನು ವ್ಯಕ್ತಪಡಿಸಿದ್ದರು. ಆದರೆ ಈ ಬಾರಿ ಚಿತ್ರದ ಕುರಿತಂತೆ ಬೇಸರವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ಈ ಬೇಸರಕ್ಕೆ ಕಾರಣ ಏನು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ ಬನ್ನಿ.

ಬೇಸರಕ್ಕೆ ಕಾರಣ ಇನ್ನೇನು ಅಲ್ಲ ಗೆಳೆಯರೇ ರವೀನ ತಂಡನ್ ಹಾಗೂ ಸಂಜಯ್ ದತ್ ರವರು ಬಾಲಿವುಡ್ ಚಿತ್ರಗಳಲ್ಲಿ ಹಲವಾರು ಬಾರಿ ಒಟ್ಟಿಗೆ ನಟಿಸಿದ್ದರು. ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಕೂಡ ರವೀನ ತಂಡನ್ ರಮಿಕ ಸೆನ್ ಪಾತ್ರದಲ್ಲಿ ಹಾಗೂ ಸಂಜಯ್ ದತ್ ಅಧೀರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ರವೀನ ತಂಡನ್ ರವರ ಬೇಸರಕ್ಕೆ ಕಾರಣವಾಗಿರುವ ಒಂದೇ ಒಂದು ವಿಚಾರವೆಂದರೆ ಅವರಿಬ್ಬರು ಒಂದೇ ದೃಶ್ಯದಲ್ಲಿ ಒಟ್ಟಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇಷ್ಟು ಮಾತ್ರವಲ್ಲದೆ ಒಂದೇ ಸಮಯಕ್ಕೆ ಇಬ್ಬರಿಗೂ ಒಟ್ಟಿಗೆ ಚಿತ್ರೀಕರಣ ಕೂಡ ನಡೆದಿಲ್ಲ. ಹೀಗಾಗಿ ಮತ್ತೊಮ್ಮೆ ಸಂಜಯ್ ದತ್ ರವರೊಂದಿಗೆ ಒಂದೇ ದೃಶ್ಯದಲ್ಲಿ ಒಟ್ಟಿಗೆ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಕಾಣಿಸಿಕೊಳ್ಳುವ ಅವಕಾಶ ಮಿಸ್ ಆಗಿದೆ ಎಂಬುದಾಗಿ ರವೀನ ತಂಡನ್ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ಕುರಿತಂತೆ ಸಿನಿ ಪಂಡಿತರಲ್ಲಿ ಹಾಗೂ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದ್ದು ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

Leave A Reply

Your email address will not be published.